ಮಂಡ್ಯ: ಸಕ್ಕರೆನಾಡು ಮಂಡ್ಯದಲ್ಲಿ ರಾಜಕೀಯ ಅಖಾಡ ರಂಗೇರಿದೆ. ಅತ್ತ ಕೈ ಅಭ್ಯರ್ಥಿ ಪರ ನಟ ದರ್ಶನ್ ಮಳವಳ್ಳಿ ಭಾಗದಲ್ಲಿ ಪ್ರಚಾರ ನಡೆಸುತ್ತಿದ್ದಾರೆ. ಇತ್ತ ಮೈತ್ರಿ ಪಕ್ಷದ ಅಭ್ಯರ್ಥಿ ಎಚ್ ಡಿ ಕುಮಾರಸ್ವಾಮಿ ಪರ ಪುತ್ರ ಹಾಗು ನಟ ನಿಖಿಲ್ ಮದ್ದೂರು ಭಾಗದಲ್ಲಿ ಪ್ರಚಾರ ಆರಂಭಿಸಿದ್ದಾರೆ.
ಬಿರು ಬಿಸಿಲಿನಲ್ಲಿ ಇಬ್ಬರು ನಟರು ಅಬ್ಬರದ ಪ್ರಚಾರ ನಡೆಸುತ್ತಿದ್ದಾರೆ.
ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸುವಂತೆ ಇಬ್ಬರು ನಟರು ಕರೆ ನೀಡಿದ್ದಾರೆ.
ಗೆಲುವಿಗಾಗಿ ಎರಡು ಪಕ್ಷಗಳಿಂದ ಅಬ್ಬರದ ಪ್ರಚಾರ ಮಾಡಲಾಗುತ್ತಿದೆ.