Monday, April 21, 2025
Google search engine

Homeರಾಜ್ಯಕೆ.ಆರ್.ನಗರ ತಾಲೂಕಿನ‌ ಯುವ ಜೆಡಿಎಸ್ ಪ.ಜಾ ಘಟಕಕ್ಕೆ ನೂತನ ಅಧ್ಯಕ್ಷರಾಗಿ ಎಚ್.ಜೆ ಸುರೇಶ್ (ಸೂರಿ) ನೇಮಕ

ಕೆ.ಆರ್.ನಗರ ತಾಲೂಕಿನ‌ ಯುವ ಜೆಡಿಎಸ್ ಪ.ಜಾ ಘಟಕಕ್ಕೆ ನೂತನ ಅಧ್ಯಕ್ಷರಾಗಿ ಎಚ್.ಜೆ ಸುರೇಶ್ (ಸೂರಿ) ನೇಮಕ

ವರದಿ : ವಿನಯ್ ದೊಡ್ಡಕೊಪ್ಪಲು

ಕೆ.ಆರ್.ನಗರ: ಕೆ.ಆರ್.ನಗರ ತಾಲೂಕಿನ‌ ಯುವ ಜೆಡಿಎಸ್ ನ ಪರಿಶಿಷ್ಟ ಜಾತಿ ಘಟಕಕ್ಕೆ ನೂತನ ಅಧ್ಯಕ್ಷರನ್ನಾಗಿ ಹಂಪಾಪುರ ಗ್ರಾಮದ ಎಚ್.ಜೆ ಸುರೇಶ್ (ಸೂರಿ) ಅವರನ್ನು ನೇಮಿಸಲಾಗಿದೆ.

ಹಲವಾರು ವರ್ಷಗಳಿಂದ ಜೆಡಿಎಸ್ ಪಕ್ಷದ ಸಂಘಟನೆ ಮತ್ತು ಪಕ್ಷ ನಿಷ್ಟೆಯಾಗಿ ದುಡಿಯುವ ಸುರೇಶ್ ಅವರನ್ನ ಗುರುತಿಸಿ ಈ ಜವಬ್ದಾರಿಯನ್ನು ಪಕ್ಷವು ನೀಡಿದೆ.

ಮಾಜಿ ಸಚಿವ ಸಾ.ರಾ.ಮಹೇಶ್ ಅವರ ಸೂಚನೆಯ ಮೇರೆಗೆ ತಾಲೂಕು ಜೆಡಿಎಸ್ ಅಧ್ಯಕ್ಷ ಹಂಪಾಪುರ ಕುಮಾರ್ ಸುರೇಶ್ ಅವರನ್ನು ಅಧ್ಯಕ್ಷರನ್ನಾಗಿ ನೇಮಿಸಿದ್ದಾರೆ.

ಗುರುವಾರ ಕೆ.ಆರ್.ನಗರ ರೇಡಿಯೋ ಮೈಧಾನದಲ್ಲಿ  ನಡೆದ ಮಂಡ್ಯ ಲೋಕಸಭಾ ಚುನಾವಣೆ ಪ್ರಚಾರ ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ‌ ಅವರ ಸಮ್ಮುಖದಲ್ಲಿ ಮಾಜಿ ಸಚಿವ ಸಾ.ರಾ.ಮಹೇಶ್ ಸುರೇಶ್ ಅವರಿಗೆ ನೇಮಕಾತಿ ಪತ್ರ ವಿತರಿಸಿದರು.‌

ಈ ಸಂದರ್ಭದಲ್ಲಿ ಯುವ ಜೆಡಿಎಸ್ ಮುಖಂಡ ವಡ್ಡರವಿ ಮತ್ತಿತರರು ಹಾಜರಿದ್ದರು.

RELATED ARTICLES
- Advertisment -
Google search engine

Most Popular