ಮಂಡ್ಯ: ನಮ್ಮದು ಅಭಿವೃದ್ಧಿ ಮಂತ್ರ, ಕುಮಾರಣ್ಣದು ಕಿರಿಕ್ ಮಂತ್ರ ಎಂದು ಹೆಚ್ ಡಿ ಕುಮಾರಸ್ವಾಮಿ ಕೆರಗೋಡು ಭೇಟಿ ಬಗ್ಗೆ ಶಾಸಕ ಗಣಿಗ ರವಿಕುಮಾರ್ ವ್ಯಂಗ್ಯವಾಡಿದರು.
ಮಂಡ್ಯದಲ್ಲಿ ಮಾತನಾಡಿದ ಅವರು, ನಗರದ ಹಲವು ರಾಮಮಂದಿರಕ್ಕೆ ಹೋಗಿದ್ದೆ ಅವರು ಅದೇ ರೀತಿ ಹೋಗಿದ್ದಾರೆ ಅಷ್ಟೆ. ಕುಮಾರಣ್ಣ ರಾಜ್ಯದ ಸಿಎಂ ಆಗಿದ್ದವರು ಎಲ್ಲಾ ಕಡೆ ಹೋಗಬೇಕು ಎಂದರು.
ಬೂದನೂರಿನ ಗ್ರಾಮಸ್ಥರು ಭಕ್ತಿಯಿಂದ ಕೊಟ್ಟ ಬೆಳ್ಳಿ ಗದೆಯನ್ನ ಭಕ್ತಿಯಿಂದ ಆಂಜನೇಯನಿಗೆ ಅರ್ಪಿಸಿದ್ದೇನೆ. ಅದೇ ಗದೆ ತೆಗೆದುಕೊಂಡು ಎಲ್ಲರಿಗು ಬಾರಿಸುತ್ತಿರುವುದನ್ನ ಎಲ್ಲರು ನೋಡಿದ್ದಾರೆ. ಕುಮಾರಣ್ಣ ಆಶೀರ್ವಾದ ತಕೊಂಡಿದ್ದಾರೆ. ನಾವು ಹಾಗೂ ಕುಮಾರಣ್ಣ ಹೋಗಿರುವ ವಿಡಿಯೋ ಹಾಕಿ ರಾಮ,ಹನುಮ ಯಾರಿಗೆ ಒಲಿದಿದ್ದಾನೆ ಅಂತ ಗೊತ್ತಾಗುತ್ತೆ ಎಂದು ಹೇಳಿದರು.
ಕುಮಾರಣ್ಣನ ಉದ್ದೇಶವೇ ಕಿರಿಕ್, ಜಗಳ ಮಾಡಿಸುವುದು. ನಮ್ಮ ಉದ್ದೇಶ ಶಾಂತಿಯುತವಾಗಿರಬೇಕು ಅಂತ. ಕೆರಗೋಡು ಗ್ರಾಮದ ಅಭಿವೃದ್ಧಿ 15 ಕೋಟಿ ಹಾಕಿದ್ದೇವೆ. ನಮ್ಮದು ಅಭಿವೃದ್ಧಿ ಮಂತ್ರ, ಅವರದು ಕಿರಿಕ್ ಮಂತ್ರ ಎಂದರು.