Tuesday, April 22, 2025
Google search engine

Homeಸ್ಥಳೀಯಸಿದ್ದರಾಮಯ್ಯರವರ ಕೈಬಲ ಪಡಿಸಲು ಎಂ. ಲಕ್ಷ್ಮಣ್ ಗೆಲ್ಲಿಸಿ : ಡಾ. ಯತೀಂದ್ರ ಸಿದ್ದರಾಮಯ್ಯ

ಸಿದ್ದರಾಮಯ್ಯರವರ ಕೈಬಲ ಪಡಿಸಲು ಎಂ. ಲಕ್ಷ್ಮಣ್ ಗೆಲ್ಲಿಸಿ : ಡಾ. ಯತೀಂದ್ರ ಸಿದ್ದರಾಮಯ್ಯ

ಮೈಸೂರು: ನುಡಿದಂತೆ ನಡೆದು ೫ ಗ್ಯಾರಂಟಿ ಯೋಜನೆಗಳನ್ನು ಅಧಿಕಾರಕ್ಕೆ ಬಂದ ೯ ತಿಂಗಳಲ್ಲಿಯೇ ಜಾರಿಗೊಳಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯರವರ ಕೈ ಬಲಪಡಿಸಲು ಕಾಂಗ್ರೆಸ್ ಅಭ್ಯರ್ಥಿ ಎಂ. ಲಕ್ಷ್ಮಣ್‌ರವರನ್ನು ಅತ್ಯಧಿಕ ಮತಗಳ ಅಂತರದಿಂದ ಆಯ್ಕೆ ಮಾಡಬೇಕೆಂದು ವರುಣಾ ಕ್ಷೇತ್ರದ ಮಾಜಿ ಶಾಸಕ ಹಾಗೂ ಆಶ್ರಯ ಸಮಿತಿ ಅಧ್ಯಕ್ಷ ಡಾ. ಯತೀಂದ್ರ ಸಿದ್ದರಾಮಯ್ಯ ಮನವಿ ಮಾಡಿದರು.

ಚಾಮುಂಡೇಶ್ವರಿ ಕ್ಷೇತ್ರದ ಡಿ. ಸಾಲುಂಡಿಯಲ್ಲಿ ಬುಧವಾರ ಮೈಸೂರು ಕೊಡಗು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಂ. ಲಕ್ಷ್ಮಣ್ ಪರವಾಗಿ ಮತಯಾಚಿಸಿ ಮಾತನಾಡಿದ ಅವರು ವಿಧಾನಸಭೆಯಲ್ಲಿ ಗ್ಯಾರಂಟಿ ಯೋಜನೆಗಳ ಬಗ್ಗೆ ಹಾಡಿ ಹೊಗಳಿದ ಜಿ.ಟಿ. ದೇವೇಗೌಡರು ಬಿಜೆಪಿ ಜೊತೆ ಹೊಂದಾಣಿಕೆ ಮಾಡಿಕೊಂಡ ಮೇಲೆ ತೆಗಳುತ್ತಿದ್ದಾರೆ. ಗ್ಯಾರಂಟಿ ಯೋಜನೆಗಳಿಂದ ಮಹಿಳೆಯರು ದಾರಿ ತಪ್ಪುತ್ತಿದ್ದಾರೆಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಹೇಳುವುದರೊಂದಿಗೆ ಮಹಿಳೆಯರಿಗೆ ಅವಹೇಳನ ಮಾಡುತ್ತಿದ್ದಾರೆ.

ಇಂತಹವರು ಸ್ವಾರ್ಥಕ್ಕಾಗಿ ಭ್ರಷ್ಟ ಬಿಜೆಪಿಯೊಂದಿಗೆ ಹೊಂದಾಣಿಕೆ ಮಾಡಿಕೊಂಡು ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳಲು ಹೆಣಗಾಡುತ್ತಿದ್ದಾರೆ. ಬಿಜೆಪಿ ಪಕ್ಷ ಸುಳ್ಳು ಭರವಸೆಗಳು, ಭ್ರಷ್ಟಾಚಾರ, ಬೆಲೆ ಏರಿಕೆ, ಸರ್ಕಾರಿ ಸ್ವೌಮ್ಯದ ಉದ್ದಿಮೆಗಳನ್ನು ಖಾಸಗಿಕರಣ ಮಾಡಿ ಇಡಿ, ಪಿ.ಟಿ. ಸಂಸ್ಥೆಗಳನ್ನು ದುರುಪಯೋಗ ಪಡಿಸಿಕೊಂಡು ಅಧಿಕಾರಕ್ಕೆ ಬಂದ ೧೦ ವರ್ಷದಲ್ಲೇ ದೇಶವನ್ನು ಶ್ರೀಮಂತರರಿಗೆ ಅಡವಿಟ್ಟು ಬಡವರ ಮಧ್ಯಮವರ್ಗದವರ ಮೇಲೆ ತೆರಿಗೆ ಹಾಕಿ ಯಾವುದೇ ಅಭಿವೃದ್ಧಿ ಮಾಡದೇ ಮೋದಿ ಮುಖ ನೋಡಿ ಓಟು ಹಾಕಿ ಎನ್ನುತ್ತಿದ್ದಾರೆ. ಇಂತಹವರನ್ನು ತಿರಸ್ಕರಿಸಿ ನುಡಿದಂತೆ ನಡೆಯುವ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿ ಎಂ. ಲಕ್ಷ್ಮಣ್‌ರವರನ್ನು ಬೆಂಬಲಿಸಿ ಮನವಿ ಮಾಡಿದರು. ಈ ಸಂದರ್ಭದಲ್ಲಿ ಹಲವಾರು ಮುಖಂಡರು ಜೆಡಿಎಸ್ ಪಕ್ಷ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.

ಸಭೆಯಲ್ಲಿ ಜಿ.ಪಂ. ಮಾಜಿ ಸದಸ್ಯರಾದ ರಾಕೇಶ್ ಪಾಪಣ್ಣ, ಜವರಪ್ಪ, ಕೂರ್ಗಳ್ಳಿ ಮಹದೇವ್, ಬೀರಿಹುಂಡಿ ಬಸವಣ್ಣ, ಮಾದೇಗೌಡ, ಅರುಣ್‌ಕುಮಾರ್, ಎಪಿಎಂಸಿ ಮಾಜಿ ಅಧ್ಯಕ್ಷ ಬಸವರಾಜು, ತಾ.ಪಂ. ಸದಸ್ಯರಾದ ಸಿ.ಎಂ. ಸಿದ್ದರಾಮೇಗೌಡ, ಕೆಂಚಪ್ಪ, ಜಿ.ಕೆ. ಬಸವಣ್ಣ, ಎಂ.ಟಿ. ರವಿಕುಮಾರ್, ಓಬಿಸಿ ಮಾಜಿ ಅಧ್ಯಕ್ಷ ಕೋಟೆಹುಂಡಿ ಮಹಾದೇವ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಬಿ. ಗುರುಸ್ವಾಮಿ, ಬಿ. ರವಿ, ಗ್ರಾ.ಪಂ. ಮಾಜಿ ಅಧ್ಯಕ್ಷರಾದ ಬಸವರಾಜು, ಸೋಮಣ್ಣ, ಮಾಕಿ ಮಹದೇವ, ಮುಖಂಡರಾದ ದೇವರಾಜ್ ಕಾಟೂರು, ಹಿನಕಲ್ ಉದಯ್, ಚಂದ್ರು, ಗಡ್ಡಬಸಪ್ಪ, ಸಿದ್ದರಾಜು,ಚಿಕ್ಕಣ್ಣ, ಶಿವಪ್ಪ, ಶಿವರಾಜೇಗೌಡ, ಮನೋಜ್, ಧನಗಳ್ಳಿ ಬಸವರಾಜು ಇದ್ದರು.

RELATED ARTICLES
- Advertisment -
Google search engine

Most Popular