ಮಂಡ್ಯ: ಸಕ್ಕರೆನಾಡಲ್ಲಿ ಲೋಕ ಅಖಾಡ ರಂಗೇರಿದ್ದು, ಕೆ.ಆರ್.ಪೇಟೆಯಲ್ಲಿ ಮೈತ್ರಿ ಅಭ್ಯರ್ಥಿ ಎಚ್ ಡಿ ಕುಮಾರಸ್ವಾಮಿ ಭರ್ಜರಿ ಪ್ರಚಾರ ನಡೆಸುತ್ತಿದ್ದಾರೆ.
ಕೆ.ಆರ್.ಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಎಚ್ ಡಿ ಕುಮಾರಸ್ವಾಮಿ ಇಂದು ರೋಡ್ ರೋ ಶೋ ಹಾಗೂ ಬಹಿರಂಗ ಸಭೆ ಹಮ್ಮಿಕೊಳ್ಳಲಾಗಿದೆ.
ಪಟ್ಟಣದ ಪುರಸಭೆ ಹಿಂಭಾಗದ ಮೈದಾನದಲ್ಲಿ ಕಾರ್ಯಕರ್ತರ ಬೃಹತ್ ಸಮಾವೇಶ ನಡೆಯುತ್ತಿದ್ದು, ಜ್ಯೋತಿ ಬೆಳಗಿಸಿ ಸಮಾವೇಶಕ್ಕೆ ಮೈತ್ರಿ ಪಕ್ಷದ ನಾಯಕರು ಚಾಲನೆ ನೀಡಿದ್ದಾರೆ.
ಸಮಾವೇಶದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ, ಮಾಜಿ ಸಚಿವರಾದ ಪುಟ್ಟರಾಜು, ನಾರಾಯಣಗೌಡ, ಶಾಸಕ ಎಚ್ ಟಿ ಮಂಜು ಸೇರಿ ಹಲವು ನಾಯಕರು ಭಾಗಿಯಾಗಿದ್ದಾರೆ.
ಸೇಬು, ಮೋಸಂಬಿಗೆ ಮುಗಿಬಿದ್ದ ಜನ….
ಹೆಚ್ ಡಿ ಕುಮಾರಸ್ವಾಮಿ ಸ್ವಾಗತಕ್ಕೆ ಕ್ರೇನ್ ಮೂಲಕ ಸೇಬು, ಮೋಸಂಬಿ ಹಾರ ಹಾಕಲಾಗಿದ್ದು, ಹಾರದಲ್ಲಿದ್ದ ಸೇಬು, ಮೊಸಂಬಿಗೆ ಜನರು ಮುಗಿಬಿದ್ದ ಘಟನೆ ಕೆ.ಆರ್.ಪೇಟೆ ಪಟ್ಟಣದ ಪುರಸಭೆ ಮೈದಾನದಲ್ಲಿ ನಡೆಯಿತು.
ಹಾರ ಹಾಕಿ ಸ್ವಾಗತಿಸಿದ ಬಳಿಕ ಕ್ರೇನ್ ನಲ್ಲಿ ಮೊಸಂಬಿ ಹಾಗು ಸೇಬಿಗೆ ಜನರು ಮುಗಿಬಿದ್ದಿದ್ದಾರೆ. ಕೈಗೆ ಸಿಕ್ಕಷ್ಟು ಸೇಬು ಹಾಗು ಮೊಸಂಬಿ ಕಿತ್ತೊಯ್ದಿದ್ದಾರೆ.
ಜನರ ಕಿತ್ತಾಟ ಕಂಡು ಕ್ರೇನ್ ಬಿಟ್ಟು ಚಾಲಕ ಕೆಳಗಿಳಿದಿದ್ದಾರೆ.