ಗುಂಡ್ಲುಪೇಟೆ: ಈ ಭಾರಿಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಎಸ್.ಬಾಲರಾಜು ರವರ ಗೆಲುವಿಗಾಗಿ ಜೆಡಿಎಸ್.ಮುಖಂಡರು ಹಾಗೂ ಕಾರ್ಯಕರ್ತರು ಶ್ರಮಿಸಿಬೇಕು ಹಾಗೂ ಮತ ನೀಡಬೇಕು ಎಂದು ಜೆಡಿಎಸ್ ಮುಖಂಡ ಕಡಬೂರು ಮಂಜುನಾಥ್ ತಿಳಿಸಿದರು.
ಜೆಡಿಎಸ್ ಪಕ್ಷದ ಕಚೇರಿ ಇಂದು ಕಡಬೂರು ಮಂಜುನಾಥ್ ಅಧ್ಯಕ್ಷತೆಯಲ್ಲಿ ಜೆಡಿಎಸ್ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರ ಸಭೆಯನ್ನು ಮಾಡಲಾಯಿತು.
ಈ ವೇಳೆ ಜೆ.ಡಿ.ಎಸ್ ಮತ್ತು ಬಿಜೆಪಿ ಪಕ್ಷದ ಮೈತ್ರಿ ಅಭ್ಯರ್ಥಿ ಎಸ್.ಬಾಲರಾಜ್ ರವರ ಗೆಲುವಿಗೆ ಪ್ರಾಮಾಣಿಕವಾಗಿ ಜೆಡಿಎಸ್ ಮುಖಂಡರು ಮತ್ತು ಕಾರ್ಯಕರ್ತರು ಕೆಲಸ ಮಾಡಬೇಕು ಹಾಗೂ ಮೈತ್ರಿಯ ಅಭ್ಯರ್ಥಿಗೆ ಜೆಡಿಎಸ್ ಕಾರ್ಯಕರ್ತರಿಂದ ಯಾವುದೇ ರೀತಿಯಾದಂತಹ ಮುಜುಗರ ವಾಗಬಾರದು, ಕಾರ್ಯಕರ್ತರೆಲ್ಲರೂ ಮೈತ್ರಿ ಧರ್ಮವನ್ನು ಪಾಲಿಸಬೇಕು, ಸದೃಢ ರಾಷ್ಟ್ರ ನಿರ್ಮಾಣಕ್ಕಾಗಿ, ಸಮರ್ಥ ನಾಯಕತ್ವಕ್ಕಾಗಿ ನರೇಂದ್ರ ಮೋದಿ ಅವರು ಪ್ರಧಾನಿಯಾಗಬೇಕೆಂದು ಆ ನಿಟ್ಟಿನಲ್ಲಿ ರಾಜ್ಯಮಟ್ಟದಲ್ಲಿ ಜೆಡಿಎಸ್ ಮೈತ್ರಿ ಮಾಡಿಕೊಂಡಿದೆ, ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷರಾದ ಕುಮಾರಸ್ವಾಮಿಯವರ ನಿರ್ಧಾರಕ್ಕೆ ಗೌರವಿಸಿ ನಾವು ನೀವೆಲ್ಲರೂ ಮೈತ್ರಿ ಧರ್ಮವನ್ನ ಪಾಲಿಸಬೇಕೆಂದು ಸಭೆಯಲ್ಲಿ ತಿಳಿಸಿದರು.
ಸಭೆಯಲ್ಲಿ ಕಬ್ಬಳ್ಳಿ ಬಸವರಾಜು ಸ್ವಾಮಿ, ಕಗ್ಗಳದ ಹುಂಡಿ ಗಂಗಾಧರ, ಜಯರಾಮ್, ಗೀತಾ, ಮುತ್ತಣ್ಣ, ಆನಂದ, ದಿವ್ಯ ನಾಗ್, ಚಂದ್ರಪ್ಪ, ಮಹೇಶ, ಬಾಚಳ್ಳಿ ಮಣಿಕಂಠ, ಕುನಗಳ್ಳಿ ನಾಗರಾಜ್, ವಿಶ್ವ, ಮಂಚಳ್ಳಿ ಕುಮಾರ, ವಸಂತ, ಚಂದ್ರು ಮಣಿ, ಮುಂತಾದ ಜೆ.ಡಿ.ಎಸ್ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಸಭೆಯಲ್ಲಿ ಭಾಗವಹಿಸಿದ್ದರು.