ಚಾಮರಾಜನಗರ: ತಾಲೂಕಿನ ಬೇಡರಪುರದ ಒಂದೇ ಕುಟುಂಬದ ಏನಪ್ಪಾ ಗಂಡ-ಹೆಂಡತಿ ಹಾಗೂ ಮಗಳು ಒಟ್ಟಿಗೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ಮೂವರ ಆತ್ಮಹತ್ಯೆಗೆ ಆಸ್ತಿ ವಿಚಾರ ಸಂಬಂಧಿಸಿದೆ ಎನ್ನಲಾಗಿದೆ. ಪತಿ ಮಹಾದೇವಸ್ವಾಮಿ(೪೦) ಪತ್ನಿ ಸವಿತಾ(೩೦) ಹಾಗೂ ಮಗಳು ಸಿಂಚನಾ(೧೫) ಸಾವಿಗೆ ಶರಣಾದ ದುರ್ದೈವಿಗಳು. ಶುಕ್ರವಾರ ಬೆಳಗ್ಗೆ ಪಕ್ಕದ ಮನೆಯವರು ಬಂದು ನೋಡಿದಾಗ ಮೂವರು ಆತ್ಮಹತ್ಯೆ ಮಾಡಿಕೊಂಡಿರುವ ದೃಶ್ಯ ಕಂಡು ಬಂದಿದೆ ಈ ದುರ್ಘಟನೆ ನಡೆದಿದ್ದು ಘಟನೆಗೆ ಕಾರಣ ಕೌಟುಂಬಿಕ ಕಲಹ, ಆಸ್ತಿ ವಿಚಾರ ಇರಬಹುದು ಎಂದು ಶಂಕಿಸಲಾಗಿದೆ.
ಮಹದೇವಸ್ವಾಮಿ ಹಾಗೂ ಸಿಂಚನ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಸವಿತಾ ಕ್ರಿಮಿನಾಶಕ ಸೇವಿಸಿದ್ದಾರೆ ಎಂದು ತಿಳಿದುಬಂದಿದೆ. ಮೂವರು ಡೆತ್ ನೋಟ್ ಬರೆದಿಟ್ಟು ಸಾವನ್ನಪ್ಪಿರುತ್ತಾರೆ ಎಂದು ತಿಳಿದು ಬಂದಿದೆ.
ಸಾವಿನಿಂದ ಪಾರದ ಹಿರಿಯ ಮಗಳು : ಮೃತನಾ ಹಿರಿಯ ಮಗಳು ತನ್ನ ತಾತನ ಮನೆಯಲ್ಲಿ ಓದುತ್ತಿದ್ದಳು ಆದ್ದರಿಂದ ಆ ಕುಟುಂಬದಲ್ಲಿ ಹಿರಿಯಮಗಳೊಬ್ಬಳೇ ಬದುಕಿರುವುದಾಗಿದೆ.
ಚಾಮರಾಜನಗರ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಸ್ಥಳಕ್ಕೆ ಜಿಲ್ಲಾ ಎಸ್ಪಿ ಪದ್ಮನಿ ಸಾಹು ಭೇಟಿ ಕೊಟ್ಟಿದ್ದಾರೆ.