Saturday, April 19, 2025
Google search engine

Homeಅಪರಾಧಅಕ್ರಮ ಮದ್ಯ ಸಾಗಾಟ: ೬ ಪ್ರಕರಣ ದಾಖಲು

ಅಕ್ರಮ ಮದ್ಯ ಸಾಗಾಟ: ೬ ಪ್ರಕರಣ ದಾಖಲು

ಬಳ್ಳಾರಿ: ಲೋಕಸಭೆ ಚುನಾವಣೆ ನೀತಿ ಸಂಹಿತೆ ಜಾರಿಯಿಂದಾಗಿ ಜಿಲ್ಲೆಯಲ್ಲಿ ೬ ಪ್ರಕರಣಗಳು ದಾಖಲಾಗಿದ್ದು, ಅಕ್ರಮ ಮದ್ಯ ವಶ ಮತ್ತು ಸಾಗಾಟ ಪ್ರಕರಣವನ್ನು ಜಪ್ತಿ ಮಾಡಲಾಗಿದೆ ಎಂದು ಅಬಕಾರಿ ಉಪ ಆಯುಕ್ತ ಮಂಜುನಾಥ್ ಮಾಹಿತಿ ನೀಡಿದರು.

ಸಿರುಗುಪ್ಪ ತಾಲೂಕಿನ ಬೀರಳ್ಳಿ ಗ್ರಾಮದಿಂದ ರಾವಿಹಾಳ್ ಗ್ರಾಮಕ್ಕೆ ಕೆರೆ ದಂಡೆ ಬಳಿ ರಸ್ತೆ ಮಾರ್ಗದಲ್ಲಿ ದ್ವಿಚಕ್ರ ವಾಹನದಲ್ಲಿ ೫೧.೮೪೦ ಲೀ. ಅಂದಾಜು ಮೌಲ್ಯ ರೂ. ೪೮,೦೪೫ ಮದ್ಯ ಸಾಗಿಸುತ್ತಿದ್ದುದನ್ನು ಪತ್ತೆ ಹಚ್ಚಿ, ವಾಹನ ಚಾಲಕ ಮದ್ಯ ಮತ್ತು ವಾಹನವನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಕುರುಗೋಡು ಪಟ್ಟಣದಿಂದ ಬಾದನಹಟ್ಟಿ ಗ್ರಾಮಕ್ಕೆ ತೆರಳುವ ರಸ್ತೆಯಲ್ಲಿ ದ್ವಿಚಕ್ರ ವಾಹನದಲ್ಲಿ ೭.೩೮೦ ಲೀ. ಅಂದಾಜು ಮೌಲ್ಯ ರೂ. ೬೪೫೧೬ ಮದ್ಯ ಸಾಗಾಟವನ್ನು ವಶಪಡಿಸಿಕೊಂಡು ಮದ್ಯ ಮತ್ತು ವಾಹನವನ್ನು ವಶಪಡಿಸಿಕೊಂಡ ವಾಹನ ಚಾಲಕನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಸಿರುಗುಪ್ಪ ತಾಲೂಕಿನ ತೆಕ್ಕಲಕೋಟೆ ಪಟ್ಟಣದಿಂದ ದೇವಿನಗರ ಕ್ಯಾಂಪ್ ಗೆ ಹೋಗುವ ಮಾರ್ಗ ಮಧ್ಯೆ ಬರುತ್ತಿದ್ದ ಕೆ. ಬಿ ಬಳಿ ರಸ್ತೆ ಮಾರ್ಗದಲ್ಲಿ ದ್ವಿಚಕ್ರ ವಾಹನದ ಮೇಲೆ ೧೭.೧೦೦ ಲೀ. ಅಂದಾಜು ಮೌಲ್ಯ ರೂ. ೭೮,೫೮೯ ಮದ್ಯ ಮತ್ತು ವಾಹನ ಜಪ್ತಿ, ಪ್ರಕರಣ ದಾಖಲು. ಬಳ್ಳಾರಿ ನಗರದ ಗುಗ್ಗರಹಟ್ಟಿಯಿಂದ ಹೊನ್ನಾಳಿ ಗ್ರಾಮಕ್ಕೆ ಹೋಗುವ ರಸ್ತೆಯಲ್ಲಿ ತ್ರಿಚಕ್ರ ವಾಹನದಲ್ಲಿ ೧೨.೯೬೦ ಲೀ. ಅಂದಾಜು ಮೌಲ್ಯ ರೂ. ೮೫,೭೬೦ ಮದ್ಯ ಮತ್ತು ವಾಹನವನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಸಿರುಗುಪ್ಪ ತಾಲೂಕಿನ ಬೀರಳ್ಳಿ ಗ್ರಾಮದಿಂದ ರಾವಿಹಾಳ್ ಗ್ರಾಮಕ್ಕೆ ಹೋಗುವ ರಸ್ತೆಯಲ್ಲಿದ್ದ ಕಲ್ಲು ಧ್ವಂಸ ಕೆ. ಕ್ರಾಸ್ ಬಳಿ ರಸ್ತೆ ಕಾವಲು ಮಾಡುತ್ತಿದ್ದ ದ್ವಿಚಕ್ರ ವಾಹನದಲ್ಲಿ ಕೆ. ೫೧.೮೪೦ ಲೀ. ಅಂದಾಜು ಮೌಲ್ಯ ರೂ. ೪೮,೦೪೫ ಮದ್ಯ ಹಾಗೂ ವಾಹನವನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಬಳ್ಳಾರಿ ತಾಲೂಕಿನ ಜಾನೆಕುಂಟೆ ತಾಂಡಾದ ಕಿರಾಣಿ ಅಂಗಡಿ ಮೇಲೆ ದಾಳಿ ನಡೆಸಿ ಅಕ್ರಮ ೯.೦೦೦ ಲೀ. ಮದ್ಯ ಮತ್ತು ೬.೫೦೦ ಲೀ. ಬಿಯರ್ ಅಂದಾಜು ಮೌಲ್ಯ ರೂ. ೭,೩೬೦ ಹೊಂದಿದ್ದ ಮದ್ಯ ಮತ್ತು ಸಾರಾಯಿಯನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

RELATED ARTICLES
- Advertisment -
Google search engine

Most Popular