Tuesday, April 22, 2025
Google search engine

HomeUncategorizedರಾಷ್ಟ್ರೀಯದೇಶದಲ್ಲಿರುವುದು ದೃಢ ಸರ್ಕಾರ, ಮನೆಗಳಿಗೆ ನುಗ್ಗಿ ಭಯೋತ್ಪಾದಕರನ್ನು ಕೊಲ್ಲಲಾಗುತ್ತಿದೆ: ಪ್ರಧಾನಿ ಮೋದಿ

ದೇಶದಲ್ಲಿರುವುದು ದೃಢ ಸರ್ಕಾರ, ಮನೆಗಳಿಗೆ ನುಗ್ಗಿ ಭಯೋತ್ಪಾದಕರನ್ನು ಕೊಲ್ಲಲಾಗುತ್ತಿದೆ: ಪ್ರಧಾನಿ ಮೋದಿ

ಉತ್ತರಾಖಂಡ: ದೇಶದಲ್ಲಿರುವುದು ದೃಢ ಸರ್ಕಾರ ಹೀಗಾಗಿ ಭಯೋತ್ಪಾದಕರನ್ನು ಅವರ ಮನೆಗಳಿಗೆ ನುಗ್ಗಿ ಕೊಲ್ಲಲಾಗುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಇಂದು ಉತ್ತರಾಖಂಡದ ರಿಷಿಕೇಶದಲ್ಲಿ ವಿಜಯ ಸಂಕಲ್ಪ ಯಾತ್ರೆಯಲ್ಲಿ ಪಾಲ್ಗೊಂಡು ಮಾತನಾಡಿದರು.

 ಭಾರತದ ತ್ರಿವರ್ಣ ಧ್ವಜ ಯುದ್ಧ ವಲಯದಲ್ಲೂ ಭದ್ರತೆಯ ಭರವಸೆಯಾಗುತ್ತಿದೆ. 7 ದಶಕಗಳ ಬಳಿಕ ಜಮ್ಮು ಮತ್ತು ಕಾಶ್ಮೀರದಲ್ಲಿ 370ನೇ ವಿಧಿಯನ್ನು ರದ್ದುಪಡಿಸಲಾಗಿದೆ ಎಂದರು.

ತ್ರಿವಳಿ ತಲಾಖ್ ವಿರುದ್ಧ ಕಾನೂನು ರಚಿಸಲಾಗಿದೆ, ಲೋಕಸಭೆ ಹಾಗೂ ವಿಧಾನಸಭೆಯಲ್ಲಿ ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಸಿಕ್ಕಿದೆ. ಜತೆಗೆ ಸಾಮಾನ್ಯ ವರ್ಗಕ್ಕೆ ಸೇರಿದ ಬಡವರಿಗೂ ಶೇ.100ರಷ್ಟು ಮೀಸಲಾತಿ ಸಿಕ್ಕಿದೆ. ಕಳೆದ 10 ವರ್ಷಗಳಲ್ಲಿ ಭಾರತವನ್ನು ಹಿಂದಿಗಿಂತಲೂ ಹಲವು ಪಟ್ಟು ಬಲಿಷ್ಠಗೊಳಿಸಿರುವ ಸರ್ಕಾರ ಇಂದು ದೇಶದಲ್ಲಿದೆ ಎಂದರು. ದೇಶದಲ್ಲಿ ದುರ್ಬಲ ಮತ್ತು ಅಸ್ಥಿರ ಸರ್ಕಾರ ಇದ್ದಾಗಲೆಲ್ಲಾ ಶತ್ರುಗಳು ಲಾಭ ಮಾಡಿಕೊಂಡಿದ್ದಾರೆ, ಮತ್ತು ಭಯೋತ್ಪಾದನೆಯನ್ನು ಹಬ್ಬಿಸಿದ್ದಾರೆ. ಈಗ ಮೋದಿ ಸರ್ಕಾರ ಬಲಿಷ್ಠವಾಗಿದೆ ಹಾಗಾಗಿ ಅವರ ಮನೆಗಳಿಗೇ ನುಗ್ಗಿ ಕೊಲ್ಲಲಾಗುತ್ತಿದೆ ಎಂದು ಮೋದಿ ಹೇಳಿದರು.

ಕಾಂಗ್ರೆಸ್​ ಅವಧಿಯಲ್ಲಿ ಸೈನಿಕರಿಗೆ ಬುಲೆಟ್​ ಪ್ರೂಫ್​ ಜಾಕೆಟ್​ಗಳ ಕೊರತೆ ಇತ್ತು, ಶತ್ರುಗಳ ಗುಂಡುಗಳಿಂದ ರಕ್ಷಿಸಿಕೊಳ್ಳಲು ಯಾವುದೇ ವ್ಯವಸ್ಥೆ ಇರಲಿಲ್ಲ. ಭಾರತದಲ್ಲೇ ಸಿದ್ಧಪಡಿಸಿದ ಬುಲೆಟ್​ ಪ್ರೂಫ್ ಜಾಕೆಟ್​ಗಳನ್ನು ಸೈನಿಕರಿಗೆ ನೀಡಿ ಅವರ ಪ್ರಾಣ ರಕ್ಷಣೆ ಮಾಡಿದ್ದು ಬಿಜೆಪಿ ಎಂದರು.

ಇಂದು ಯುದ್ಧ ವಿಮಾನಗಳು ಹಾಗೂ ವಿಮಾನವಾಹಕ ನೌಕೆಗಳವರೆಗೆ ಎಲ್ಲವೂ ದೇಶದಲ್ಲಿಯೇ ಉತ್ಪಾದನೆಯಾಗುತ್ತಿವೆ. ಕಾಂಗ್ರೆಸ್​ ಸರ್ಕಾರ ಅಧಿಕಾರದಲ್ಲಿದ್ದಾಗ ಮಧ್ಯವರ್ತಿಗಳು ಜನರ ನ್ಯಾಯಯುತ ಹಣವನ್ನು ಕಿತ್ತುಕೊಳ್ಳುತ್ತಿದ್ದರು, ಈಗ ಜನರ ಹಣ ನೇರವಾಗಿ ಅವರ ಬ್ಯಾಂಕ್​ ಖಾತೆಗಳಿಗೆ ವರ್ಗಾವಣೆಯಾಗುತ್ತಿದೆ. ಈ ಲೂಟಿಯನ್ನು ಮೋದಿ ನಿಲ್ಲಿಸಿದ್ದಾರೆ, ಹೀಗಾಗಿ ಮೋದಿ ಮೇಲಿನ ಸಿಟ್ಟು ಆಕಾಶದೆತ್ತರಕ್ಕೆ ಏರಿದೆ ಎಂದು ಹೇಳಿದರು.

RELATED ARTICLES
- Advertisment -
Google search engine

Most Popular