Monday, April 21, 2025
Google search engine

Homeಸಿನಿಮಾಅಣ್ಣಾವ್ರ 18ನೇ ಪುಣ್ಯ ಸ್ಮರಣೆ: ಕುಟುಂಬದಿಂದ ಪೂಜೆ

ಅಣ್ಣಾವ್ರ 18ನೇ ಪುಣ್ಯ ಸ್ಮರಣೆ: ಕುಟುಂಬದಿಂದ ಪೂಜೆ

ವರನಟ ಡಾ.ರಾಜ್ ಕುಮಾರ್ ಅವರ ೧೮ನೇ ಪುಣ್ಯ ಸ್ಮರಣೆಯನ್ನು ಇಂದು ಶುಕ್ರವಾರ ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿರುವ ಅವರ ಸಮಾಧಿಯಲ್ಲಿ ಆಚರಿಸಲಾಯಿತು. ಅಣ್ಣಾವ್ರ ಮಕ್ಕಳಾದ ರಾಘವೇಂದ್ರ ರಾಜಕುಮಾರ್, ಪೂರ್ಣಿಮಾ, ಲಕ್ಷ್ಮಿ ಸೇರಿದಂತೆ ಕುಟುಂಬದ ಸದಸ್ಯರು ಆಗಮಿಸಿ ಪೂಜೆ ಸಲ್ಲಿಸಿದರು.

ಪ್ರತಿ ವರ್ಷದಂತೆ ಈ ವರ್ಷವೂ ಡಾ.ರಾಜ್ ಕುಮಾರ್ ಅಭಿಮಾನಿಗಳು ಸಮಾಧಿ ಬಳಿ ರಕ್ತದಾನ ಶಿಬಿರ, ಅನ್ನ ಸಂತರ್ಪಣೆ, ಕಣ್ಣುದಾನ ಸೇರಿದಂತೆ ಹಲವಾರು ಸಮಾಜಮುಖಿ ಕೆಲಸಗಳನ್ನು ಮಾಡಿದರು. ಅಣ್ಣಾವ್ರ ಸಮಾಧಿ ದರ್ಶನಕ್ಕಾಗಿ ಸಾಲುಗಟ್ಟಿ ಅಭಿಮಾನಿಗಳು ನಿಂತು ಪೂಜೆ ಸಲ್ಲಿಸಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ರಾಘವೇಂದ್ರ ರಾಜ್ ಕುಮಾರ್, ಸಮಾಧಿ ಹತ್ತಿರ ಬಂದಾಗಷ್ಟೇ ಅಪ್ಪಾಜಿ ನಮ್ಮೊಂದಿಗೆ ಇಲ್ಲ ಅಂತ ಅನಿಸತ್ತೆ. ಅದರಾಚೆ ಅವರು ನಮ್ಮೊಂದಿಗೆ ಸದಾ ಇದ್ದಾರೆ, ಇರುತ್ತಾರೆ ಎಂದರು. ಅಭಿಮಾನಿಗಳ ಜೊತೆ ಒಂದಷ್ಟು ಹೊತ್ತು ರಾಘಣ್ಣ ಇದ್ದರು.

RELATED ARTICLES
- Advertisment -
Google search engine

Most Popular