ಮಂಡ್ಯ: ಅಂಬರೀಶ್ ಅಣ್ಣನ ಮನೆಗೆ ಎಂಪಿ ಸ್ಥಾನ ಮುಖ್ಯ ಅಲ್ಲ ಜನರು ಮುಖ್ಯ ಎಂದು ನಟ ಅಭಿಷೇಕ್ ಅಂಬರೀಶ್ ಹೇಳಿದ್ದಾರೆ.
ಮಂಡ್ಯದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಅಮ್ಮ ಒಂದು ಒಳ್ಳೆಯ ನಿರ್ಧಾರ ತೆಗೆದುಕೊಂಡಿದ್ದಾರೆ. ಅಂಬರೀಶ್ ಅವರನ್ನ ನಂಬಿ ರಾಜಕಾರಣ ಮಾಡಿದ ಅಭಿಮಾನಿಗಳು ಇದ್ದಾರೆ. ಒಳ್ಳೆಯದಾಗುವ ನಿಟ್ಟಿನಲ್ಲಿ ನಿರ್ಧಾರ ತೆಗೆದುಕೊಂಡಿದ್ದಾರೆ. ಸ್ವಾಭಿಮಾನ ದಕ್ಕೆ ಅಂದ್ರೆ ನಾವು ಸೋತಿಲ್ಲ, ಜನ ನಮ್ಮನ್ನ ತಿರಸ್ಕರಿಸಿಲ್ಲ. ಇವತ್ತು ನಮ್ಮ ಪರ ಜನ ಇದ್ದಾರೆ. ಜನರಿಗೆ ಒಳ್ಳೆಯದಾಗಬೇಕು ಎಂದರು.
ಅಂಬರೀಶ್ ಅಣ್ಣ 2008 ರಿಂದ 13 ರ ವರೆಗೆ ಯಾವ ಎಂಪಿ, ಎಂಎಲ್ ಎ ಆಗಿರಲಿಲ್ಲ. ಜನರ ವಿಶ್ವಾಸ ಕಡಿಮೆಯಾಗಿಲ್ಲ. ಮಂಡ್ಯ ಜಿಲ್ಲೆಯಲ್ಲಿ ಪ್ರೀತಿ ಗೌರವ ಇದೆ ಅಷ್ಟು ಸಾಕು. ನನ್ನ ಬೆಂಬಲ ಮಂಡ್ಯಕ್ಕೆ ಒಳ್ಳೆಯದಾಗಬೇಕು. ಪಕ್ಷೇತರ ಒಂದು ಕಡೆ ಆದ್ರೆ ಜಿಲ್ಲೆ ಅಭಿವೃದ್ಧಿಗೆ ಇದು ಒಳ್ಳೆಯ ನಿರ್ಧಾರ ಎಂದು ತಿಳಿಸಿದರು.
ಬಹಳಷ್ಟು ಜನಕ್ಕೆ ಬಿಜೆಪಿ ಗೆ ಹೋಗಿರುವುದಕ್ಕೆ ಖುಷಿ ಇದೆ. ಕೆಲವರಲ್ಲಿ ಅಸಮಾಧಾನ ಇದೆ ಸರಿ ಪಡಿಸಿಕೊಳ್ತೇವೆ. ನಾನು ನಮ್ಮ ಅಮ್ಮ ಅವರ ಜೊತೆ ಇರ್ತೇವೆ ಎಂದರು.