ಗುಂಡ್ಲುಪೇಟೆ: ತಾಲೂಕಿನ ತೆರಕಣಾಂಬಿ ಗ್ರಾಮದ ಹೊರವಲಯದಲ್ಲಿ ಇರುವ ಕೆರೆಯಲ್ಲಿ ಈಜಲು ಹೋಗಿ ಯುವಕನೋರ್ವ ಸಾವಿಗೀಡಾಗಿರುವ ಘಟನೆ ನಡೆದಿದೆ.
ತೆರಕಣಾಂಬಿ ಗ್ರಾಮದ ಕುಂಬಾರ ಸಮುದಾಯದ ಯುವಕ ವಿನೋದ್ ಬಿನ್ ಮಹದೇವಶೆಟ್ಟಿ(20) .
ಈ ತ ಇಂದು ಬೆಳಿಗ್ಗೆ ಸುಮಾರು 10 ಗಂಟೆ ಸಮಯದಲ್ಲಿ ಕೆರೆಗೆ ಈಜಲು ತೆರಳಿದ್ದಾನೆ ಎಂದು ಮಾಹಿತಿ ಲಬ್ಯವಾಗಿದೆ ಬಳಿಕ ಕೆರೆಯಲ್ಲಿ ಈಜು ಬಾರದೇ ಮುಳುಗಿ ಸಾವೀಗಿಡಾಗಿದ್ದಾರೆ.
ಇನ್ನೂ ಘಟನಾಸ್ಥಳಕ್ಕೆ ವಿಷಯ ತಿಳಿಯುತ್ತಿದ್ದಂತೆ ತೆರಕಣಾಂಬಿ ಪೋಲಿಸರು ಬೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿ ಮೃತದೇಹವನ್ನು ಹತ್ತಿರದ ಆಸ್ಪತ್ರೆಯ ಶವಾಗಾರಕ್ಕೆ ತಲುಪಿಸಿ ಶವ ಪರೀಕ್ಷೆ ನಡೆದ ನಂತರ ವಾರಸುದಾರರಿಗೆ ಮೃತದೇಹವನ್ನ ಹಸ್ತಾಂತರಿಸಿದರು.
ಈ ಸಂಬಂಧ ತೆರಕಣಾಂಬಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಪೋಲಿಸ್ ಸಬ್ ಇನ್ಸ್ಪೆಕ್ಟರ್ ಈಶ್ವರ್ ಮಾಹಿತಿ ನೀಡಿದ್ದಾರೆ.