ಮಂಡ್ಯ: ಮಂಡ್ಯದಲ್ಲಿ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಬಿರುಸಿನ ಪ್ರಚಾರ ನಡೆಸುತ್ತಿದ್ದು, ಮಳವಳ್ಳಿ ವಿಧಾನ ಸಭಾ ಕ್ಷೇತ್ರದಲ್ಲಿ ಸ್ಟಾರ್ ಚಂದ್ರು ಅಬ್ಬರದ ಪ್ರಚಾರ ಮಾಡುತ್ತಿದ್ದಾರೆ.
ನೆನ್ನೆ ಸಿನಿ ಸ್ಟಾರ್ ದರ್ಶನ್ ಸ್ಟಾರ್ ಚಂದ್ರು ಪರ ಮತಯಾಚನೆ ಮಾಡಿದ್ದರು.

ಮಳವಳ್ಳಿ ಕ್ಷೇತ್ರದ 30 ಹಳ್ಳಿಗಳಲ್ಲಿ ಇಂದು ಕಾಂಗ್ರೆಸ್ ಅಭ್ಯರ್ಥಿ ವೆಂಕಟರಮಣೇಗೌಡ @ ಸ್ಟಾರ್ ಚಂದ್ರು ಮತಯಾಚನೆ ಮಾಡಿದ್ದಾರೆ.
ಶಾಸಕ ನರೇಂದ್ರ ಸ್ವಾಮಿ ನೇತೃತ್ವದಲ್ಲಿ ಮತಯಾಚನೆ ಮಾಡುತ್ತಿದ್ದು, ಹಳ್ಳಿಗಳಲ್ಲಿ ಸ್ಟಾರ್ ಚಂದ್ರುಗೆ ಅದ್ದೂರಿಯಾಗಿ ಸ್ವಾಗತ ಕೋರಲಾಗುತ್ತಿದೆ.
ಮಳವಳ್ಳಿ ತಾಲೂಕಿನ ಬೆಳಕವಾಡಿಯಿಂದ ಪ್ರಚಾರ ಆರಂಭವಾಗಿದ್ದು, ಕಾಂಗ್ರೆಸ್ ಪಕ್ಷಕ್ಕೆ ಮತ ಕೊಟ್ಟು ಆಶೀರ್ವದಿಸಿ ಎಂದು ಸ್ಟಾರ್ ಚಂದ್ರು ಮನವಿ ಮಾಡಿದ್ದಾರೆ.