ಚಾಮರಾಜನಗರ: ಶೃಂಗೇರಿ ಶಾರದಾ ಪೀಠದ ಜಗದ್ಗುರು ಶ್ರೀ ಶ್ರೀ ಭಾರತಿ ತೀರ್ಥ ಮಹಾಸ್ವಾಮಿಗಳವರ ೭೪ನೇ ಜಯಂತಿ ಮಹೋತ್ಸವ ವನ್ನು ಏಪ್ರಿಲ್ ೧೪ ಭಾನುವಾರ ಇಂದು ಬೆಳಗ್ಗೆ ೧೧ ಗಂಟೆಗೆ ಶ್ರೀ ಶಾರದಾ ಭಜನಾ ಮಂಡಳಿ, ಋಗ್ವೇದಿ ಯೂತ್ ಕ್ಲಬ್ ವತಿಯಿಂದ ವಿಶೇಷ ಪೂಜೆ ,ಭಜನೆ, ಪಾರಾಯಣ ,ಪ್ರವಚನ ಕಾರ್ಯಕ್ರಮವನ್ನು ಋಗ್ವೇದಿ ಕುಟೀರದಲ್ಲಿ ಹಮ್ಮಿಕೊಳ್ಳಲಾಗಿದೆ.
ಭಜನೆ ಹಾಗು ಪಾರಾಯಣ ಶ್ರೀ ಶಾರದಾ ಭಜನಾ ಮಂಡಳಿ ವತಿಯಿಂದ ನಡೆಯಲಿದೆ. ಅಧ್ಯಕ್ಷತೆಯನ್ನು ಶ್ರೀ ಶಾರದಾ ಭಜನಾ ಮಂಡಳಿಯ ಅಧ್ಯಕ್ಷರಾದ ವಿಜಯಲಕ್ಷ್ಮಿ ವಹಿಸುವರು. ಪ್ರವಚನವನ್ನು ಸಂಸ್ಕೃತಿ ಚಿಂತಕ ಸುರೇಶ್ ಎನ್ ಋಗ್ವೇದಿ ನೀಡಲಿದ್ದಾರೆ ಎಂದು ಋಗ್ಬೇದಿ ಯೂತ್ ಕ್ಲಬ್ ಅಧ್ಯಕ್ಷರಾದ ಶರಣ್ಯ ಎಸ್ ಋಗ್ವೇದಿ ತಿಳಿಸಿದ್ದಾರೆ.