ಗುಂಡ್ಲುಪೇಟೆ: ರೈತರ ಸೋಗಿನಲ್ಲಿ ಅಕ್ರಮವಾಗಿ ಜಾನುವಾರುಗಳನ್ನು ಹೊಡೆದುಕೊಂಡು ಹೋಗುತ್ತಿದ್ದ ವೇಳೆ ತೆರಕಣಾಂಬಿ ಠಾಣೆ ಪೊಲೀಸರು ದಾಳಿ ನಡೆಸಿ 9 ಸಂಖ್ಯೆಯ ಜಾನುವಾರುಗಳನ್ನು ರಕ್ಷಿಸಿ, ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಶಿಂಡನಪುರದ ಕುಳ್ಳಯ್ಯ ಮತ್ತು ಕಲ್ಲಹಳ್ಳಿಯ ಕಾಳÀಪ್ಪ ಬಂಧಿತರು. ಇವರು ತೆರಕಣಾಂಬಿ ಸಂತೆಯಲ್ಲಿ ಖರೀದಿಸಿದ್ದ ಜಾನುವಾರುಗಳನ್ನು ರೈತರ ಸೋಗಿನಲ್ಲಿ ಕಿಲಗೆರೆ ಮಾರ್ಗವಾಗಿ ತಮಿಳುನಾಡಿನ ಅರಳವಾಡಿ ಕಡೆಗೆ ಕರೆದುಕೊಂಡು ಹೋಗುತ್ತಿದ್ದರು. ಖಚಿತ ಮಾಹಿತಿ ಹಿನ್ನೆಲೆ ತೆರಕಣಾಂಬಿ ಠಾಣೆ ಸಬ್ ಇನ್ಸ್ ಪೆಕ್ಟರ್ ಈಶ್ವರ್ ಸೂಚನೆ ಮೇರೆಗೆ ಪೊಲೀಸರು ದಾಳಿ ನಡೆಸಿ ಜಾನುವಾರುಗಳನ್ನು ಹೊಡೆದುಕೊಂಡು ಹೋಗುತ್ತಿದ್ದ ವರನ್ನು ಹಿಡಿಯಲು ಹೋದಾಗ ಸಮವಸ್ತ್ರದಲ್ಲಿದ್ದ ನಮ್ಮನ್ನು ನೋಡಿ ಗಾಬರಿಯಾಗಿ ಜಾನುವಾರುಗಳನ್ನು ಬಿಟ್ಟು ಓಡಿ ಹೋಗಲು ಪ್ರಯತ್ನಿಸಿದರು. ಆಗ ಸಿಬ್ಬಂದಿಗಳು ಅವರನ್ನು ಸುತ್ತುವರೆದು ಹಿಡಿದಿದ್ದಾರೆ.
ಯಡಿಯಾಲ ಗ್ರಾಮದ ಅಕ್ಟರ್ ಎಂಬುವರು ಕಡಿಮೆ ಬೆಲೆಗೆ ಖರೀದಿಸಿದ್ದ ಜಾನುವಾರುಗಳನ್ನು ತಮಿಳುನಾಡಿನ ಅರಳವಾಡಿಗೆ ಹೊಡೆದುಕೊಂಡು ಬರುವಂತೆ ತಿಳಿಸಿದ್ದರು. ಕೂಲಿ ಹಣಕ್ಕಾಗಿ ನಾವು ಜಾನುವಾರುಗಳನ್ನು ಹೊಡೆದುಕೊಂಡು ಹೋಗುತ್ತಿದ್ದಾಗಿ ಎಂದು ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ.
ಕಾರ್ಯಾಚರಣೆಯಲ್ಲಿ ಪೇದೆಗಳಾದ ಮಹೇಶ, ರವಿ, ಮಲ್ಲುಸ್ವಾಮಿ, ರಾಘವೇಂದ್ರಶೆಟ್ಟಿ, ಪ್ರದೀಪ್, ಚಾಲಕ ಜಗದೀಶ ಪಾಲ್ಗೊಂಡಿದ್ದರು. ಈ ಸಂಬಂಧ ತೆರಕಣಾಂಬಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.