Tuesday, April 22, 2025
Google search engine

Homeರಾಜ್ಯದ್ವಾರಕೀಶ್‌ ನಿಧನ: ಸಿಎಂ ಸಿದ್ಧರಾಮಯ್ಯ, ಸಿನಿಮಾರಂಗದ ಹಲವು ಗಣ್ಯರಿಂದ ಅಂತಿಮ ನಮನ

ದ್ವಾರಕೀಶ್‌ ನಿಧನ: ಸಿಎಂ ಸಿದ್ಧರಾಮಯ್ಯ, ಸಿನಿಮಾರಂಗದ ಹಲವು ಗಣ್ಯರಿಂದ ಅಂತಿಮ ನಮನ

ಬೆಂಗಳೂರು: ಹೃದಯಾಘಾತದಿಂದ ನಿಧನರಾದ ದ್ವಾರಕೀಶ್‌ ಅವರ ಪಾರ್ಥಿವ ಶರೀರವನ್ನು ಸಾರ್ವಜನಿಕರ ದರ್ಶನಕ್ಕೆ ಇಡಲಾಗಿದ್ದು, ಸಿನಿಮಾರಂಗದ ಹಲವು ಗಣ್ಯರು ಅಂತಿಮ ನಮನ ಸಲ್ಲಿಸಿದರು.

ಬುಧವಾರ ಬೆಳಿಗ್ಗೆ 7.30ರಿಂದ 11.30ರ ರವರೆಗೆ ರವೀಂದ್ರ ಕಲಾಕ್ಷೇತ್ರದಲ್ಲಿ ಪಾರ್ಥಿವ ಶರೀರವನ್ನು ಸಾರ್ವಜನಿಕರ ದರ್ಶನಕ್ಕೆ ಇಡಲಾಗಿದೆ.ಬಳಿಕ ಚಾಮರಾಜಪೇಟೆಯ ಚಿತಾಗಾರದಲ್ಲಿ ಅಂತ್ಯಸಂಸ್ಕಾರ ನಡೆಯಲಿದೆ’ ಎಂದು ದ್ವಾರಕೀಶ್‌ ಪುತ್ರ ಗಿರಿ ತಿಳಿಸಿದ್ದಾರೆ.

ಕಿಚ್ಚ ಸುದೀಪ್‌, ಸುಧಾರಾಣಿ, ರಮೇಶ್‌ ಅರವಿಂದ್‌, ಮುಖ್ಯಮಂತ್ರಿ ಚಂದ್ರು, ಸುಚೇಂದ್ರ ಪ್ರಸಾದ್‌ ಸೇರಿದಂತೆ ಸಿನಿಮಾರಂಗದ ಅನೇಕ ತಾರೆಯರು ಅಂತಿಮ ನಮನ ಸಲ್ಲಿಸಿದರು.

ನಟರಾದ ಜಗ್ಗೇಶ್, ರವಿಚಂದ್ರನ್, ಅನಿರುದ್ಧ, ಕುಮಾರ್ ಗೋವಿಂದ್, ನಟಿ, ಸಂಸದೆ ಸುಮಲತಾ ಅಂಬರೀಶ್, ನಿರ್ಮಾಪಕ ರಾಕ್ ಲೈನ್  ವೆಂಕಟೇಶ್ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದರು.

ದ್ವಾರಕೀಶ್‌ ಅವರ ಅಭಿಮಾನಿಗಳು, ಚಿತ್ರರಂಗದ ತಂತ್ರಜ್ಞರು ಸೇರಿದಂತೆ ಸಾರ್ವಜನಿಕರು ಅಂತಿಮ ದರ್ಶನ ಪಡೆಯುತ್ತಿದ್ದಾರೆ.

ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಅಂತಿಮ ದರ್ಶನ ಪಡೆದರು.

ದ್ವಾರಕೀಶ್‌ (82) ಅವರು ಹೃದಯಾಘಾತದಿಂದ ಮಂಗಳವಾರ ಗುಳಿಮಂಗಲದಲ್ಲಿರುವ ತಮ್ಮ ಮನೆಯಲ್ಲಿ ನಿಧನರಾದರು. ಅವರಿಗೆ ಪತ್ನಿ, ಐದು ಮಂದಿ ಮಕ್ಕಳು ಇದ್ದಾರೆ.

RELATED ARTICLES
- Advertisment -
Google search engine

Most Popular