Sunday, April 20, 2025
Google search engine

Homeರಾಜ್ಯರಾಜಕೀಯ ಜೀವನದುದ್ದಕ್ಕೂ ಜನರಿಗಾಗಿ ಹೆಚ್. ಡಿ ಕುಮಾರಸ್ವಾಮಿ ಅವರ ಹೃದಯ ಮಿಡಿದಿದೆ: ನಿಖಿಲ್ ಕುಮಾರಸ್ವಾಮಿ

ರಾಜಕೀಯ ಜೀವನದುದ್ದಕ್ಕೂ ಜನರಿಗಾಗಿ ಹೆಚ್. ಡಿ ಕುಮಾರಸ್ವಾಮಿ ಅವರ ಹೃದಯ ಮಿಡಿದಿದೆ: ನಿಖಿಲ್ ಕುಮಾರಸ್ವಾಮಿ

ಮಂಡ್ಯ: ರೈತರ ಕಣ್ಮಣಿ, ರೈತರಿಗೆ ಮಿಡಿಯುವ ಹೃದಯ ಕುಮಾರಸ್ವಾಮಿಯವರದ್ದು. 30 ವರ್ಷದ ರಾಜಕೀಯ ಜೀವನದುದ್ದಕ್ಕೂ ಜನರಿಗಾಗಿ ಹೃದಯ ಮಿಡಿದಿದೆ. ಈ ಕಾರಣದಿಂದಲೆ ಜನರು ಹೃದಯವಂತ ಅಂತ ಕರೆಯುತ್ತಾರೆ ಎಂದು ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದರು.

ಮಂಡ್ಯದ ಜನರ ಋಣ ತೀರಿಸುವ ಕೆಲಸ ಮಾಡುತ್ತೇವೆ. ಯಾವುದೆ ಬಿನ್ನಾಭಿಪ್ರಾಯಕ್ಕೆ ಅವಕಾಶ ಕೊಡುವುದಿಲ್ಲ. ಕಾವೇರಿ ಸಮಸ್ಯೆಯನ್ನ ಕುಮಾರಸ್ವಾಮಿ ಬಗೆಹರಿಸುತ್ತಾರೆ ಅಂತ ತಾವು ಅಂದುಕೊಂಡಿದ್ದೀರ. ಅದಕ್ಕಾಗಿ ಕುಮಾರಸ್ವಾಮಿ ಕೆಲಸ ಮಾಡುತ್ತಾರೆ ಎಂದರು.

ದೇಶವನ್ನ ಕಟ್ಟಿಲಿಕ್ಕೆ ಮೋದಿಯವರಯ ೧೦ ವರ್ಷ ಕೆಲಸ ಮಾಡುತ್ತಿದ್ದಾರೆ. ವಿಶ್ರಾಂತಿಯನ್ನೆ ಪಡೆಯದೆ ಕೆಲಸ ಮಾಡುತ್ತಿದ್ದಾರೆ. ಅವರನ್ನ ಮತ್ತೊಮ್ನೆ ಪ್ರಧಾನಿ ಮಂತ್ರಿ ಮಾಡಲು ದೇವೆಗೌಡರು ಕೈಜೋಡಿಸಿದ್ದಾರೆ ಎಂದು ಹೇಳಿದರು.

ರಾಜ್ಯದಲ್ಲಿ ಮತ್ತೊಮ್ಮೆ ಬರಗಾಲ ಪ್ರಾರಂಭವಾಗಿದೆ. ಸಿದ್ದರಾಮಯ್ಯ ಸರ್ಕಾರವಿದ್ದ ಮಧ್ಯ ಭಾಗದಲ್ಲೂ ಬರಗಾಲವಿತ್ತು. ರೈತರು ಸಾಲ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಕುಮಾರಸ್ವಾಮಿ ಅಧಿಕಾರದಲ್ಲಿ ಇಲ್ಲದಿದ್ದರೂ ರೈತರ ಮನೆಗಳಿಗೆ ಭೇಟಿ ಕೊಟ್ಟು ಸಾಂತ್ವಾನ ಹೇಳಿದ್ದರು ಎಂದು ತಿಳಿಸಿದರು.

ಸಾಲ ಮನ್ನಾ ಮಾಡುವ ಘೋಷಣೆ ಮಾಡಿದ್ದರು. ಒಮ್ಮೆ ಪ್ರಾದೇಶಿಕ ಪಕ್ಷ ಬೆಂಬಲಿಸಿ ಅಂತಾ ಅಂಗಲಾಚಿ ಬೇಡ್ತಾರೆ. 36 ಸ್ಥಾನ ಬಂದರೂ ಕೂಡ ಅವರು ಮಾತು ತಪ್ಪಲಿಲ್ಲ. ಕೊಟ್ಟ ಮಾತು ತಪ್ಪದೇ ಅಧಿಕಾರಕ್ಕೆ ಬಂದ ವೇಳೆ ಸಾಲಮನ್ನಾ ಮಾಡಿದರು.

ಗೋವಾ ಸಿಎಂ ಪ್ರಮೋದ್ ಸಾವಂತ್ ಈ ಅಲಯನ್ಸ್ ಗೆ ಬಹುಮುಖ್ಯ ಪಾತ್ರ ವಹಿಸಿದರು. ಎನ್ ಡಿಎ ಮೈತ್ರಿಕೂಟಕ್ಕೆ ಬರಲೂ ಪ್ರಮುಖವಾಗಿದ್ದಾರೆ. ಕುಮಾರಸ್ವಾಮಿ ನಾಮಪತ್ರ ಸಲ್ಲಿಕೆಗೂ ಆಗಮಿಸಿದ್ದಾರೆ ಎಂದು ಹೇಳಿದರು.

RELATED ARTICLES
- Advertisment -
Google search engine

Most Popular