Monday, April 21, 2025
Google search engine

Homeರಾಜ್ಯಸುದ್ದಿಜಾಲಕಂದಾಯ ಇಲಾಖೆ ನೌಕರರಿಗಾಗಿ ಉಚಿತ ಆರೋಗ್ಯ ತಪಾಸಣಾ ಶಿಬಿರ

ಕಂದಾಯ ಇಲಾಖೆ ನೌಕರರಿಗಾಗಿ ಉಚಿತ ಆರೋಗ್ಯ ತಪಾಸಣಾ ಶಿಬಿರ

ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ : ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ನಿತ್ಯ ತನ್ನ ಕಾರ್ಯ ನಿಮಿತ್ತ ಒತ್ತಡದಿಂದ ಕಾರ್ಯ ನಿರ್ವಹಿಸುತ್ತಿದ್ದ ಕಂದಾಯ ಇಲಾಖೆಯ ನೌಕರರಿಗಾಗಿ ಬುಧವಾರ ಕೆ.ಆರ್.ನಗರ ತಾಲ್ಲೂಕು ಆಡಳಿತ ಭವನದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿತ್ತು. ತಾಲ್ಲೂಕು ಆಡಳಿತ ಮತ್ತು ತಾಲ್ಲೂಕು ಆರೋಗ್ಯ ಇಲಾಖೆ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಈ ಶಿಬಿರಕ್ಕೆ ತಹಸೀಲ್ದಾರ್ ಸಿ.ಎಸ್.ಪೂರ್ಣಿಮಾ ಮತ್ತು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಡಿ.ನಟರಾಜು ಚಾಲನೆ ನೀಡಿದರು.

ಈ ವೇಳೆ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಡಿ.ನಟರಾಜು ಮಾತನಾಡಿ ಕೆಲಸದ ಒತ್ತಡಗಳ ನಡುವೆ ಕಂದಯ ಅಧಿಕಾರಿ- ನೌಕರರು ತಮ್ಮ ಆರೋಗ್ಯ ಕಡೆಗಣಿಸಬಾರದೆಂಬ ಉದ್ದೇಶದಿಂದ ವರ್ಷಕ್ಕೊಮ್ಮೆ ಆರೋಗ್ಯ ತಪಾಸಣಾ ಶಿಬಿರ ಏರ್ಪಡಿಸುವುದು ಉತ್ತಮ ಎಂದು ತಿಳಿಸಿದರು. ಗಂಭೀರ ಆರೋಗ್ಯ ಸಮಸ್ಯೆಗಳಿದ್ದರೆ ಪ್ರಾಥಮಿಕ ಹಂತದಲ್ಲಿಯೇ ಪತ್ತೆ ಹಚ್ಚಲು ಇಂತಹ ಶಿಬಿರ ಸಹಕಾರಿಯಾಗುತ್ತದೆ, ರೋಗದ ಗಂಭೀರತೆ ಪ್ರಾರಂಭದಲ್ಲಿಯೇ ಕಂಡುಕೊಂಡರೆ ಗುಣಪಡಿಸಲು ಸಾಧ್ಯವಾಗುತ್ತದೆ ಎಂದರಲ್ಲದೆ ಆರೋಗ್ಯ ಶಿಬಿರದಲ್ಲಿ ತಪಾಸಣೆಗೊಳಗಾಗುವ ಅಧಿಕಾರಿ, ನೌಕರರ ಆರೋಗ್ಯ ಮಾಹಿತಿಯನ್ನು ಗಣಕೀಕರಣಗೊಳಿಸುವ ವ್ಯವಸ್ಥೆ ಮಾಡಿ ನಂತರ ಸಲಹೆ ಚಿಕಿತ್ಸೆ ನೀಡಿದರು.

ತಾಲ್ಲೂಕು ಆರೋಗ್ಯ ಇಲಾಖೆ ಹೊಂದಿರುವ ಸಿಬ್ಬಂದಿಯ ಜೊತೆಗೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ನವೀನ್ ಕುಮಾರ್, ಫಿಜಿಶಿಯನ್ ವೈದ್ಯೆ ಡಾ.ತೇಜಾಮಣಿ, ಪ್ರಸೂತಿ ತಜ್ಞೆ ಡಾ.ಭವಾನಿ, ಶ್ವಾಸಕೋಶ ತಜ್ಞ ಡಾ.ಮಂಜುನಾಥ್, ನಮ್ಮಕ್ಲಿನಿಕ್ ವೈದ್ಯ ಡಾ.ರಕ್ಷಿತ್ ಅವರ ತಂಡ ಕೆ.ಆರ್.ನಗರ ಮತ್ತು ಸಾಲಿಗ್ರಾಮ ತಾಲ್ಲೂಕಿನ ೧೪೧ ಕಂದಾಯ ಇಲಾಖೆಯ ತಹಸೀಲ್ದಾರ್, ಗ್ರೇಡ್ ತಹಸೀಲ್ದಾರ್, ಉಪ ತಹಸೀಲ್ದಾರ್, ಗ್ರಾಮ ಆಡಳಿತ ಅಧಿಕಾರಿಗಳು ಸೇರಿದಂತೆ ಕಂದಾಯ ಸಿಬ್ಬಂದಿಗಳಿಗೆ ಮಧುಮೇಹ, ಬಿ.ಪಿ. ತಪಾಸಣೆ, ಕಣ್ಣು ಪರೀಕ್ಷೆ, ಇಸಿಜಿ ಪರೀಕ್ಷೆ,, ಹೃದ್ರೋಗ ತಪಾಸಣೆ ಹಾಗೂ ಮಹಿಳೆಯರ ಸಮಸ್ಯೆಗಳನ್ನು ಡಾ.ಭವಾನಿ ತಂಡ ತಪಾಸಣೆ ಮಾಡಿದರು. ಶಿಬಿರದಲ್ಲಿ ೬ ತಜ್ಞ ವೈದ್ಯರು, ೮ ಶುಶ್ರೂಷಕಿಯರು ಹಾಗೂ ೦೪ ಪ್ರಯೋಗಾಲಯ ತಂತ್ರಜ್ಞರು ಭಾಗವಹಿಸಿದ್ದರು.

ರಕ್ತ, ಮೂತ್ರ, ಇ.ಸಿ.ಜಿ ಪರೀಕ್ಷೆಗಳನ್ನು ಉಚಿತವಾಗಿ ನೆರವೇರಿಸಲಾಗುತ್ತಿದೆ ಎಂದರು. ಶಿಬಿರದಲ್ಲಿ ೯೮ ಪುರುಷರು, ೪೩ ಮಹಿಳೆಯರು ಒಟ್ಟು ೧೪೧ ನೌಕರರ ಆರೋಗ್ಯ ತಪಾಸಣೆ ನಡೆಸಲಾಯಿತು. ಸಾಲಿಗ್ರಾಮ ತಾಲ್ಲೂಕು ತಹಸೀಲ್ದಾರ್ ನರಗುಂದ, ಗ್ರೇಡ್ – ೨ ತಹಸೀಲ್ದಾರ್ ಬಾಲಸುಬ್ರಹ್ಮಣ್ಯಂ, ಶಿರೇಸ್ತೇದಾರ್, ಅಸ್ಲಂ ಬಾಷ, ಮೇಲ್ವಿಚಾರಕ ಸಣ್ಣಸ್ವಾಮಿ, ದೃವಕುಮಾರ್, ಸಾಲಿಗ್ರಾಮ ತಾಲ್ಲೂಕು ಉಪ ತಹಸೀಲ್ದಾರ್ ಶಿವಕುಮಾರ್, ಮಿರ್ಲೆ ಹೋಬಳಿಯ ಉಪ ತಹಸೀಲ್ದಾರ್ ಮಹೇಶ್, ಆರೋಗ್ಯ ಇಲಾಖೆಯ ಹಿರಿಯ ಆರೋಗ್ಯ ಶಿಕ್ಷಣಾಧಿಕಾರಿ ರೇಖಾ, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಕೆ.ವಿ.ರಮೇಶ್ ,ಸಿಬ್ಬಂದಿಗಳಾದ ಪೂರ್ಣಿಮಾ, ಸೌಮ್ಯ, ಶೇಖರ್, ಬೇಬಿಮನು ಹಾಗೂ ಎನ್.ಸಿ.ಡಿ ಸಿಬ್ಬಂದಿಗಳು ಭಾಗವಹಿಸಿದ್ದರು.

ತಹಸೀಲ್ದಾರ್ ಮತ್ತು ಟಿಎಚ್‌ಓ ಕಾರ್ಯಕ್ಕೆ ಮೆಚ್ಚುಗೆ :
ಲೋಕಸಭೆ ಚುನಾವಣೆಯ ವೇಳೆ ಕರ್ತವ್ಯ ನಿರ್ವಹಿಸುವ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಕೆಲಸದ ಒತ್ತಡದಲ್ಲಿ ಕೆಲಸ ನಿರ್ವಹಿಸುವ ವೇಳೆ ಆರೋಗ್ಯ ಸಮಸ್ಯೆ ಏರು- ಪೇರು ಆಗ ಬಾರದು ಎಂಬ ದೃಷ್ಠಿಯಿಂದ ಆರೋಗ್ಯ ತಪಾಸಣೆ ಕಾರ್ಯಕ್ರಮ ಆಯೋಜನೆ ಮಾಡಿ ಆರೋಗ್ಯದ ಕಾಳಜಿ ತೋರಿದ ತಹಸೀಲ್ದಾರ್ ಪೂರ್ಣಿಮಾ ಮತ್ತು ಟಿಎಚ್‌ಓ ಡಾ.ನಟರಾಜು ಅವರ ಕಾರ್ಯ ಈ ಸಂದರ್ಭದಲ್ಲಿ ಮೆಚ್ಚುಗೆಗೆ ಪಾತ್ರವಾಯಿತು ದೊಡ್ಡರಸಿನಕೆರೆ ಗ್ರಾಮಕ್ಕೆ ಹೆಚ್ಡಿಕೆ ಭೇಟಿ. ಅಂಬರೀಶ್ ಸಮಾಧಿಗೆ ಪುಷ್ಪ ನಮನ ಸಲ್ಲಿಸಿದ ಹೆಚ್ಡಿಕೆ.
ಬಳಿಕ ಗ್ರಾಮದ ಅಂಬಿ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಹೆಚ್ಡಿ ಕುಮಾರಸ್ವಾಮಿ. ಹೆಚ್ಡಿಕೆಗೆ ಮಾಜಿ ಸಚಿವ ಡಿಸಿ ತಮ್ಮಣ್ಣ, ಬಿಜೆಪಿ ಮುಖಂಡ ಎಸ್ಪಿ ಸ್ವಾಮಿ ಸಾಥ್. ಮಂಡ್ಯ ಜಿಲ್ಲೆ ಮದ್ದೂರು ತಾಲ್ಲೂಕಿನ ದೊಡ್ಡರಸಿನಕೆರೆ ಗ್ರಾಮ.

RELATED ARTICLES
- Advertisment -
Google search engine

Most Popular