Tuesday, April 22, 2025
Google search engine

Homeಅಪರಾಧತುಮಕೂರು: ಜೂಜಾಟದಲ್ಲಿ ತೊಡಗಿದ್ದ 291 ಮಂದಿಯ ಬಂಧನ

ತುಮಕೂರು: ಜೂಜಾಟದಲ್ಲಿ ತೊಡಗಿದ್ದ 291 ಮಂದಿಯ ಬಂಧನ

ತುಮಕೂರು: ಯುಗಾದಿ ಹಬ್ಬದ ಹಿನ್ನೆಲೆಯಲ್ಲಿ ಜೂಜಾಟದಲ್ಲಿ ತೊಡಗಿದ್ದವರ ವಿರುದ್ಧ ತುಮಕೂರು ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ.

ಜೂಜಾಟದಲ್ಲಿ ತೊಡಗಿದ್ದ ಹಲವರ ಮೇಲೆ‌ ಪೊಲೀಸರು ದಾಳಿ ನಡೆಸಿ ಒಂದೇ ದಿನ 53 ಪ್ರಕರಣ ದಾಖಲಿಸಿ ಕೊಂಡಿದ್ದಾರೆ.

ಒಟ್ಟು 291 ಜನರನ್ನು ಬಂಧಿಸಿ, 3 ಲಕ್ಷದ 21 ಸಾವಿರದ 853 ರೂ ವಶಕ್ಕೆ ಪಡೆದಿದ್ದಾರೆ.

ತುಮಕೂರು ನಗರ ಉಪವಿಭಾಗದಲ್ಲಿ 15 ಪ್ರಕರಣ, 77 ಜನ ಬಂಧನ,‌ ತಿಪಟೂರು ಉಪವಿಭಾಗದಲ್ಲಿ 11 ಪ್ರಕರಣ 63 ಜನರ ಬಂಧನ, ಶಿರಾ ಉಪವಿಭಾಗದಲ್ಲಿ 20 ಪ್ರಕರಣ 108 ಜನರ ಬಂಧನ, ಮಧುಗಿರಿ ಉಪವಿಭಾಗದಲ್ಲಿ 7 ಪ್ರಕರಣ 43 ಜನರನ್ನು ಬಂಧಿಸಲಾಗಿದೆ.

ತುಮಕೂರು ಎಸ್ ಪಿ ಅಶೋಕ್ ಕೆ.ವಿ ನೇತೃತ್ವದಲ್ಲಿ ಕಾರ್ಯಾಚರಣೆ‌ ನಡೆದಿದ್ದು,  ಜೂಜಾಟದಲ್ಲಿ ಭಾಗಿಯಾಗಿದ್ದವರನ್ನ ಬಂಧಿಸಿ ಪೊಲೀಸರಿಂದ ಮುಂದುವರೆದಿದೆ.

RELATED ARTICLES
- Advertisment -
Google search engine

Most Popular