ಮೈಸೂರು: ೧೬ನೇ ವಿಧಾನಸಭಾ ಚುನಾವಣೆಯಲ್ಲಿ ಪ್ರಪ್ರಥಮ ಬಾರಿಗೆ ಆಯ್ಕೆಯಾದ ೭೦ ಶಾಸಕರಿಗೆ ಆರೋಗ್ಯ ಸುಸ್ಥಿರತೆ, ಜ್ಞಾನಾಭಿವೃದ್ಧಿ ತರಬೇತಿ ಶಿಬಿರಕ್ಕೆ ಧಾರ್ಮಿಕ ಹಿನ್ನೆಲೆಯವರನ್ನು ಆಹ್ವಾನಿಸಿರುವುದು ಸಂವಿಧಾನ ಆಶಯಗಳ್ನು ಬುಡಮೇಲು ಮಾಡುವ ಕೆಟ್ಟ ಪರಿಪಾಠಕ್ಕೆ ನಾಂದಿಯಾಗುತ್ತಿದೆ ಎಂದು ಆರೋಪಿಸಿ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಮಿತಿ ಪ್ರತಿಭಟನೆ ನಡೆಸಿದೆ.
ಸಿದ್ದಾರ್ಥನಗರದಲ್ಲಿರುವ ನೂತನ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ನಡೆದ ಪ್ರತಿಭಟನೆಯಲ್ಲಿ ಸಭಾಪತಿ ಯು.ಟಿ.ಖಾದರ್ ಅವರ ನಡೆಯನ್ನು ಖಂಡಿಸಿದರು. ಅಧ್ಯಾತಿಕತೆಯನ್ನು ವಾಣಿಜ್ಯೀಕರಣಗೊಂಡು ಅತ್ಯಾಚಾರ, ವಂಚನೆ, ಭೂಗಳ್ಳತನ, ೪೦೦ಕ್ಕೂ ಹೆಚ್ಚು ಯುವತಿಯರ ಅಸಹಜ ಸಾವಿಗೆ ಕಾರಣರಾಗಿರುವ ವ್ಯಕ್ತಿಗಳಿಂದ ಜನಪ್ರತಿನಿಧಿಗಳು ಪಾಠ ಕೇಳುವ ಅಗತ್ಯವಿಲ್ಲ ಎಂದು ಹೋರಾಟಗಾರರು ತಿಳಿಸಿದರು.
ಸರ್ಕಾರವು ಸಂವಿಧಾನ ತಜ್ಞರು, ಹಿರಿಯ ರಾಜಕಾರಣಿಗಳು, ನ್ಯಾಯಾಧೀಶರು, ಅನುಭವಿ ಅಧಿಕಾರಿಗಳನ್ನು ಆಹ್ವಾನಿಸಿ ನೂತನ ಶಾಸಕರಿಗೆ ತಮ ಕರ್ತವ್ಯ, ಹಕ್ಕು ಮತ್ತು ಜವಾಬ್ದಾರಿಗಳು ಬಗ್ಗೆ ಸಂವಿಧಾನಾತಕವಾಗಿ ಮಾರ್ಗದರ್ಶನ ನೀಡಬೇಕೆಂದು ಒತ್ತಾಯಿಸಿದರು.
ಜಿಲ್ಲಾಧಿಕಾರಿಗಳ ಕಚೇರಿಯ ತಹಸೀಲ್ದಾರ್ ಅವರ ಮನವಿ ಸ್ವೀಕರಿಸಿದರು. ಮಾನಸಗಂಗೋತ್ರಿಯ ಬಿಎಂಶ್ರೀ ಸಭಾಂಗಣದಲ್ಲಿ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರಿಗೂ ಮನವಿ ಸಲ್ಲಿಸಿದರು.
ಜಿಲ್ಲಾ ಸಂಚಾಲಕ ಚೋರನಹಳ್ಳಿ ಶಿವಣ್ಣ, ದೇವರಾಜು ಬಿಳಗೆರೆ, ಬೊಕ್ಕಳ್ಳಿ ನಂಜುಂಡಸ್ವಾಮಿ, ಶಿವರಾಜ ಅರಸನಕೆರೆ, ಪ್ರಸನ್ನ ಹಂಚ್ಯಾ, ಮಹೇಶ್ ವರುಣ, ಸೋಮನಾಯ್ಕ, ಚಂದ್ರಶೇಖರ್ ಆಲಗೂಡು, ವನಿತಾ, ಪ್ರಭುಸ್ವಾಮಿ, ಸಿದ್ದರಾಮ, ಸಣ್ಣಮಾಧು ಭುಗತಗಳ್ಳಿ, ಪುಟ್ಟಣ್ಣ ಹನುಮನಪುರ, ಚಿಕ್ಕಲಿಂಗಯ್ಯ, ನಿಂಗರಾಜು, ಚೆಲುವರಾಜು ಮುಂತಾದವರು ಭಾಗವಹಿಸಿದ್ದರು.