Sunday, April 20, 2025
Google search engine

Homeಅಪರಾಧಬೆಂಗಳೂರು: ನೀರಿನ ಸಂಪ್‌ ಗೆ ಬಿದ್ದು ತಾಯಿ, ಮಗು ಸಾವು

ಬೆಂಗಳೂರು: ನೀರಿನ ಸಂಪ್‌ ಗೆ ಬಿದ್ದು ತಾಯಿ, ಮಗು ಸಾವು

ಬೆಂಗಳೂರು: ನೀರಿನ ಸಂಪ್‌ ಗೆ ಬಿದ್ದು ತಾಯಿ, ಮಗು ಮೃತಪಟ್ಟಿರುವ ಘಟನೆ ಯಲಹಂಕ ನ್ಯೂಟೌನ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಸುಗಪ್ಪ ಲೇಔಟ್ ನಿವಾಸಿ ಕವಿತಾ (30) ಮತ್ತು ಆಕೆಯ ಪುತ್ರ ಪವನ್(6) ಮೃತರು.

ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು ತಾಲೂಕಿನ ಚೆಂದನೂರಿನ ಕವಿತಾ ಪುತ್ರನೊಂದಿಗೆ ಸುಗಪ್ಪ ಲೇಔಟ್‌ ನ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಜೀವನ ನಿರ್ವಹಣೆಗೆ ಮನೆ ಸಮೀಪದ ಮನೆಯೊಂದರಲ್ಲಿ ಅಡುಗೆ ಕೆಲಸ ಮಾಡಿಕೊಂಡಿದ್ದರು. ಅವರ ಮನೆ ಪಕ್ಕದಲ್ಲೇ ಖಾಲಿ ಜಾಗ ಇದ್ದು, 10 ಅಡಿ ಆಳದ ನೀರಿನ ಸಂಪ್ ಇದೆ.

ಕವಿತಾ ಗುರುವಾರ ಎಂದಿನಂತೆ ಮನೆ ಕೆಲಸಕ್ಕೆ ಹೋಗಿದ್ದು, ಸಂಜೆ ಪುತ್ರ ಪವನ್ ಪಕ್ಕದ ಖಾಲಿ ಜಾಗದಲ್ಲಿ ಆಟವಾಡುವಾಗ ಆಯ ತಪ್ಪಿ 10 ಅಡಿ ಆಳದ ನೀರಿನ ಸಂಪ್‌ ಗೆ ಬಿದ್ದಿದ್ದಾನೆ. ಅದನ್ನು ಗಮನಿಸಿದ ಕವಿತಾ ಕೂಡಲೇ ರಕ್ಷಣೆಗೆ ಧಾವಿಸಿದ್ದು, ಆಕೆಯೂ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.

ಘಟನೆ ಸಂಬಂಧ ಖಾಲಿ ಜಾಗದ ಮಾಲೀಕರ ವಿರುದ್ಧ ನಿರ್ಲಕ್ಷ್ಯ ಆರೋಪದಡಿ ಪ್ರಕರಣ ದಾಖಲಾಗಿದೆ. ಘಟನೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಅಸ್ವಾಭಾವಿಕವಾಗಿ ನಡೆದಿರುವ ಘಟನೆಯೋ? ಅಥವಾ ಆತ್ಮಹತ್ಯೆಯೋ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ಹೇಳಿದ್ದು‌ ಈ ಸಂಬಂಧ ಯಲಹಂಕ ನ್ಯೂಟೌನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES
- Advertisment -
Google search engine

Most Popular