Tuesday, April 22, 2025
Google search engine

Homeರಾಜ್ಯಸುದ್ದಿಜಾಲತಪಾಸಣೆಗೆ ವಾಹನ ನಿಲ್ಲಸದೇ ಹೋಗುತ್ತಿರುವ ಸವಾರರು, ಸಿಬ್ಬಂದಿಗಳ ಪರದಾಟ

ತಪಾಸಣೆಗೆ ವಾಹನ ನಿಲ್ಲಸದೇ ಹೋಗುತ್ತಿರುವ ಸವಾರರು, ಸಿಬ್ಬಂದಿಗಳ ಪರದಾಟ


ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ : ಲೋಕಸಭೆ ಚುನಾವಣೆಯಲ್ಲಿ ಅಕ್ರಮ ತಡೆಗಟ್ಟಲು ತಾಲೂಕುಗಳ ಗಡಿಯಲ್ಲಿ ಹಾಕಲಾಗುರುವ ಚೆಕ್ ಪೋಸ್ಟ್ ಗಳಲ್ಲಿಅಕ್ರಮವಾಗಿ ಮರಳು ಮತ್ತು ಮರ ಸಾಗಾಣಿಕೆಯನ್ನು ಪರಿಶೀಲನೆ ಮಾಡು ಸಿಬ್ಬಂದಿಗಳಿಗೆ ದೈರ್ಯವೇ ಇಲ್ಲದಂತೆ ಅಗಿದೆ.
ಮಂಡ್ಯ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಕೆ.ಆರ್.ನಗರ ತಾಲೂಕಿನ ವಿವಿದ ಕಡೆ ಹಾಕಲಾಗಿರುವ ಚೆಕ್ ಪೋಸ್ಟ್ ಗಳಲ್ಲಿ ಈ ಅಕ್ರಮ ಮರಳು ಮತ್ತು ಮರ ಸಾಗಿಸುವ ವಾಹನಗಳ ತಡೆಯಲು ಹೋದರೆ ವಾಹನಗಳನ್ನು ನಿಲ್ಲದೇ ವಾಹನ ಸವಾರರು ಹೋಗುತ್ತಿದ್ದು ಈ ಅಕ್ರಮಕ್ಕೆ ಬ್ರೇಕ್ ಹಾಕುವರೇ..ಇಲ್ಲದಂತೆ ಅಗಿದೆ.

ಚೆಕ್ ಪೋಸ್ಟ್ ಗಳಲ್ಲಿ ಒಂದು ಇಲ್ಲವೇ ಎರಡು ಮಂದಿ ಪೊಲೀಸರ ಜೊತೆ ವಿವಿಧ ಇಲಾಖೆಗಳ ಅಧಿಕಾರಿಗಳನ್ನು ನಿಯೋಜಿಸಲಾಗಿದೆ ಇವರು ಸಣ್ಣ ಪುಟ್ಟ ವಾಹನಗಳನ್ನು ತಪಾಸಣೆ ಮಾಡಿ ಇಂತಹ ವಾಹನಗಳ ತಪಾಸಣೆ ಮಾಡುವುದು ಇರಲಿ ಅದನ್ನು ನಿಲ್ಲಿಸುವ ದೈರ್ಯ ಮಾಡದಂತೆ ಅಗಿದೆ. ಇದರಿಂದ ಗಡಿ ಭಾಗದಿಂದ ಮರಳು ತುಂಬಿದ ಲಾರಿಗಳು ಮತ್ತು ವಿವಿಧ ಮರಗಳನ್ನು ತುಂಬಿಕೊಂಡು ಹೋಗುವ ಲಾರಿಗಳು ಟಾರ್ಪಲ್ ಹಾಕಿ ಕೊಂಡು ಹೋಗುತ್ತಿದ್ದು ಇದನ್ನು ತೆಗಿಸಿ ಅಲ್ಲಿ ಮರಳೋ.ಮರವೋ ಇಲ್ಲ ಹಣ ಹೆಂಡ ಸಾಗಿಸುತ್ತಿದ್ದಾರೋ ಎಂಬುದನ್ನು ತಪಾಸಣೆ ಮಾಡದೇ ಅಧಿಕಾರಿಗಳು ಕೈ ಚೆಲ್ಲಿ ಕುಳಿತು ಕೊಳ್ಳುತ್ತಿರುವುದು ಚೆಕ್ ಪೋಸ್ಟ್ ಗಳಲ್ಲಿ ಸಾಮಾನ್ಯವಾಗಿದೆ
ಚೆಕ್ ಪೋಸ್ಟ್ ಗಳಲ್ಲಿ ಇಂತಹ ಲಾರಿಗಳು ಹೋಗುತ್ತಿರುವಾಗ ತಡಯಲು ಹೋದರೆ ಅವರು ನಿಲ್ಲಿಸದೇ ಹೋಗುತ್ತಿದ್ದು ಸಿಬ್ಬಂದಿಗಳು ತಮ್ಮ ಅಸಹಾಯಕ ವ್ಯಕ್ತಪಡಿಸುತ್ತಿದ್ದು ಡೊಡ್ಡೆಕೊಪ್ಪಲು,ಹರದನಹಳ್ಳಿ ಬೇರ್ಯ ಸಮೀಪದ ಉದಯಗಿರಿ ಮತ್ತು ಹನಸೋಗೆಯ ಬಳಿಯಲ್ಲಿ ಇರುವ ಚೆಕ್ ಪೊಸ್ಟ್ ಗಳಿಗೆ ಹೆಚ್ಚಿನ ಸಿಬ್ಬಂದಿಗಳು ಮತ್ತು ಪೊಲೀಸರನ್ನ ನಿಯೋಜಿಸುತ್ತಿಲ್ಲ ಇದರಿಂದ ನಮ್ಮ ಜೀವಗಳಿಗೆ ಬೆಲೆ ಇಲ್ಲವೇ ಎಂಬುದು ಇಲ್ಲಿ ಕರ್ತವ್ಯ ನಿರ್ವಹಿಸುತ್ತಿರುವವರ ಪ್ರಶ್ನೆಯಾಗಿದೆ.

ಚುನಾವಣೆಯ ಅಕ್ರಮ ತಡೆಗಟ್ಟಲು ತಾಲೂಕು ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳು ನಿಯೋಜನೆ ಮಾಡಲಾಗಿದ್ದರು ಇವರು ಹಗಲಿನಲ್ಲಿ ಚೆಕ್ ಪೊಸ್ಟ್ ಗಳಿಗೆ ಬೇಟಿ ಕೊಟ್ಟು ರಾತ್ರಿ ವೇಳೆ ಇತ್ತ ಮುಖ ಮಾಡದ ಪರಿಣಾಮವಾಗಿ ರಾತ್ರಿ ವೇಳೆ ಚೆಕ್ ಪೋಸ್ಟ್ ನ ಸಿಬ್ಬಂದಿಗಳೇ ಜೀವ ಭಯದಲ್ಲಿಯೇ ಕರ್ತವ್ಯ ನಿರ್ವಹಿಸುವಂತೆ ಅಗಿದೆ. ಕಳೆದ ಬಾರಿ ಸುಮಲತಾ ಮತ್ತು ನಿಖಿಲ್ ಕುಮಾರ ಸ್ವಾಮಿ ಅವರ ಸ್ಪರ್ದೆಯಿಂದ ಕೆ.ಆರ್.ನಗರ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಹಣದ ಹೊಳೆಯೇ ಇಲ್ಲಿ ಹರಿದಿತ್ತು ಈ ಬಾರಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮತ್ತು ಉದ್ಯಮಿ ಸ್ಟಾರ್ ಚಂದ್ರು ಅವರ ಸ್ಪರ್ದೆಯಿಂದ ಮತ್ತೊಮ್ಮೆ ಈ ಕ್ಷೇತ್ರದಲ್ಲಿ ಹಣ- ಹೆಂಡದ ಹೊಳೆಯೇ ಹರಿಯುವುದು ಸಾಧ್ಯತೆ ಹೆಚ್ಚಿದ್ದು ಇದರ ನಡುವೆಯೇ ಈ ಚೆಕ್ ಪೋಸ್ಟ್ ಗಳ ತಪಾಸಣೆ ನೋಡಿದರೇ ಅಕ್ರಮಗಳಿಗೆ ಬ್ರೇಕ್ ಬೀಳುವುದು ಕಷ್ಟ ಸಾಧ್ಯ.

” ಜಿಲ್ಲಾಧಿಕಾರಿಗಳು ಭೇಟಿ ನೀಡಲಿ “
ಈ ಕೆ.ಆರ್.ನಗರ ತಾಲೂಕು ಮಂಡ್ಯ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರಲಿದ್ದು ಅಡಳಿತವಾಗಿ ಮೈಸೂರು ಜಿಲ್ಲೆಗೆ ಸೇರಿದ್ದು ಇಲ್ಲಿನ ಚೆಕ್ ಪೋಸ್ಟ್ ಜವಬ್ದಾರಿ ಇಬ್ಬರು ಜಿಲ್ಲಾಧಿಕಾರಿಗಳ ಮೇಲಿದ್ದು ಈ ಇಬ್ಬರು ಜಿಲ್ಲಾಧಿಕಾರಿಗಳು ಇಲ್ಲಿನ ಚೆಕ್ ಪೋಸ್ಟ್ ಗಳಿಗೆ ಭೇಟಿ ಕೊಟ್ಟು ಹೆಚ್ಚಿನ ಪೊಲೀಸ್ ಮತ್ತು ವಿವಿಧ ಇಲಾಖೆಯ ಸಿಬ್ಬಂದಿಗಳನ್ನು ನೇಮಿಸಿ ಅಕ್ರಮ ತಡೆಯಲು ಮುಂದಾಗ ಬೇಕಿದೆ.

RELATED ARTICLES
- Advertisment -
Google search engine

Most Popular