ಕೆ.ಆರ್.ಪೇಟೆ: ಕುಮಾರಸ್ವಾಮಿ ಸೋಲಿಸಲಿಕ್ಕೆ ರಾಹುಲ್ ಗಾಂಧಿಯನ್ನು ಕರೆ ತಂದಿದ್ದಾರೆ. ಇವರ ಕೈಲಿ ಆಗಲ್ಲ ಎಂದು ಅವರನ್ನು ಕರೆಸಿ ಭಾಷಣ ಮಾಡಿಸ್ತಾರೆ ಎಂದು ಮಂಡ್ಯಕ್ಕೆ ರಾಹುಲ್ ಗಾಂಧಿ ಆಗಮನದ ಕುರಿತು ಮೈತ್ರಿ ಅಭ್ಯರ್ಥಿ ಹೆಚ್ ಡಿ ಕುಮಾರಸ್ವಾಮಿ ವ್ಯಂಗ್ಯವಾಡಿದರು.
ಕೆ.ಆರ್.ಪೇಟೆ ವಿಧಾನಸಭಾ ಕ್ಷೇತ್ರದ ಪಟ್ಟಣದ ಪುರಸಭೆ ಹಿಂಭಾಗದ ಮೈದಾನದಲ್ಲಿ ಕಾರ್ಯಕರ್ತರ ಬೃಹತ್ ಸಮಾವೇಶದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ದೇವೇಗೌಡರ ಶ್ರಮದಿಂದ ಹಾಸನದಲ್ಲಿ ಹೇಮಾವತಿ ಜಲಾಶಯ ನಿರ್ಮಾಣವಾಗಿದೆ. ಇದರಿಂದಾಗಿ ಕೆ.ಆರ್.ಪೇಟೆ ಭಾಗಕ್ಕೆ ಹೆಚ್ಚಿನ ಸಹಕಾರವಾಗಿದೆ.. ನಮ್ಮ ಕುಟುಂಬ ಇರುವವರೆಗೂ ಕೆ.ಆರ್.ಪೇಟೆ ಜನರನ್ನು ಮರೆಯಲ್ಲ ಎಂದು ಹೇಳಿದರು.
KRS ಡ್ಯಾಂ ನಲ್ಲಿ 98 ಅಡಿ ನೀರಿದ್ರು ರೈತರಿಗೆ ಬೆಳೆ ಬೆಳೆಯುವಂತೆ ಸರ್ಕಾರ ಆದೇಶ ಮಾಡಿದೆ. ರೈತರ ಹೇಸರೇಳಿ ಅಧಿಕಾರಕ್ಕೆ ಬಂದ ಈ ಸರ್ಕಾರ ರೈತರಿಗೆ ಅನ್ಯಾಯ ಮಾಡ್ತಿದೆ ಎಂದು ಹೆಸರೇಳದೆ ಕೈ ನಾಯಕರ ವಿರುದ್ಧ ಎಚ್ಡಿಕೆ ವಾಗ್ದಾಳಿ ನಡೆಸಿದರು.
ಬಿಜೆಪಿ ಜೆಡಿಎಸ್ ಹೋಂದಾಣಿಕೆ ವೈಯಕ್ತಿಕ ಸ್ಥಾನಮಾನಕ್ಕಲ್ಲ, ದೇಶದ ಭದ್ರತೆಗೆ . ಜಿಲ್ಲೆಯ ಅಭಿವೃದ್ಧಿಗಾಗಿ ಉತ್ತಮ ನಾಯಕನನ್ನು ಆಯ್ಕೆ ಮಾಡಿ ಎಂದರು.
ಮೇಕೆದಾಟು ಪಾದಯಾತ್ರೆ ಮಾಡಿ ಈಗ ತಮಿಳು ನಾಡಿಗೆ ನೀರು ಬಿಟ್ಟಿದ್ದಾರೆ. ನಮ್ಮ ನೀರು ನಮ್ಮ ಹಕ್ಕು ಪಾದಯಾತ್ರೆ ಮಾಡಿ ನಮ್ಮ ನೀರು ತಮಿಳುನಾಡಿನ ಹಕ್ಕು ಎಂದಿದ್ದಾರೆ ಎಂದು ಕಿಡಿಕಾರಿದರು.
ಕೇಂದ್ರದಲ್ಲಿ ಸಾವಿರಾರು ಹುದ್ದೆ ಖಾಲಿ ಇದೆ ಎಂದು ಹೇಳುವವರು, ರಾಜ್ಯದಲ್ಲಿನ ಖಾಲಿ ಹುದ್ದೆ ಭರ್ತಿ ಮಾಡಿ ಎಂದು ಆಕ್ರೋಶ ಹೊರಹಾಕಿದರು.
ಅಭಿವೃದ್ಧಿಗಾಗಿ ಬಿಜೆಪಿ ಪಕ್ಷಕ್ಕೆ ಹೋಗಿದ್ದೆ, ವೈಯಕ್ತಿಕ ಅಭಿವೃದ್ಧಿಗಾಗಿ ಅಲ್ಲ: ನಾರಾಯಣಗೌಡ
ನಾನು ಈ ತಾಲೂಕಿನ ಅಭಿವೃದ್ಧಿಗಾಗಿ ಬಿಜೆಪಿ ಪಕ್ಷಕ್ಕೆ ಹೋಗಿದ್ದೆ ಹೊರತು ನನ್ನ ಅಭಿವೃದ್ಧಿಗಾಗಿ ಅಲ್ಲ ಎಂದು ಮಾಜಿ ಸಚಿವ ನಾರಾಯಣಗೌಡ ಹೇಳಿದರು.
ನಾನು ಜೆಡಿಎಸ್ ತೊರೆದ ವೇಳೆ ನಾನು ಕುಮಾರಣ್ಣನಿಗೆ ಹೇಳಿಯೇ ಹೋಗಿದ್ದೆ. 2023 ರ ವಿಧಾನಸಭಾ ಚುನಾವಣೆಯಲ್ಲಿ ನಾನು ಸ್ಪರ್ಧಿಸಿ ಸೋತಿದ್ರು ಜೆಡಿಎಸ್ ಅಭ್ಯರ್ಥಿ ಗೆದ್ದಿದ್ದಕ್ಕೆ ಸಿಹಿ ಹಂಚಿದ್ದೆ ಎಂದರು.
ನಾನು ಕಾಂಗ್ರೇಸ್ ಪಕ್ಷಕ್ಕೆ ಹೋಗ್ತೀನಿ ಅಂತಾ ಕೆಲವರು ವದಂತಿ ಹಬ್ಬಿಸಿದ್ರು. ನಾನು ಯಾವತ್ತು ಆ ಪಕ್ಷಕ್ಕೆ ಹೋಗುವ ಪ್ರಶ್ನೆಯೇ ಇಲ್ಲ. ಈ ಬಾರೀ ಕುಮಾರಸ್ವಾಮಿ 3 ಲಕ್ಷ ಮತಗಳ ಅಂತರದಿಂದ ಗೆಲ್ಲಿಸ್ತೀವಿ ಎಂದು ತಿಳಿಸಿದರು.
ಮೈತ್ರಿ ಅಭ್ಯರ್ಥಿ ಆಯ್ಕೆ ಮಾಡಿರೋದು ಜಿಲ್ಲೆಯ ಜನರು: ಬಿ ವೈ ವಿಜಯೇಂದ್ರ
ಮಂಡ್ಯ ಲೋಕಸಭೆಗೆ ಮೈತ್ರಿ ಅಭ್ಯರ್ಥಿ ಆಯ್ಕೆ ಮಾಡಿರೋದು ಜಿಲ್ಲೆಯ ಜನರು. ಇದು ಅವರ ತೀರ್ಮಾನ ಅಲ್ಲ, ಜಿಲ್ಲೆಯ ಜನರ ಒಮ್ಮತದ ತೀರ್ಮಾನ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಹೇಳಿದರು.
ಹಣ ಮತ್ತು ತೋಲ್ಬಳದ ಮೇಲೆ ಚುನಾವಣೆ ಮಾಡಲು ಹೊರಟ ಕಾಂಗ್ರೆಸ್ ಗೆ ಎಚ್ಡಿಕೆ ಅಸ್ತ್ರ. ಈ ಎಚ್ಡಿಕೆ ಅಸ್ತ್ರದ ಮೂಲಕ ಕಾಂಗ್ರೆಸ್ ಮಣಿಸಲು ಜನರು ತೀರ್ಮಾನ ಮಾಡಿದ್ದಾರೆ ಎಂದರು.