Saturday, April 19, 2025
Google search engine

Homeಸ್ಥಳೀಯಸರ್ಕಾರಿ ಶಾಲೆಗಳಿಗೆ ಸೌಲಭ್ಯ ಒದಗಿಸಿ

ಸರ್ಕಾರಿ ಶಾಲೆಗಳಿಗೆ ಸೌಲಭ್ಯ ಒದಗಿಸಿ


ಮೈಸೂರು:ರಾಜ್ಯದ ಶೇ.೪೩ರ? ಸರ್ಕಾರಿ ಶಾಲೆಗಳಲ್ಲಿ ಇಂದಿಗೂ ಆಟದ ಮೈದಾವೇಇಲ್ಲ. ಹೀಗಾಗಿ ಸರ್ಕಾರಿ ಶಾಲೆಗಳಿಗೆ ಅಗತ್ಯ ಮೂಲ ಸೌಲಭ್ಯಕಲ್ಪಿಸಬೇಕಿದೆಎಂದು ಶಿಕ್ಷಣ ತಜ್ಞ ಶೇ?ಗಿರಿ ಮಧುಸೂದನ್ ತಿಳಿಸಿದರು.
ಮಾನಸಗಂಗೋತ್ರಿಯ ವಿಜ್ಞಾನ ಭವನದಲ್ಲಿ ಪತ್ರಿಕೋದ್ಯಮ ಹಾಗೂ ಸಂವಹನ ವಿಭಾಗ, ಹೈದರಾಬಾದ್‌ನಯೂನಿಸ್ ಸಹಯೋಗದಲ್ಲಿ ಸಾಂಕ್ರಾಮಿಕರೋಗದ ನಂತರ ಮಕ್ಕಳ ಶಿಕ್ಷಣ ಮತ್ತುಕಲಿಕೆಯಚೇತರಿಕೆ ಎಂಬ ವಿ?ಯದಕುರಿತ ೨ ದಿನದಕಾರ್ಯಾಗಾರದಲ್ಲಿ ಮಾತನಾಡಿದಅವರು, ಮಕ್ಕಳ ವ್ಯಕ್ತಿತ್ವ ಬೆಳವಣಿಗೆಗೆ ಶಕ್ಷಣಿಕ ವಿ?ಯದಜತೆಗೆದೈಹಿಕ ಶಿಕ್ಷಣವೂ ಅಗತ್ಯ. ಆದರೆ, ರಾಜ್ಯದ ಸರ್ಕಾರಿ ಶಾಲೆಗಳು ಆಟದ ಮೈದಾನ ಸೇರಿದಂತೆ ಮೂಲ ಸೌಕರ್ಯಗಳ ಕೊರತೆಯಿಂದಾಗಿ ನರಳುತ್ತಿವೆ. ಇದರಿಂದ ಮಕ್ಕಳ ದೈಹಿಕ ಸದೃಢತೆಕ್ಷೀಣಿಸುತ್ತಿದೆ. ಕೋವಿಡ್ ಸಂದರ್ಭದಲ್ಲಿ ಮಕ್ಕಳು ಯಾವುದೇದೈಹಿಕಕಸರತ್ತುಇಲ್ಲದೆ ಬೊಜ್ಜಿನ ಸಮಸ್ಯೆಕಾಡಿತ್ತು. ಜತೆಗೆ ಮಕ್ಕಳಿಗೆ ಶಾಲೆಯಲ್ಲಿಆಟವಾಡುವ ಪೂರಕ ವಾತಾವರಣಇಲ್ಲವಾಗಿದೆ. ಈ ಎಲ್ಲ ಸಮಸ್ಯಗಳ ಬಗ್ಗೆ ಯಾರೂ ಹೆಚ್ಚು ಗಮನ ಹರಿಸುತ್ತಿಲ್ಲ. ಇದರಿಂದ ಸರ್ಕಾರಿ ಶಾಲಾ ಮಕ್ಕಳ ಶೈಕ್ಷಣಿಕ, ಮಾನಸಿಕ ಬೆಳವಣಿಗೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆಎಂದು ವಿ?ದ ವ್ಯಕ್ತಪಡಿಸಿದರು.
ಉತ್ತರ ಭಾರತದ ರಾಜ್ಯಗಳಿಗೆ ಹೋಲಿಕೆ ಮಾಡಿದರೆಅಭಿವೃದ್ಧಿ ವಿಚಾರದಲ್ಲಿಕರ್ನಾಟಕ ಸ್ವಲ್ಪ ಮಟ್ಟಿಗೆ ಪ್ರಗತಿ ಹೊಂದಿದರಾಜ್ಯವಾದರೂ ಶೈಕ್ಷಣಿಕಕ್ಷೇತ್ರಕ್ಕೆ ಸಂಬಂಧಿಸಿದಂತೆ ನೂರಾರು ಸಮಸ್ಯೆಗಳಿವೆ. ರಾಜ್ಯದಲ್ಲಿ ೫೦ ಸಾವಿರ ಸರ್ಕಾರಿ ಶಾಲೆಗಳು ಇದ್ದು, ಶಾಲಾ ಶಿಕ್ಷಕರು, ಪೋ?ಕರ ನಡುವೆ ಒಳ್ಳೆಯ ಸಂಬಂಧಏರ್ಪಡಬೇಕು. ಸಮುದಾಯವೂಕೂಡ ಮಕ್ಕಳ ಬೆಳವಣಿಗೆಗೆ ಮಾರ್ಗದರ್ಶನ ನೀಡಿ, ಮಕ್ಕಳ ಕಲಿಕೆ ಬಗ್ಗೆ ಆಸಕ್ತಿ ವಹಿಸಬೇಕು ಎಂದು ತಿಳಿಸಿದರು.
ಮೊಬೈಲ್‌ಒಂದುಅಫೀಮು: ಕೋವಿಡ್‌ಕಾರಣದಿಂದ ವಿದ್ಯಾರ್ಥಿಗಳ ಕೈಗೆ ಮೊಬೈಲ್ ಸಿಕ್ಕ ಬಳಿಕ ಅವರ ಓದಿನ ಆಸಕ್ತಿ ಕ್ಷೀಣಿಸಿದೆ. ಮೊಬೈಲ್‌ಕೂಡಒಂದುರೀತಿಡ್ರಗ್‌ಅಡಿಕ್ಷನ್‌ಇದ್ದಂತೆ. ಒಮ್ಮೆಇದರಲ್ಲಿ ಮುಳುಗಿದರೆ ಮುಗಿಯಿತುಅದರಿಂದ ಹೊರ ಬರುವುದು ಬಹಳ ಕ?. ಪೋ?ಕರು ಈ ಸಮಸ್ಯೆ ಬಗ್ಗೆ ಎಚ್ಚರವಹಿಸಿ, ಮಕ್ಕಳನ್ನು ಓದಿನ ಕಡೆಗೆ ಆಸಕ್ತಿ ವಹಿಸುವಂತೆ ತಿಳಿ ಹೇಳಬೇಕು. ಇಂದಿನ ಮಕ್ಕಳನ್ನು ಆಲೋಚನೆಗೆ ಹಚ್ಚುವಂತಹಯಾವುದೇ ಶೈಕ್ಷಣಿಕ ಚಟುವಟಿಕೆಗಳು ಶಾಲೆಯಲ್ಲಿ ನಡೆಯುತ್ತಿಲ್ಲ. ಇಂಟರ್ ನೆಟ್ ನಲ್ಲಿ ಸುಲಭಕ್ಕೆ ಸಿಗುವಂತಹ ಮಾಹಿತಿ ಆಧರಿಸಿ ಪ್ರಾಯೋಗಿಕ ಕೆಲಸಗಳನ್ನು ನೀಡಲಾಗುತ್ತಿದೆ. ಇದಕ್ಕೆ ಹೆಚ್ಚಿನ ಅಂಕಗಳನ್ನು ನೀಡಲಾಗುತ್ತಿದೆಎಂದು ಬೇಸರ ವ್ಯಕ್ತಪಡಿಸಿದರು.
ಶಾಸಕ ಕೆ.ಹರೀಶ್‌ಗೌಡ ಮಾತನಾಡಿ, ಇಂದು ಶಿಶುವಿಹಾರ, ಅಂಗನವಾಡಿ ಕೇಂದ್ರಗಳು ಕಣ್ಮರೆಯಾಗುತ್ತಿವೆ. ಅವುಗಳ ಪುನರ್ ಸ್ಥಾಪನೆ ಮಾಡಲುಯೂನಿಸೆಫ್‌ಆರ್ಥಿಕ ನೆರವು ನೀಡುವುದುಅತ್ಯಗತ್ಯವಾಗಿದೆ. ಚಾಮರಾಜಕ್ಷೇತ್ರದಲ್ಲಿ ೨೫ ಸರ್ಕಾರಿಕಿರಿಯ ಪ್ರಾಥಮಿಕ ಶಾಲೆಗಳು, ೧೬ ಹಿರಿಯ ಪ್ರಾಥಮಿಕ ಶಾಲೆಗಳು ಸೇರಿ ೮ ಪಿಯು ಕಾಲೇಜುಗಳಿವೆ. ಇಲ್ಲಿ ವಿದ್ಯಾಭ್ಯಾಸ ಮಾಡುವ ಬಹತೇಕ ವಿದ್ಯಾರ್ಥಿಗಳಿಗೆ ಆರ್ಥಿಕ ಸಂಕ?ವಿದೆ. ಈ ಶಾಲೆಗಳ ಸಮಸ್ಯೆ ಬಗೆಹರಿಸುವುದಕ್ಕೆ ಶಕ್ತಿ ಮೀರಿ ಪ್ರಯತ್ನಿಸುತ್ತೇನೆ. ಅಲ್ಲದೇ ವಿವಿಯಜತೆಗೂಡಿಕಾಲೇಜುಅಭಿವೃದ್ಧಿ ಮಂಡಳಿ ಸ್ಥಾಪಿಸುವುದಾಗಿ ಹೇಳಿದರು.
ಹೈದರಾಬಾದ್‌ಯುನಿಸೆಫ್‌ನ ಪ್ರಸೂನ್ ಸೇನ್ ಮಾತನಾಡಿ, ಯುನಿಸೆಫ್ ಮಕ್ಕಳ ಹಕ್ಕುಗಳ ಬಗ್ಗೆ ಮಾತನಾಡುತ್ತದೆ. ಕೋವಿಡ್ ಸಮಯದಲ್ಲಿ ಮಕ್ಕಳ ಶಿಕ್ಷಣ, ಆರೋಗ್ಯದ ಮೇಲೆ ಗಂಭಿರ ಪರಿಣಾಮ ಬೀರಿತ್ತು. ಆ ಸಮಯದಲ್ಲಿ ಸಾಕ? ಮಕ್ಕಳು ಶಾಲೆ ಬಿಟ್ಟರು. ಬಾಲ ಕಾರ್ಮಿಕ ಪದ್ಧತಿ, ಮಕ್ಕಳ ಸಾಗಣೆ ಹೆಚ್ಚಾಯಿತು. ಮಕ್ಕಳು ಮನೆಯಲ್ಲಿಯೇಇದ್ದ ಪರಿಣಾಮಇದು ಹೆಚ್ಚಾಯಿತು. ಈ ನಿಟ್ಟಿನಲ್ಲಿಯೂನಿಸ್ ಮಕ್ಕಳ ಹಕ್ಕುಗಳ ರಕ್ಷಣೆಗೆ ಪಣತೊಟ್ಟಿತುಎಂದರು.
ಪತ್ರಿಕೋದ್ಯಮ ಹಾಗೂ ಸಂವಹನ ವಿಭಾಗದ ಮುಖ್ಯಸ್ಥೆ ಪ್ರೊ.ಎಂ.ಎಸ್.ಸಪ್ನಾ, ಪ್ರೊ.ಮಮತಾ.ಎನ್, ಸಂಶೋಧನಾ ವಿದ್ಯಾರ್ಥಿಗಳಾದ ರಾಕೇಶ್, ಮಂಜುನಾಥ್ ಸೇರಿದಂತೆಇತರರುಇದ್ದರು.

RELATED ARTICLES
- Advertisment -
Google search engine

Most Popular