Monday, April 21, 2025
Google search engine

Homeರಾಜಕೀಯಕಾಂಗ್ರೆಸ್ ಅಭ್ಯರ್ಥಿ ವೆಂಕಟರಮಣೇಗೌಡ ಅವರನ್ನು ಬೆಂಬಲಿಸಿ: ಮತದಾರರಲ್ಲಿ ನಟ ದರ್ಶನ್ ಮನವಿ

ಕಾಂಗ್ರೆಸ್ ಅಭ್ಯರ್ಥಿ ವೆಂಕಟರಮಣೇಗೌಡ ಅವರನ್ನು ಬೆಂಬಲಿಸಿ: ಮತದಾರರಲ್ಲಿ ನಟ ದರ್ಶನ್ ಮನವಿ

ವರದಿ: ವಿನಯ್ ದೊಡ್ಡಕೊಪ್ಪಲು

ಕೆ.ಆರ್.ನಗರ: ಮಂಡ್ಯ ಲೋಕಸಭೆ ಚುನಾವಣೆಯಲ್ಲಿ‌ ಕಾಂಗ್ರೆಸ್ ಅಭ್ಯರ್ಥಿ ವೆಂಕಟರಮಣೇಗೌಡ ಅವರನ್ನು ಬೆಂಬಲಿಸಿ ಕೆ.ಆರ್.ನಗರ ಶಾಸಕ ಡಿ.ರವಿಶಂಕರ್ ಅವರ ಕೈ ಬಲಪಡಿಸಿ ಎಂದು  ಚಿತ್ರ ನಟ ದರ್ಶನ್ ಮತದಾರರಿಗೆ ಮನವಿ ಮಾಡಿದರು

ಸಾಲಿಗ್ರಾಮ ತಾಲೂಕಿನ ಹೊಸೂರು ಗ್ರಾಮದಲ್ಲಿ ಮಂಡ್ಯ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವೆಂಕಟರಮಣೇಗೌಡ ಅವರ ಪರವಾಗಿ ರೋಡ್ ಶೋ ಮೂಲಕ ಮತಯಾಚನೆ ಮಾಡಿ ಮಾತನಾಡಿದ ಅವರಿ ಅಭಿವೃದ್ದಿ ದೃಷ್ಠಿಯಿಂದ ಕಾಂಗ್ರೇಸ್ ಪಕ್ಷವನ್ನು ಬೆಂಬಲಿಸಿ ಎಂದು ಹೇಳಿದರು

ಶಾಸಕ ಡಿ‌.ರವಿಶಂಕರ್ ಮಾತನಾಡಿ ಕೊಟ್ಟ ಮಾತಿನಂತೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಪಕ್ಷದ  ಸರ್ಕಾರ 5 ಗ್ಯಾರಂಟಿಗಳು ಜಾರಿಗೆ ತಂದು ಬಡವರ ಪರ ಎಂದು ಸಾಬೀತು ಮಾಡಿದ್ದು ಮುಂದೆಯು ಸಿದ್ದರಾಮಯ್ಯ ನೇತೃತ್ವದಲ್ಲಿ ಇನ್ನಷ್ಟು ಜನಪರ ಕಾರ್ಯಕ್ರಮಗಳನ್ನು ಮಾಡಲು ವೆಂಕಟರಮಣೇಗೌಡರನ್ನು ಆರ್ಶಿವದಿಸಿ ಎಂದರು

 ಮುಂದಿನ ದಿನಗಳಲ್ಲಿ ಕಾಂಗ್ರೇಸ್ ಅಭ್ಯರ್ಥಿ ವೆಂಕಟರಮಣೇಗೌಡ ಅವರು ಜನರ ಆರ್ಶಿವಾದ ದಿಂದ ಗೆಲುವು ಸಾಧಿಸಿದರೇ ಕೆ.ಆರ್.ನಗರ ಮತ್ತು ಸಾಲಿಗ್ರಾಮ ತಾಲೂಕುಗಳ ಅಭಿವೃದ್ಧಿಗೆ ಸಹಕಾರಿಯಾಗಲಿದ್ದು ಇದಕ್ಕಾಗಿ ಕಾಂಗ್ರೇಸ್ ಪಕ್ಷವನ್ನು ಬೆಂಬಲಿಸಿ ಎಂದು ಕೋರಿದರು.

ಇದಕ್ಕು ಮೊದಲು ದರ್ಶನ್ ಅವರು ಚುಂಚನಕಟ್ಟೆ ಗ್ರಾಮದಲ್ಲಿಯು ಮತಯಾಚನೆ ಮಾಡಿ ಹೊಸೂರು ಗ್ರಾಮಕ್ಕೆ ಶಾಸಕ ಡಿ.ರವಿಶಂಕರ್ ಅವರ ಜೊತೆ ಅಗಮಿಸಿದ ದರ್ಶನ್ ಅವರನ್ನು ಅದ್ದೂರಿ ಯಾಗಿ ಸ್ವಾಗತಿಸಿ  ಬೃಹತ್ ಸೇಬಿನ ಹಾರ ಹಾಕಿ ಅಭಿನಂದಿಸಲಾಯಿತು

      ಈ ಸಂದರ್ಭದಲ್ಲಿ ತಾ.ಪಂ.ಮಾಜಿ ಅಧ್ಯಕ್ಷ ಹಾಡ್ಯ ಮಹದೇವಸ್ವಾಮಿ, ತಾಲೂಕು ಕುರುಬರ ಸಂಘದ ಅಧ್ಯಕ್ಷ ಚೀರನಹಳ್ಳಿ ಶಿವಣ್ಣ, ಮುಖಂಡರಾದ ಗಂಧನಹಳ್ಳಿ ವೆಂಕಟೇಶ್, ಚಿಕ್ಕಹನಸೋಗೆ ಪಾಲಕ್ಷ, ದಿಡ್ಡಹಳ್ಳಿ ಬಸವರಾಜು, ಜಯಂತ್, ಡೈರಿ ಮಾದು, ಹಳಿಯೂರು ಪ್ರಭಾಕರ್, ಎಲ್ಐಸಿ ಜಗದೀಶ್, ಹಳಿಯೂರು ಗ್ರಾ.ಪಂ.ಉಪಾಧ್ಯಕ್ಷ ನೂತನ್ ಗೌಡ, ಹೊಸೂರು ಡೈರಿ ಅಧ್ಯಕ್ಷ ಎಚ್.ಜೆ.ರಮೇಶ್, ನಿರ್ದೇಶಕ ಪರುಶುರಾಮ್, ಕಾಂಗ್ರೇಸ್ ಅಧ್ಯಕ್ಷ ಸಚಿನ್ , ಮೀನ್ ರಂಗಸ್ವಾಮಿ,  ಸೋಮು, ಟೂಬ್ ಹರೀಶ್, ಸಯದ್ ಸಲೀಂ,ಎರಮನುಗನಹಳ್ಳಿ ಆಸ್ಲಾಂ, ಆರ್.ಆರ್.ಎಸ್.ಚಂದ್ರ, ಐಪಿ ವೆಂಕಟೇಶ್, ಓಂಕಾರ್, ದೊಡ್ಡಕೊಪ್ಪಲು ಡಿ.ಎನ್.ಅಪ್ಪಾಜಿ,ಚಿಕ್ಕಕೊಪ್ಪಲು ನವೀನ, ಯೋಜನಾ ಪ್ರಾಧಿಕಾರದ ನಿರ್ದೇಶಕಿ ಸರಿತಾ ಜವರಪ್ಪ, ಮಹಿಳಾ ಕಾಂಗ್ರೇಸ್ ಮುಖಂಡರಾದ ಉಷಾ ಪ್ರಶನ್ನ ಸೇರಿದಂತೆ ಮತ್ತಿತರರು ಹಾಜರಿದ್ದರು.

RELATED ARTICLES
- Advertisment -
Google search engine

Most Popular