ವರದಿ : ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ : ಡಾ.ಬಿ.ಆರ್ ಅಂಬೇಡ್ಕರ್ ಅವರ ಸಂವಿಧಾನದಿಂದ ಎಲ್ಲರಿಗೂ ಸಮಾನ ಅವಕಾಶಗಳು ಸಿಗುವಂತೆ ಆಗಿದೆ ಎಂದು ಸಾಲಿಗ್ರಾಮ ತಹಶೀಲ್ದಾರ್ ನರಗುಂದ ಹೇಳಿದರು.
ಸಾಲಿಗ್ರಮ ಪಟ್ಟಣದ ತಾಲೂಕು ಕಚೇರಿಯಲ್ಲಿ ಡಾಕ್ಟರ್ ಬಿ ಆರ್ ಅಂಬೇಡ್ಕರ್ ಅವರ ೧೩೩ನೇ ಜನ್ಮದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಲೋಕಸಭಾ ಚುನಾವಣೆ ನೀತಿ ಸಂಹಿತೆ ನಿಮಿತ್ತ ಸರಳವಾಗಿ ಆಚರಣೆ ಮಾಡಲಾಗುತ್ತಿದೆ ಎಂದ ಅವರು ಇಡೀ ವಿಶ್ವವೇ ಮೆಚ್ಚುವ ಮಹಾನ್ ನಾಯಕರಾದ ಡಾ.ಬಿ.ಆರ್ ಅಂಬೇಡ್ಕರ್ ಅವರು ಕೊಟ್ಟಿರುವ ಸಂವಿಧಾನದಿಂದ ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ಸಮಾನತೆ ಸಿಗುವಂತೆ ಆಗಿದೆ ಎಂದರು.
ಇದೇ ಸಂದರ್ಭದಲ್ಲಿ ಸಾಲಿಗ್ರಾಮ ತಾಲೂಕು ಕಾಂಗ್ರೆಸ್ ಪರಿಶಿಷ್ಟ ಘಟಕದ ಅಧ್ಯಕ್ಷರಾದ ಕಂಠಿಕುಮಾರ್ ಸಾಲಿಗ್ರಾಮ ತಾಲೂಕು ಕೇಂದ್ರ ಆಗಿದ್ದರು ಅಂಬೇಡ್ಕರ್ ಭವನಕ್ಕೆ ನಿವೇಶನ ಗುರುತಿಸಲು ಇದುವರೆಗೂ ಆಗಿಲ್ಲ ಶೀಘ್ರದಲ್ಲೇ ಇದರ ಬಗ್ಗೆ ತಾಲೂಕು ಆಡಳಿತ ಕ್ರಮ ಕೈಗೊಳ್ಳಬೇಕು ಶಾಸಕರಾದ ಡಿ ರವಿಶಂಕರ್ ಅವರು ಅಂಬೇಡ್ಕರ್ ಭವನ ನಿರ್ಮಾಣ ಮಾಡಲು ಉತ್ಸುಕತೆ ಹೊಂದಿದ್ದು ಅಧಿಕಾರಿಗಳು ಇನ್ನಾದರೂ ಗಮನಹರಿಸಬೇಕು ಎಂದು ಆಗ್ರಹಿಸಿದರು. ಸಂವಿಧಾನದಿಂದ ಪ್ರತಿಯೊಬ್ಬರೂ ಅಧಿಕಾರ ಸಿಗುತ್ತಿದ್ದು ಅದನ್ನು ಎಲ್ಲರೂ ಅನುಭವಿಸುವಂತೆ ಆಗಿದೆ ಎಂದು ಜಿಲ್ಲಾ ದಲಿತ ಸಮಿತಿ ಮುಖಂಡರಾದ ಕಳ್ಳಿಮುದ್ದನಹಳ್ಳಿ ಚಂದ್ರು ಹೇಳಿದರು.
ಈ ಸಂದರ್ಭದಲ್ಲಿ ಮುಖಂಡ ರಾಜಯ್ಯ ಮತ್ತು ಉಪನ್ಯಾಸಕ ನಾಗರಾಜ್ ಗ್ರಾಂ ಪಂ ಮಾಜಿ ಉಪಾಧ್ಯಕ್ಷೆ ಸುಧಾರೇವಣ್ಣ ಸದಸ್ಯರಾದ ಗಂಗಾಧರ್ ಹೊನ್ನೇನಹಳ್ಳಿ ಜವರಯ್ಯ ಸಿಡಿಸಿ ಸದಸ್ಯರಾದ ಸಂತೋಷ್ ಯುವ ಮುಖಂಡ ಪ್ರೀತಂ ಸೇರಿದಂತೆ ಹಲವರು ಮಾತನಾಡಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ತಿಮ್ಮಪ್ಪ ಗ್ರಾಂ ಪಂ ಮಾಜಿ ಅಧ್ಯಕ್ಷ ಎಸ್ ಆರ್ ಪ್ರಕಾಶ್ ಕಾಂಗ್ರೆಸ್ ಮುಖಂಡರಾದ ಪುರಿ ಗೋವಿಂದರಾಜು ಬೆಟ್ಟಹಳ್ಳಿ ಸಣ್ಣಯ್ಯ ಕುಮಾರ್ ಜನಾರ್ದನ ಸೇರಿದಂತೆ ಹಲವರು ಉಪಸ್ಥಿತರಿದ್ದರು.