Saturday, April 19, 2025
Google search engine

Homeವಿದೇಶಅಮೆರಿಕದಲ್ಲಿ ಮತ್ತೊಬ್ಬ ಭಾರತೀಯ ವಿದ್ಯಾರ್ಥಿ ಸಾವು: ಇದು 10ನೇ ಪ್ರಕರಣ

ಅಮೆರಿಕದಲ್ಲಿ ಮತ್ತೊಬ್ಬ ಭಾರತೀಯ ವಿದ್ಯಾರ್ಥಿ ಸಾವು: ಇದು 10ನೇ ಪ್ರಕರಣ

ವಾಷಿಂಗ್ಟನ್:‌ ಅಮೆರಿಕದ ಓಹಿಯೊ ರಾಜ್ಯದಲ್ಲಿ ಮತ್ತೊಬ್ಬ ಭಾರತೀಯ ವಿದ್ಯಾರ್ಥಿ ಸಾವನ್ನಪ್ಪಿದ್ದು, ಸಾವಿನ ಕಾರಣ ತಿಳಿಯಲು ತನಿಖೆ ನಡೆಯುತ್ತಿದೆ ಎಂದು ನ್ಯೂಯಾರ್ಕ್‌ ನಲ್ಲಿರುವ ಭಾರತೀಯ ಕಾನ್ಸುಲೇಟ್‌ ತಿಳಿಸಿದೆ.

ಅಮೆರಿಕದಲ್ಲಿ ಭಾರತೀಯ ಮೂಲದ ವಿದ್ಯಾರ್ಥಿಗಳು, ಭಾರತೀಯರನ್ನು ಗುರಿಯಾಗಿರಿಸಿಕೊಂಡು ದಾಳಿ ನಡೆಯುತ್ತಿದ್ದು, ಇದು 10ನೇ ಪ್ರಕರಣವಾಗಿದೆ. ಮೃತ ವಿದ್ಯಾರ್ಥಿಯನ್ನು ಉಮಾ ಸತ್ಯ ಸಾಯಿ ಎಂದು ಗುರುತಿಸಲಾಗಿದೆ.

ಉಮಾ ಓಹಿಯೋದ ಕ್ಲೀವ್‌ ಲ್ಯಾಂಡ್‌ ನಲ್ಲಿ ಶಿಕ್ಷಣ ಪಡೆಯುತ್ತಿದ್ದಳು. ಈಕೆಯ ನಿಧನಕ್ಕೆ ಭಾರತೀಯ ದೂತಾವಾಸ ತೀವ್ರ ಸಂತಾಪ ವ್ಯಕ್ತಪಡಿಸಿದ್ದು, ಈ ಸಂಕಷ್ಟದ ಸಂದರ್ಭದಲ್ಲಿ ಶವವನ್ನು ಭಾರತಕ್ಕೆ ರವಾನಿಸಲು ಅಗತ್ಯವಿರುವ ಎಲ್ಲಾ ನೆರವನ್ನು ಕುಟುಂಬಕ್ಕೆ ಒದಗಿಸಲಾಗುತ್ತದೆ ಎಂದು ಭರವಸೆ ನೀಡಿದೆ.

ಮಾರ್ಚ್‌ ನಲ್ಲಿ ಮತ್ತೊಬ್ಬ ಭಾರತೀಯ ವಿದ್ಯಾರ್ಥಿ ಮೊಹಮ್ಮದ್‌ ಅಬ್ದುಲ್‌ ಅರಾಫತ್‌ ಕ್ಲೀವ್‌ ಲ್ಯಾಂಡ್‌ ಪ್ರದೇಶದಿಂದ ನಿಗೂಢವಾಗಿ ನಾಪತ್ತೆಯಾಗಿದ್ದ, ನಂತರ ಆತನ ಬಿಡುಗಡೆಗೆ ಹಣ ನೀಡುವಂತೆ ಕುಟುಂಬ ಸದಸ್ಯರಿಗೆ ಬೆದರಿಕೆ ಕರೆ ಬಂದಿತ್ತು.

RELATED ARTICLES
- Advertisment -
Google search engine

Most Popular