Monday, April 21, 2025
Google search engine

Homeರಾಜ್ಯವಿಜಯಪುರ ಕೊಳವೆ ದುರಂತ: ರಕ್ಷಣಾ ಕಾರ್ಯಾಚರಣೆ ನೋಡಲು ಬಂದವರ ನಿಯಂತ್ರಿಸಲು ಪೊಲೀಸರ ಹರಸಾಹಸ

ವಿಜಯಪುರ ಕೊಳವೆ ದುರಂತ: ರಕ್ಷಣಾ ಕಾರ್ಯಾಚರಣೆ ನೋಡಲು ಬಂದವರ ನಿಯಂತ್ರಿಸಲು ಪೊಲೀಸರ ಹರಸಾಹಸ

ವಿಜಯಪುರ: ಕೊಳವೆ ಬಾವಿಯಲ್ಲಿ ಸಿಲುಕಿರುವ 14 ತಿಂಗಳ ಮಗು ಸಾತ್ವಿಕನ ಹೊರ ತೆಗೆಯುವ ರಕ್ಷಣಾ ಕಾರ್ಯಾಚರಣೆ ನೋಡಲು ಸುತ್ತಮುತ್ತಲಿನ ಗ್ರಾಮಗಳ ಸಾವಿರಾರು ಜನರು ತಂಡೋಪತಂಡವಾಗಿ ಸ್ಥಳಕ್ಕೆ ಆಗಮಿಸುತ್ತಿದ್ದಾರೆ.

ಕಾರ್ಯಾಚರಣೆ ನೋಡಲು ನಾ ಮುಂದು, ತಾ ಮುಂದು ಎಂದು ಮುಗಿಬೀಳುತ್ತಿರುವ ಜನರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ.

ಜನರ ನೂಕು ನುಗ್ಗಲಿಂದ ಕಾರ್ಯಾಚರಣೆಗೆ ತೊಂದರೆಯಾಗುತ್ತಿರುವುದಂದ ಪೊಲೀಸರು ಆಗಾಗ ಲಾಟಿ ಬೀಸಿ, ಜನರನ್ನು ಚದುರಿಸುತ್ತಿದ್ದಾರೆ. ಇಷ್ಟಾದರೂ ಜನರ ಕುತೂಹಲ ತಣಿದಿಲ್ಲ. ಇದರಿಂದ ಪೊಲೀಸರಿಗೆ ತಲೆ ಬಿಸಿಯಾಗಿದೆ.

ಮಗು ಸಾತ್ವಿಕ ಸುರಕ್ಷಿತವಾಗಿ ಹೊರಬರಲಿ ಎಂದು ಜನರು ದೇವರಲ್ಲಿ ಪ್ರಾರ್ಥಿಸುತ್ತಿದ್ದಾರೆ.

ಬುಧವಾರ ಸಂಜೆ 6ಗಂಟೆಗೆ ಮಗು ಕೊಳವೆಬಾವಿಗೆ ಬಿದ್ದಲ್ಲಿಂದ ಸ್ಥಳದಲ್ಲೇ ಅನ್ನ ಆಹಾರ ಬಿಟ್ಟು ತಂದೆ, ತಾಯಿ ಕಣ್ಣೀರು ಸುರಿಸುತ್ತಿದ್ದಾರೆ. ‘ನನ್ನ ಮಗನನ್ನು ಬೇಗ ರಕ್ಷಿಸಿ, ಹೊರ ತನ್ನಿ’ ಎಂದು ತಂದೆ ಸತೀಶ ಮುಜಗೊಂಡ, ತಾಯಿ ಪೂಜಾ ಗೋಗರೆಯುತ್ತಿದ್ದಾರೆ.

ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿರುವ ಎನ್‌ಡಿಆರ್‌ಎಫ್‌, ಎಸ್‌ಡಿಆರ್‌ಎಫ್‌, ಅಗ್ನಿ ಶಾಮಕ ಮತ್ತು ಪೊಲೀಸ್ ಸಿಬ್ಬಂದಿ ಬೆವರಿಳಿಸುತ್ತಿದ್ದಾರೆ

 ಇಂಡಿ ಶಾಸಕ ಯಶವಂತ ರಾಯಗೌಡ ಪಾಟೀಲ ಅವರು ಸ್ಥಳಕ್ಕೆ ತಡರಾತ್ರಿಯೇ ಆಗಮಿಸಿದ್ದು, ರಕ್ಷಣಾ ಕಾರ್ಯಾಚರಣೆಗೆ ಅಗತ್ಯ ಸಹಕಾರ ನೀಡಿದ್ದಾರೆ. ‘ಹೈದರಾಬಾದ್‌ಗೆ ಕಾರ್ಯಕ್ರಮವೊಂದರ ಪ್ರಯುಕ್ತ ನಿನ್ನೆ ಹೋಗಿದ್ದೆ. ವಿಷಯ ತಿಳಿದು ರಾತ್ರಿಯೇ ಹಿಂತಿರುಗಿದೆ. ಮಗುವಿನ ರಕ್ಷಣೆಗೆ ಶಕ್ತಿ ಮೀರಿ ಪ್ರಯತ್ನ ನಡೆಸಿದ್ದೇವೆ. ಮಗು ಸುರಕ್ಷಿತವಾಗಿ ಹೊರಬರಲಿ ಎಂದು ದೇವರ ಮೇಲೆ ಬಾರ ಹಾಕಿದ್ದೇವೆ ಎಂದರು.

RELATED ARTICLES
- Advertisment -
Google search engine

Most Popular