Tuesday, April 22, 2025
Google search engine

Homeರಾಜ್ಯಮಂಡ್ಯದಲ್ಲಿ ಸಂಭ್ರಮ, ಸಡಗರದೊಂದಿಗೆ ರಂಜಾನ್ ಆಚರಣೆ

ಮಂಡ್ಯದಲ್ಲಿ ಸಂಭ್ರಮ, ಸಡಗರದೊಂದಿಗೆ ರಂಜಾನ್ ಆಚರಣೆ

ಮಂಡ್ಯ: ಇಂದು ನಾಡಿನ ಎಲ್ಲಡೆ ರಂಜಾನ್ ಹಬ್ಬದ ಸಂಭ್ರಮಾಚರಣೆ ಮನೆ ಮಾಡಿದ್ದು,  ಮಂಡ್ಯದಲ್ಲಿ ಸಂಭ್ರಮ ಸಡಗರದೊಂದಿಗೆ ರಂಜಾನ್ ಆಚರಿಸಲಾಯಿತು.

ಮಂಡ್ಯ ಈದ್ಗಾ ಮೈದಾನದಲ್ಲಿ ಸಾವಿರಾರು ಮುಸ್ಲಿಂ ಬಾಂದವರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.

ಮುಸ್ಲಿಂ ಬಾಂಧವರು ಕಳೆದ ಒಂದು ತಿಂಗಳಿನಿಂದ ಉಪವಾಸ ಮಾಡುತ್ತಿದ್ದರು.

ಮೌಲ್ವಿ ಧರ್ಮಗುರುಗಳಿಂದ ಧಾರ್ಮಿಕ ಸಂದೇಶ ಸಾರಲಾಯಿತು. ಮುಸ್ಲಿಂ ಬಾಂಧವರು ಮಸೀದಿಗಳಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿ ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು.

ರಂಜಾನ್ ಆಚರಣೆಯಲ್ಲಿ ಮುಸ್ಲಿಂ ಬಾಂಧವರ ಜೊತೆ ಶಾಸಕ ಗಣಿಗ ರವಿಕುಮಾರ್ ಭಾಗವಹಿಸಿ, ಶುಭ ಕೋರಿದರು.

ಈ ವೇಳೆ ಶಾಂತಿ, ಸಮೃದ್ಧಿ, ಉತ್ತಮ ಮಳೆ ಹಾಗೂ ಬೆಳೆಗಾಗಿ ಮಾಜಿ ನಗರಸಭೆ ಸದಸ್ಯ ನಹೀಮ್ ಪ್ರಾರ್ಥಿಸಿದರು.

ಇದೇ ವೇಳೆ ಮುಸ್ಲಿಂ ಧರ್ಮದ ಮುಖಂಡರು ಸೇರಿ ಹಲವರು ಭಾಗಿಯಾಗಿದರು.

RELATED ARTICLES
- Advertisment -
Google search engine

Most Popular