ಮಂಡ್ಯ: ಅರಣ್ಯದಲ್ಲಿ ಕಾಡು ಪ್ರಾಣಿಗಳಿಗೆ ತಲೆದೋರಿದ ಕುಡಿಯುವ ನೀರಿನ ಸಮಸ್ಯೆ ಹಿನ್ನಲೆ ಸಮಾಜ ಸೇವಕ ಹಲಗೂರಿನ ಅಭಿಜಿತ್ ಬಸವರಾಜು ಮಾನವೀಯ ಕಾರ್ಯ ಮಾಡಿದ್ದಾರೆ.
ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಹಲಗೂರು ಮತ್ತು ಬಸವನಬೆಟ್ಟ ಅರಣ್ಯ ಪ್ರದೇಶದಲ್ಲಿ ಪ್ರಾಣಿಗಳಿಗಾಗಿ ನೀರು ಪೂರೈಕೆ ಅಭಿಯಾನ ಆರಂಭಿಸಿದ್ದು, ಹಲಗೂರು ಮತ್ತು ಬಸವನಬೆಟ್ಟ ಅರಣ್ಯದಲ್ಲಿನ ಕೆರೆ ಕಟ್ಟೆ ತುಂಬಿಸಲು ಟ್ಯಾಂಕರ್ ನಲ್ಲಿ ನೀರು ಪೂರೈಕೆ ಮಾಡುತ್ತಿದ್ದಾರೆ.

ಬಸವರಾಜುರವರ ಮಾನವೀಯ ಕಾರ್ಯಕ್ಕೆ ಅರಣ್ಯ ಇಲಾಖೆ ಕೈಜೋಡಿಸಿದೆ.
ಪ್ರಾಣಿಗಳ ಸಮಸ್ಯೆ ಅರಿತು ಕುಡಿಯುವ ನೀರು ಪೂರೈಕೆ ಮಾಡ್ತಿರೋ ಬಸವರಾಜ್ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.