ವರದಿ : ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ : ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮತಗಟ್ಟೆಗಳ ಮೂಲಭೂತ ಸೌಕರ್ಯಗಳಾದ ಶೌಚಾಲಯ, ಅಂಗವಿಕಲರ ಇಳಿಜಾರು ಮೆಟ್ಟಿಲು ನಿರ್ಮಾಣ ಸೇರಿದಂತೆ ಒದಗಿಸಿರುವುದಿಲ್ಲ ಎಂಬ ಕಾರಣಕ್ಕೆ ಸಾಲಿಗ್ರಾಮ ತಾಲ್ಲೂಕಿನ ಮಿರ್ಲೆ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಎಸ್.ಎಸ್.ಸಂದೀಪ್ ಅವರಿಗೆ ಮೈಸೂರಿನ ಜಿಲ್ಲಾಧಿಕಾರಿ ಕೆ.ವಿ.ರಾಜೇಂದ್ರ ಅವರು ನೋಟಿಸ್ ನೀಡಲಾಗಿದ್ದು ಸದರಿ ನೋಟಿಸ್‌ಗೆ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಎಸ್.ಎಸ್.ಸಂದೀಪ್ ಅವರು ಗ್ರಾಮ ಪಂಚಾಯಿತಿಗೆ ಚುನಾವಣೆ ಕಾರ್ಯಕ್ಕೆ ಯಾವುದೇ ಪ್ರತ್ಯೇಕ ಅನುದಾನ ಬಿಡುಗಡೆಯಾಗಿರುವುದಿಲ್ಲವೆಂದು, ಗ್ರಾಮ ಪಂಚಾಯಿತಿ ಸದರಿ ವೆಚ್ಚ ಭರಿಸುವುದಕ್ಕೆ ಚುನಾಯಿತ ಪ್ರತಿನಿಧಿಗಳು ಒಪ್ಪಿಗೆ ಅಗತ್ಯವಿರುತ್ತದೆ ಹಾಗೂ ಪ್ರಸ್ತುತ ನೀತಿ ಸಂಹಿತೆ ಸಂದರ್ಭದಲ್ಲಿ ಯಾವುದೇ ಗ್ರಾಮ ಪಂಚಾಯಿತಿ ಸಭೆ ನಡೆಸಲು ಸಾಧ್ಯವಿರುವುದಿಲ್ಲ ಎನ್ನುವ ತಾತ್ಪರ್ಯದಲ್ಲಿ ಉತ್ತರಿಸಿರುತ್ತಾರೆ.
ಹಾಗೂ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ-೧೯೯೩ರ ಪ್ರಕರಣ ಸಂಖ್ಯೆ ೫೮ (೪)ರಂತೆ ಗ್ರಾಮ ಪಂಚಾಯಿತಿಯು ಸ್ವಯಂ ಆಡಳಿತ ಸಂವಿಧಾನ ಬದ್ಧ ಸಂಸ್ಥೆಯಾಗಿದ್ದು, ಲಿಖಿತ ರೂಪದ ಸರ್ಕಾರದ ಆದೇಶವಿಲ್ಲದ ಅಥವಾ ಸಕ್ಷಮ ಪ್ರಾಧಿಕಾರದ ಆದೇಶವಿಲ್ಲದೆ ಯಾವುದೇ ಹಣವನ್ನು ವೆಚ್ಚ ಮಾಡಲು ಅವಕಾಶವಿರುವುದಿಲ್ಲ ಆದ್ದರಿಂದ ಚುನಾವಣೆ ನಿಮಿತ್ಯ ಪೂರಕ ಅಥವಾ ಸಕ್ಷಮ ಪ್ರಾಧಿಕಾರದ ಆದೇಶವಿಲ್ಲದೆ ವೆಚ್ಚ ಮಾಡುವುದು ನಿಯಮಬಾಹಿರ ಎಂದು ಬೀದರ ಜಿಲ್ಲಾ ಪಂಚಾಯಿತಿಯು ತನ್ನ ಆದೇಶದಲ್ಲಿ ಈಗಾಗಲೇ ಸೂಚಿಸಿದ ಪ್ರಕರಣ ಕಣ್ಣ ಮುಂದೆ ಇದೆ ಎಂದು ನೋಟಿಸ್ ಗೆ ಉತ್ತರ ನೀಡಿದ್ದಕ್ಕೆ ಇವರನ್ನು ಸಾಲಿಗ್ರಾಮ ತಾಲ್ಲೂಕಿನ ಹನಸೋಗೆ ಗ್ರಾಮದ ಚೆಕ್ ಪೊಸ್ಟ್ ಡ್ಯೂಟಿ (ಪೂರ್ಣ ಪ್ರಮಾಣದ ಚುನಾವಣೆ ಕರ್ತವ್ಯ)ಗೆ|? ನೀಯೋಜಿಸಲಾಗಿದ್ದು ಜಿಲ್ಲಾಧಿಕಾರಿಗಳ ಕಛೇರಿಯಿಂದ ಜಿಲ್ಲೆಯಲ್ಲಿ ಚೆಕ್ ಪೊಸ್ಟ್ ಡ್ಯೂಟಿಗೆ ಜಿಲ್ಲೆಯಲ್ಲಿರುವ ಪಿಡಿಒ ಗಳಲ್ಲಿ ಇವರನ್ನು ಮಾತ್ರ ನಿಯೋಜಿಸಲಾಗಿರುವುದು ಏಕೆ, ನೋಟೀಸ್‌ಗೆ ಸಮಜಾಯಿಷಿ ಉತ್ತರ ನೀಡಿದ್ದೆ ತಪ್ಪಾ ! ಈಗಾಗಲೇ ಆವಳಿ ತಾಲ್ಲೂಕಿನಲ್ಲಿ ಬರಗಾಲದಿಂದ ಜನ ಜಾನುವಾರುಗಳಿಗೆ ಮೇವು, ಕುಡಿಯುವ ನೀರಿಲ್ಲದೆ ಪರದಾಡುವಂತಾಗಿದ್ಸು, ಮಿರ್ಲೆ ಗ್ರಾಮ ಪಂಚಾಯತಿಯಲ್ಲಿ ಪಿಡಿಓ ಇಲ್ಲದೆ ಪ್ರತಿ ನಿತ್ಯ ಕೂಲಿ ಕಾರ್ಮಿಕರಿಗೆ ಕೆಲಸ ಒದಗಿಸುವ, ಬರಗಾಲದ ಈ ಸಂದರ್ಭದಲ್ಲಿ ಸಾರ್ವಜನಿಕರಿಗೆ ಕುಡಿಯುವ ನೀರು ನಿರ್ವಹಣೆ ಕಾರ್ಯ ಮಾಡುವುದು ಹೇಗೆ ಎಂದು ಸ್ಥಳೀಯರ ದೂರಾಗಿದೆ.
ಮಂಡ್ಯ ಲೋಕಸಭಾ ಕ್ಷೇತ್ರದ ಕೆ.ಆರ್.ನಗರ ವಿಧಾನಸಭಾ ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿಗಳಿಗೆ ಈ ಸಂಬಂದ ಕೆ.ಆರ್.ನಗರ ಮತ್ತು ಸಾಲಿಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಸಂಘ (ನೋಂದಣಿ) ದಿಂದ ಮನವಿ ಪತ್ರ ಕೂಡ ನೀಡಿದ್ದರು. ಜಿಲ್ಲಾಧಿಕಾರಿಗಳು ಯಾವುದೇ ಪ್ರತಿಕ್ರಿಯೆ ನೀಡಲ್ಲ ಎಂಬ ಆರೋಪವಾಗಿದ್ದು, ಬೀದರ್ ಜಿಲ್ಲೆಯಲ್ಲಿ ಈ ಹಿಂದೆ ಗ್ರಾಮ ಪಂಚಾಯಿತಿ ಅನುದಾನವನ್ನು ಲೀಖಿತ ರೂಪದ ಯಾವುದೇ ಆದೇಶವಿಲ್ಲದೆ ಚುನಾವಣೆ ಮತಗಟ್ಟೆಗಳ ಮೂಲಭೂತ ಸೌಕರ್ಯ ಒದಗಿಸಿದ್ದಕ್ಕೆ ಪಿಡಿಒ ಅವರನ್ನು ಅಮಾನತ್ತು ಮಾಡಲಾಗಿದ್ದು ವೆಚ್ಚ ಮಾಡಿರುವ ಹಣವನ್ನು ಮರು ವಸೂಲಿ ಮಾಡಲಾಗಿದ್ದು ಇದಕ್ಕೆ ಯಾರು ಹೊಣೆ ಎಂದು ಕರ್ನಾಟಕ ರಾಜ್ಯ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಬಿ-ಗ್ರೇಡ್ ಹುದ್ದೆ ಉನ್ನತೀಕರಣ ಸಂಘ (ನೋಂದಣಿ) ಬೆಂಗಳೂರು ಸಂಘದಿಂದ ರಾಜ್ಯ ಚುನಾವಣಾ ಆಯೋಗದ ಸಹಾಯಕ ಚುನಾವಣಾಧಿಕಾರಿಗಳಿಗೆ ಸಂದೀಪ್ ಎಸ್.ಎಸ್ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಗ್ರಾಮ ಪಂಚಾಯಿತಿ, ಮಿರ್ಲೆ, ಸಾಲಿಗ್ರಾಮ ತಾಲ್ಲೂಕು ಮೈಸೂರು ಜಿಲ್ಲೆ ಇವರನ್ನು ಪೂರ್ಣ ಪ್ರಮಾಣದ ಚುನಾವಣೆ ಕರ್ತವ್ಯದಿಂದ ವಿನಾಯಿತಿ ನೀಡುವಂತೆ ಮನವಿ ಮಾಡಿದ್ದಾರೆ.
ಈ ಸಂದರ್ಭ ಪಿಡಿಓಗಳಾದ ಜಿ.ಎಲ್ ಧನಂಜಯ, ಶ್ರೀರಾಮಪುರ ಉಮೇಶ,ಚಂದ್ರಶೇಖರ,ಮೋಹನ್ ಕುಮಾರ್, ಮಹದೇವ, ಸರಿತಾ, ರಂಗೇಗೌಡ, ಜಿ.ಟಿ.ಸಂತೋಷ್, ಸಂದೀಪ್,ನವೀನ್,ರಮೇಶ್, ಶಲ್ಯಾ, ಆಶಾ, ಚಿದಾನಂದ್, ರಾಜೇಶ್, ಧನಂಜಯ, ರಮೇಶ್, ಕುಳ್ಳೇಗೌಡ, ಮೋಹನ್ ಕುಮಾರ್, ಮ್ಯಾನೇಜರ್ ಸತೀಶ್ ಕರ್ತಾಳ್ ಇದ್ದರು