ಮಂಡ್ಯ: ಮಂಡ್ಯದಲ್ಲಿ ಕಾಂಗ್ರೆಸ್ ಪಕ್ಷ ಸೇರ್ಪಡೆ ಕಾರ್ಯಕ್ರಮ ಮುಂದುವರೆದಿದ್ದು, ಮಂಡ್ಯ ಲೋಕಸಭಾ ಕಾಂಗ್ರೆಸ್ ನಾಯಕರ ರಣತಂತ್ರದಿಂದಾಗಿ ಜೆಡಿಎಸ್ ತೊರೆದು ನೂರಾರು ಕಾರ್ಯಕರ್ತರು ಕಾಂಗ್ರೆಸ್ ಗೆ ಸೇರ್ಪಡೆಯಾದರು.
ಮಂಡ್ಯದ ಕರ್ನಾಟಕ ಸಂಘದ ಆವರಣದಲ್ಲಿ ನಡೆದ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಕೊತ್ತತ್ತಿ ಪಂಚಾಯತ್ ನ 2ನೇ ವೃತ್ತದ ಕಾರ್ಯಕರ್ತರು ಸಚಿವ ಎನ್.ಚಲುವರಾಯಸ್ವಾಮಿ ಸಮ್ಮುಖದಲ್ಲಿ ಕಾಂಗ್ರೆಸ್ ಸೇರ್ಪಡೆಗೊಂಡರು.
ಮಾಜಿ ಜಿ.ಪಂ.ಅಧ್ಯಕ್ಷ ತಗ್ಗಳ್ಳಿ ವೆಂಕಟೇಶ್, ಎಂ.ಶ್ರೀನಿವಾಸ್, ಶಾಸಕ ಗಣಿಗ ರವಿಕುಮಾರ್ ಸೇರಿದಂತೆ ಹಲವರು ಭಾಗಿಯಾಗಿದ್ದರು.
ನಿರಂತರವಾಗಿ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರ್ಪಡೆಯಾಗುತ್ತಿದ್ದಾರೆ. ಮಂಡ್ಯ ಅಸ್ತಿತ್ವ ಉಳಿಯಬೇಕು ಹಾಗೂ ಅಭಿವೃದ್ಧಿ ಆಗಬೇಕು. ಮಂಡ್ಯದವರೇ ಲೋಕಸಭಾ ಸದಸ್ಯರಾಗಬೇಕು ಅನ್ನೋದೇ ಎಲ್ಲರ ಅಭಿಪ್ರಾಯ ಎಂದು ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದರು.
ಕೆರಗೋಡು ಗ್ರಾಮಕ್ಕೆ ಮಾಜಿ ಸಿಎಂ ಹೆಚ್ಡಿಕೆ ಭೇಟಿ ವಿಚಾರವಾಗಿ ಮಾತನಾಡಿ, ಚುನಾವಣೆಗಾಗಿ ಏನು ಬೇಕು ಅದನ್ನ ಮಾಡ್ಕೊಳ್ತಿದ್ದಾರೆ. ಈಗಾಗಲೇ ನಮ್ಮ ಶಾಸಕರು ಗಣಿಗ ರವಿಕುಮಾರ್ ಗದೆ ಕೊಟ್ಟು ಆಂಜನೇಯನ ಆಶೀರ್ವಾದ ಪಡೆದಿದ್ದಾರೆ. ಚುನಾವಣೆ ಅಭ್ಯರ್ಥಿಯಾಗಿ ಹೋಗಿದ್ದಾರೆ ಅಷ್ಟೆ ಎಂದರು.
ಶಾಂತಿ ಇದ್ರೆ ಅವರಿಗೆ ನೆಮ್ಮದಿ ಆಗಲ್ಲ ಅವರು ಕೆಣಕೋಕೆ ಪ್ರಯತ್ನ ಮಾಡ್ತಾರೆ. ಮಂಡ್ಯ ಜಿಲ್ಲೆಯಲ್ಲಿ ಶಾಂತಿ ಕದಡೋಕೆ ಇವರ ಕೈನಲ್ಲಿ ಆಗಲ್ಲ. ಸಾರ್ವಜನಿಕರ ಮೇಲೆ ನಮಗೆ ಸಿಟ್ಟಿಲ್ಲ. ಅನಿವಾರ್ಯದಿಂದ ಯಾರು ಹೋಗಿಲ್ಲ. ಆ ಸಂದರ್ಭದಲ್ಲಿ ಜೆಡಿಎಸ್-ಬಿಜೆಪಿ ಯಾರು ಇನ್ವಾಲ್ ಆಗಿದ್ದರು ಅವರ ಮೇಲೆ ಬೇಸರ ಇಲ್ಲ ಎಂದು ಹೇಳಿದರು.
ಮೇಕೆದಾಟು ಯೋಜನೆ ಶಂಕುಸ್ಥಾಪನೆ ಹೆಚ್ಡಿಕೆ ಹೇಳಿಕೆ ವಿಚಾರವಾಗಿ ಮಾತನಾಡಿ, ಮುಖ್ಯಮಂತ್ರಿ ಇದ್ದಾಗಲೇ ಏನು ಮಾಡಿಲ್ಲ ಇವಾಗ ಮಾಡ್ತಾರಾ? ಎಂದು ಹೆಚ್ಡಿಕೆ ವಿರುದ್ಧ ಸಚಿವ ಚಲುವರಾಯಸ್ವಾಮಿ ಕೆಂಡಮಂಡಲವಾದರು.