ಶಿವಮೊಗ್ಗ: ಸಾಗರದ ಪ್ರಸಿದ್ಧ ಶ್ರೀ ಮಹಾ ಗಣಪತಿ ರಥೋತ್ಸವದಲ್ಲಿ ಇಂದು ಶುಕ್ರವಾರ ಬೆಳಿಗ್ಗೆ ಲೋಕಸಭಾ ಚುನಾವಣೆ 2024 ರ ಪ್ರಯುಕ್ತ ಸ್ವೀಪ್ ಸಮಿತಿ ವತಿಯಿಂದ ಉಪವಿಭಾಗಾಧಿಕಾರಿಗಳು ಹಾಗೂ ಸಹಾಯಕ ಚುನಾವಣಾಧಿಕಾರಿಗಳಾದ ಯತೀಶ್ ಹಾಗೂ ತಂಡದವರು ಮತದಾನದ ಕುರಿತು ಜಾಗೃತಿ ಮೂಡಿಸಿದರು. ಈ ಸಂದರ್ಭದಲ್ಲಿ ಸಾಗರ ತಹಶೀಲ್ದಾರ್, ತಾಲ್ಲೂಕು ಪಂಚಾಯಿತಿ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಹಾಜರಿದ್ದರು.