Sunday, April 20, 2025
Google search engine

Homeಅಪರಾಧಕಾನೂನುಗದಗ ಕೊಲೆ ಪ್ರಕರಣ: ದರೋಡೆಯ ಉದ್ದೇಶವಿಲ್ಲ, ಕೊಲೆ ಮಾಡಲೆಂದೆ ಬಂದಿದ್ದಾರೆ- ಐಜಿಪಿ

ಗದಗ ಕೊಲೆ ಪ್ರಕರಣ: ದರೋಡೆಯ ಉದ್ದೇಶವಿಲ್ಲ, ಕೊಲೆ ಮಾಡಲೆಂದೆ ಬಂದಿದ್ದಾರೆ- ಐಜಿಪಿ

ಗದಗ: ನಗರದ ದಾಸರ ಓಣಿಯಲ್ಲಿ ನಡೆದ ನಾಲ್ವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಲೆ ನಡೆದ ಸ್ಥಳಕ್ಕೆ ಬೆಳಗಾವಿ ಉತ್ತರ ವಲಯದ ಐಜಿಪಿ ವಿಕಾಸಕುಮಾರ ವಿಕಾಸ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ನಗರಸಭೆ ಉಪಾಧ್ಯಕ್ಷೆ ಸುನಂದಾ ಬಾಕಳೆ ಮನೆಗೆ ಭೇಟಿ ನೀಡಿದ ಐಜಿಪಿ ಮಾಧ್ಯಮದೊಂದಿಗೆ ಮಾತನಾಡಿ, ಅಪರಾಧಗಳ ಪತ್ತೆಗಾಗಿ ನಾಲ್ಕು ವಿಶೇಷ ತಂಡಗಳನ್ನು ರಚನೆ ಮಾಡಲಾಗಿದೆ. ಸದ್ಯ ಸಿಕ್ಕಿರುವ ಪ್ರಾಥಮಿಕ ಮಾಹಿತಿ ಆಧಾರದ ಮೇಲೆ ವಿಭಿನ್ನ ಆಯಾಮಗಳಲ್ಲಿ ತನಿಖೆ ಮಾಡಲಾಗುವುದು ಎಂದರು.

ಕ್ರೈಂ ಆಗಿರುವುದನ್ನು ಗಮನಿಸಿದರೆ ಕಳ್ಳತನ, ದರೋಡೆಗೆ ಬಂದಿದ್ದಲ್ಲ, ಕೊಲೆ ಉದ್ದೇಶಕ್ಕೆ ಬಂದಿರುವುದು ಮೇಲ್ನೋಟಕ್ಕೆ ಗೋಚರಿಸುತ್ತಿದೆ. ಮಧ್ಯರಾತ್ರಿ ಗಾಢನಿದ್ರೆ ಸಮಯ ಆಗಿದ್ದರಿಂದ ಕೊಲೆ‌ ಸಂದರ್ಭದಲ್ಲಿ ಕೂಗಾಟ ಕೇಳಿ ಬಂದಿರದ ಸಾಧ್ಯತೆ ಇಲ್ಲ. ಕೊಲೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ತನಿಖೆ ನಂತರವಷ್ಟೇ ನಿಖರ ಕಾರಣ ತಿಳಿದು ಬರಲಿದೆ. ಕೊಲೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ಆರೋಪಗಳನ್ನು ಶೀಘ್ರದಲ್ಲಿ ವಶಕ್ಕೆ ಪಡೆಯಲಾಗುವುದು ಎಂದರು.

RELATED ARTICLES
- Advertisment -
Google search engine

Most Popular