Tuesday, April 22, 2025
Google search engine

Homeಸ್ಥಳೀಯಮೋದಿ ಸರ್ಕಾರ ಸರ್ವಾಧಿಕಾರಿ ಸರ್ಕಾರ: ಡಾ.ಯತೀಂದ್ರ ಸಿದ್ಧರಾಮಯ್ಯ

ಮೋದಿ ಸರ್ಕಾರ ಸರ್ವಾಧಿಕಾರಿ ಸರ್ಕಾರ: ಡಾ.ಯತೀಂದ್ರ ಸಿದ್ಧರಾಮಯ್ಯ

ಮೈಸೂರು : ಕೇಂದ್ರದ ಮೋದಿ ಸರ್ಕಾರವು ಸರ್ವಾಧಿಕಾರಿ ಸರ್ಕಾರವಾಗಿದ್ದು ಈ ಸರ್ಕಾರವನ್ನು ಕಿತ್ತೊಗೆಯಲು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವುದರೊಂದಿಗೆ ಎಂ.ಲಕ್ಷ್ಮಣ್‌ರವರನ್ನು ಆಯ್ಕೆ ಮಾಡಬೇಕೆಂದು ವರುಣಾ ಕ್ಷೇತ್ರದ ಮಾಜಿ ಶಾಸಕ ಹಾಗು ಆಶ್ರಯ ಸಮಿತಿಯ ಅಧ್ಯಕ್ಷರಾದ ಡಾ.ಯತೀಂದ್ರ ಸಿದ್ಧರಾಮಯ್ಯ ಹೇಳಿದರು.

ಚಾಮುಂಡೇಶ್ವರಿ ಕ್ಷೇತ್ರದ ಹೊಸಹುಂಡಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎಂ.ಲಕ್ಷ್ಮಣ್ ಪರವಾಗಿ ಮತಯಾಚಿಸಿ ಮಾತನಾಡಿದ ಅವರು ೭೦ವರ್ಷ ದೇಶವನ್ನು ಆಳಿದ ಕಾಂಗ್ರೆಸ್ ಸರ್ಕಾರ ಬಡವರಿಗೆ ಎಲ್ಲಾ ಮೂಲಭೂತ ಸೌಲಭ್ಯವನ್ನುನೀಡಿತ್ತು.ಬಡವರ ಪರವಾಗಿ ಕೆಲಸ ಮಾಡಿತ್ತು. ಆದರೆ ೧೦ವರ್ಷ ದೇಶವನ್ನು ಆಳಿದ ಬಿ.ಜೆ.ಪಿ ಸರ್ಕಾರ ಶ್ರೀಮಂತರ ಪರವಾಗಿ, ಅವರ ಉದ್ಧಾರಕ್ಕಾಗಿ ದೇಶದ ಎಲ್ಲಾ ಸಂಸ್ಥೆಗಳನ್ನು ಮಾರಾಟ ಮಾಡುತ್ತಿದೆ. ಶ್ರೀಮಂತರ ಸಾಲವನ್ನು ಮನ್ನಾ ಮಾಡುತ್ತಿದೆಆದರೆ ರೈತರ ಸಾಲವನ್ನು ಮನ್ನಾ ಮಾಡುತ್ತಿಲ್ಲ, ಮಾಧ್ಯಮಗಳೆಲ್ಲಾ ಶ್ರೀಮಂತರ ಕೈಯಲ್ಲಿವೆ, ಈ ಚುನಾವಣೆ ದೇಶದ ಭವಿಷ್ಯವನ್ನು ರೂಪಿಸುತ್ತದೆ, ನಿಮ್ಮ ಓಟು ದೇಶದ ದಿಕ್ಕನ್ನು ಬದಲಾಯಿಸುವ ಸಾಧನವಾಗಿದ್ದು ಪ್ರತಿಯೊಬ್ಬರೂ ಜಾಗರೂಕತೆಯಿಂದ ಮತ ಚಲಾಯಿಸಿ ಬಿ.ಜೆ.ಪಿ ಸಕಾರವನ್ನು ಮನೆಗೆ ಕಳುಹಿಸಬೇಕು . ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವುದರೊಂದಿಗೆ ಎಂ.ಲಕ್ಷ್ಮಣ್ ರವರನ್ನು ಗೆಲ್ಲಿಸಬೇಕು ಎಂದರು.

ಕಾಂಗ್ರೆಸ್ ಅಭ್ಯರ್ಥಿ ಎಂ.ಲಕ್ಷ್ಮಣ್ ಮಾತನಾಡಿ ನನ್ನನ್ನು ಗೆಲ್ಲಿಸಿದರೆ ಕೇಂದ್ರದಿಂದ ಹೆಚ್ಚಿನ ಅನುದಾನವನ್ನು ತಂದು ಕೆಲಸ ಮಾಡುತ್ತೇನೆ, ನನಗೊಮ್ಮೆ ಆಶೀರ್ವಾದ ಮಾಡಿ ಎಂದು ಮನವಿ ಮಾಡಿದರು. ಸಭೆಯಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯರಾದ ಮರಿತಿಬ್ಬೇಗೌಡ, ಎ.ಪಿ.ಎಂ.ಸಿ ಮಾಜಿ ಅಧ್ಯಕ್ಷರಾದ ರಘು, ಉದ್ಯಮಿ ಕೃಷ್ಣಕುಮಾರ್‌ಸಾಗರ್, ಕೆ.ಪಿ.ಸಿ.ಸಿ ಸದಸ್ಯ ನರಸೇಗೌಡ, ಜಿ.ಪಂ ಮಾಜಿ ಸದಸಸ್ಯರಾದ ರಾಕೇಶ್‌ಪಾಪಣ್ಣ, ಬೀರಿಹುಂಡಿ ಬಸವಣ್ಣ, ಮುಖಂಡರಾದ ಕೋಟೆಹುಂಡಿ ಮಹಾದೇವು,ಮಂಜುಳಾ ಮಂಜುನಾಥ್,ಅರುಣ್ ಕುಮಾರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಗುರುಸ್ವಾಮಿ,ಹರೀಶ್ ಮೊಗಣ್ಣ, ರೇವಣ್ಣ, ಶಿವಣ್ಣ ಹಾಜರಿದ್ದರು.

RELATED ARTICLES
- Advertisment -
Google search engine

Most Popular