ಮಂಡ್ಯ: ಕರ್ನಾಟಕದಲ್ಲಿ 28 ಕ್ಕೆ 28 ಸ್ಥಾನ ಹಾಗು ದೇಶದಲ್ಲಿ 400 ಕ್ಕೂ ಹೆಚ್ಚು ಸ್ಥಾನ ಗೆಲ್ಲುತ್ತೇವೆ ಎಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ತಿಳಿಸಿದರು.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿದ್ರಾಮಯ್ಯ ಮಾತಿಗೆ ಯಾರು ತಲೆ ಕೆಡಿಸಿಕೊಳ್ಳಬೇಕಿಲ್ಲ. ಮೈಸೂರಲ್ಲಿ ಯದುವೀರ್ ನವರು ಹೆಚ್ಚು ಅಂತರದಿಂದ ಗೆಲ್ತಾರೆ. ಡಿಸೆಂಬರ್ ಗೆ ಸರ್ಕಾರ ಪತನ ವಿಚಾರ ನಾನು ಮಾತನಾಡಲ್ಲ ಎಂದರು.
ಸುಮಲತಾ ಕ್ಷೇತ್ರಬಿಟ್ಟು ಕೊಟ್ಟಿದ್ದಾರೆ ಅವರಿಗೆ ಕೃತಜ್ಞತೆ. ಮುಂದಿನ ದಿನಗಳಲ್ಲಿ ಅವರಿಗೆ ಪಕ್ಷದಲ್ಲಿ ಸೂಕ್ತ ಸ್ಥಾನ ಸಿಗಲಿದೆ ಎಂದರು.