ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ: ಮೇಕೆದಾಟು ಅಣೆಕಟ್ಟೆ ನಿರ್ಮಾಣಕ್ಕೆ ಅನುದಾನದೊಂದಿಗೆ ಅನುಮತಿ, ಕಾವೇರಿ ಸಮಸ್ಯೆ ಇತ್ಯರ್ಥ ಸೇರಿದಂತೆ ರಾಜ್ಯದ ನೀರಾವರಿ ಸಮಸ್ಯೆಗಳ ಶಾಶ್ವತ ಪರಿಹಾರ ಹಾಗೂ ರಾಜ್ಯದ ಅಭಿವೃದ್ಧಿಗಾಗಿ ಹೆಚ್.ಡಿ.ಕುಮಾರಸ್ವಾಮಿಯವರನ್ನು ಕ್ಷೇತ್ರದ ಜನತೆ ಅತೀ ಹೆಚ್ಚು ಮತಗಳನ್ನು ನೀಡುವ ಮೂಲಕ ಗೆಲ್ಲಿಸಬೇಕೆಂದು ತಾಲೂಕು ಜಾ.ದಳ ವಕ್ತಾರ ಕೆ.ಎಲ್.ರಮೇಶ್ ಪುರಸಭಾ ಸದಸ್ಯ ಕೆ.ಎಲ್.ಜಗದೀಶ್ ಮನವಿ ಮಾಡಿದರು.
ಭಾನುವಾರ ಪಟ್ಟಣದ ೩ನೇ ವಾರ್ಡ್ನಲ್ಲಿ ಬಿಜೆಪಿ ಹಾಗೂ ಜಾ.ದಳ ಪಕ್ಷಗಳ ಕಾರ್ಯಕರ್ತರೊಡಗೂಡಿ ಮನೆ ಮನೆ ಭೇಟಿ ನೀಡಿ ಮತಯಾಚನೆ ಮಾಡುವ ಮೂಲಕ ಭರ್ಜರಿ ಮತಭೇಟೆ ನಡೆಸಿ ಮಾತನಾಡಿದರು. ರಾಜ್ಯದಲ್ಲಿ ಉಳಿದಿರುವ ಧೀರ್ಘಕಾಲದ ನೀರಾವರಿ ಯೋಜನೆಗಳಿಗೆ ಅನುಮತಿ ಮತ್ತು ಅನುದಾನ ತರಲು ಹೆಚ್.ಡಿ.ಕುಮಾರಸ್ವಾಮಿಯವರನ್ನು ಮತದಾರರು ಬೆಂಬಲಿಸಭೇಕೆಂದರ. ಮೇಕೆದಾಟು ಅಣೆಕಟ್ಟೆ ನಿರ್ಮಾಣ, ಮಹದಾಯಿ, ಕಳಸಬಂಡೂರಿ, ಕೃಷ್ಣ ಯೋಜನೆಗಳ ಸಮಸ್ಯೆಗಳನ್ನು ನಿವಾರಿಸಿ ಶಾಶ್ವತವಾಗಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಕೇಂದ್ರದಲ್ಲಿ ಮೋದಿ ಹಾಗೂ ರಾಜ್ಯದಲ್ಲಿ ಹೆಚ್.ಡಿ.ಕುಮಾರಸ್ವಾಮಿಯವರ ಗೆಲವು ತೀರಾ ಅವಶ್ಯಕವಾಗಿದೆ ಎಂದರು.
ರಾಜ್ಯದ ರೈತರ ಸಮಸ್ಯೆಗಳಿಗೆ ಪರಿಹಾರ ಕಾಣಲು ಹಾಗೂ ರೈತರ ಬೆಳೆಗೆ ಬೆಂಬಲ ಬೆಲೆಗೆ ಅನುಷ್ಠಾನಗೊಳಿಸಲು ಕೇಂದ್ರದಲ್ಲಿ ಕುಮಾರಸ್ವಾಮಿಯವರು ಕೇಂದ್ರಮಂತ್ರಿಯಾಗಬೇಕೆಂದು ಆಶಿಸಿದ ಅವರು ಇವರ ಗೆಲುವಿನಿಂದ ಕೇಂದ್ರದ ಹತ್ತಾರು ಯೋಜನೆಗಳು ಮಂಡ್ಯದೊಂದಿಗೆ ಕೃಷ್ಣರಾಜನಗರಕ್ಕೆ ಬರಲು ಸಾಧ್ಯವಾಗುತ್ತದೆ ಎಂದರು.
ಮತಯಾಚನೆ ಸಂಧರ್ಭದಲ್ಲಿ ಮುಖಂಡರಾದ ಮೂಲೆಪೆಟ್ಲುಮಹದೇವ್, ಮಿರ್ಲೆಸುಜಯ್‌ಗೌಡ, ಶಿವಕುಮಾರ್, ಕೃಷ್ಣಶೆಟ್ಟಿ, ವಿಜಯಸಾಗರ್, ಬಾಬು, ಬಾಲೂರು ಶಿವಲಿಂಗೇಗೌಡ, ಫೈನಾನ್ಸ್ಜಗದೀಶ್, ರುದ್ರೇಶ್, ಹೋಟೆಲ್‌ಮಹದೇವ, ಮನೋಹರ್, ಜಿ.ಪಿ.ಮಂಜುನಾಥ್, ಕಾಟ್ನಾಳ್ ಎಲ್.ಹೇಮಂತ್ ಕುಮಾರ್, ರಂಗಣ್ಣ, ಹಂಪಾಪುರಸುರೇಶ್, ಲೋಕೇಶ್, ಹೆಚ್.ಪಿ.ಶಿವಣ್ಣ, ಹೆಚ್.ಎಸ್.ಜೀವನ್, ಜಾ.ದಳ ಮತ್ತು ಬಿಜೆಪಿ ಪಕ್ಷದ ಹಲವಾರು ಮುಖಂಡರು ಹಾಗೂ ಕಾರ್ಯಕರ್ತರು ಪಾಲ್ಗೊಂಡಿದ್ದರು.