Monday, April 21, 2025
Google search engine

Homeರಾಜಕೀಯಸಂಸದನನ್ನಾಗಿ ಆಯ್ಕೆ ಮಾಡಿ ಆಶೀರ್ವದಿಸಿ: ಕಾಂಗ್ರೆಸ್ ಅಭ್ಯರ್ಥಿ ರಾಧಾಕೃಷ್ಣ ಮನವಿ

ಸಂಸದನನ್ನಾಗಿ ಆಯ್ಕೆ ಮಾಡಿ ಆಶೀರ್ವದಿಸಿ: ಕಾಂಗ್ರೆಸ್ ಅಭ್ಯರ್ಥಿ ರಾಧಾಕೃಷ್ಣ ಮನವಿ

ಕಲಬುರಗಿ: ತಮ್ಮನ್ನು ಕಲಬುರಗಿ ಸಂಸದರನ್ನಾಗಿ ಆಯ್ಕೆ ಮಾಡಿ ಕಳಿಸಿದರೆ ನಗರ ಹಾಗೂ ಜಿಲ್ಲೆಯ ಅಭಿವೃದ್ದಿಗೆ ಸಕಲ ಕ್ರಮ ಕೈಗೊಳ್ಳಲಾಗುವುದು ಎಂದು ಕಾಂಗ್ರೆಸ್ ಅಭ್ಯರ್ಥಿ ರಾಧಾ ಕೃಷ್ಣ ದೊಡ್ಡಮನಿ ಹೇಳಿದರು.

ಮಾರವಾಡಿ ಹಾಗೂ ಜೈನ್ ಸಮಾಜದ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.

ಕಳೆದ‌ ನಲವತ್ತು ವರ್ಷದಿಂದ ತಾವು ಸಾರ್ವಜನಿಕರೊಂದಿಗೆ ಕೆಲಸ ಮಾಡಿಕೊಂಡು ಬರುತ್ತಿದ್ದು ಸಾರ್ವಜನಿಕರ ಕಷ್ಟ ಸುಖಗಳಿಗೆ ಸ್ಪಂದಿಸುತ್ತಿದ್ದೇನೆ. ತಮಗೆ ಸಂವಿಧಾನ ಬದ್ಧ ಅವಕಾಶ ದೊರಕಿದರೆ ಮತ್ತಷ್ಟು ಸೇವೆ ಮಾಡುವುದಾಗಿ ಅವರು ವಾಗ್ಧಾನ ಮಾಡಿದರು.

ಸಚಿವ ಶರಣಪ್ರಕಾಶ ಪಾಟೀಲ ಮಾತನಾಡಿ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಆರ್ಟಿಕಲ್‌371( ಜೆ ) ಜಾರಿಗೊಳಿಸುವ ಮೂಲಕ ಈ ಭಾಗದ ಜನರಿಗೆ ನ್ಯಾಯ ಕೊಡಿಸಿದ್ದಾರೆ.‌ಇದನ್ನು ಪ್ರತಿಯೊಬ್ಬರು ನೆನಪಿನಲ್ಲಿಟ್ಟುಕೊಳ್ಳಬೇಕು ಎಂದರು.

ಕೆಕೆಆರ್ ಡಿಬಿ ಅಧ್ಯಕ್ಷ ಅಜಯ್ ಸಿಂಗ್ ಮಾತ‌ನಾಡಿ‌ ದಿವಂಗತ ಧರಂ ಸಿಂಗ್ ಹಾಗೂ ಹಿರಿಯ ನಾಯಕ ಮಲ್ಲಿಕಾರ್ಜುನ‌ ಖರ್ಗೆ ಅವರ 50 ವರ್ಷಗಳ  ಸಾರ್ವಜನಿಕರ ಸೇವೆ ನೆನಪಿಸಿಕೊಂಡರು.

ಉಮೇಶ್ ಜಾಧವ ಮಲ್ಲಿಕಾರ್ಜುನ ಖರ್ಗೆ ಅವರು ಮಾಡಿದ ಕೆಲಸದಲ್ಲಿ 0.1 % ಕೆಲಸ ಮಾಡಿಲ್ಲ. ಅವರ ಸೋಲು ಅಭಿವೃದ್ದಿ ಮೇಲೆ ಹೊಡೆತ ಬಿದ್ದಿದೆ. ಈ ಸಲ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗೆ ಮತ ನೀಡಬೇಕು ಎಂದು ಮನವಿ ಮಾಡಿದರು.

  ಅಭಿವೃದ್ದಿ ಆಧಾರದ ಮೇಲೆ  ಮತದಾನ ಮಾಡಿ:  ಪ್ರಿಯಾಂಕ್ ಖರ್ಗೆ

ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಮಾತನಾಡಿ ಈ ಸಲದ ಚುನಾವಣೆಯಲ್ಲಿ ಭಾವನಾತ್ಮಕವಾಗಿ ಯೋಚನೆ ಮಾಡದೇ ವಾಸ್ತವದ ಸಂಗತಿ ಹಾಗೂ ಅಭಿವೃದ್ದಿ ಆಧಾರದ ಮೇಲೆ ಯೋಚಿಸಿ ಮತದಾನ ಮಾಡಿ ಎಂದರು.

ಕಲಬುರಗಿ ಅಭಿವೃದ್ದಿಗೆ ನೀಲಿ ನಕ್ಷೆ ಹಾಕಲಾಗಿದೆ. ಸಮಾಜದ ಎಲ್ಲ ವರ್ಗದ ಬೆಂಬಲ ಬೇಕಿದೆ. ಕೃಷಿ ಮಾರುಕಟ್ಟೆ ಹಬ್ ನಿರ್ಮಾಣ ಸೇರಿದಂತೆ ಹಲವಾರು ಹೊಸ ಯೋಜನೆಗಳನ್ನು ಜಾರಿಗೊಳಿಸಲು ಯೋಚಿಸಲಾಗಿದ್ದು ಅವುಗಳು ಅನುಷ್ಠಾನ‌ಗೊಳಿಸಲು ನಿಮ್ಮೆಲ್ಲರ ಆಶೀರ್ವಾದ ಬೇಕಿದೆ.

ಮಾರವಾಡಿ ಹಾಗೂ ಜೈನ್ ಸಮಾಜಕ್ಕೆ ರಾಜಕೀಯ ಸ್ಥಾನಮಾನ ಹಾಗೂ ಪದ್ಮಾವತಿ ದೇವಾಲಯ ನಿರ್ಮಾಣ‌, ದಿಗಂಬರ್ ಮಂದಿರ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುವುದು ಜತೆಗೆ ಜೈನ್ ಭವನ್ ನಿರ್ಮಾಣ ಕುರಿತಂತೆ ಪ್ರಸ್ತಾಪ ಸರ್ಕಾರದ‌ ಮುಂದಿದ್ದು ಅಗತ್ಯ ಕ್ರಮಕೈಗೊಳ್ಳಲಾಗುವುದು ಎಂದರು.

ಮಲ್ಲಿಕಾರ್ಜುನ ಖರ್ಗೆ ಅವರು ಪ್ರಧಾನಿ ಮಂತ್ರಿಯಾಗುವ ಎಲ್ಲ ಅವಕಾಶಗಳಿವೆ. ಹೀಗಾಗಿ ಮತದಾರರು ಈ ಸಲ ಕಾಂಗ್ರೆಸ್ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ಕಳಿಸಬೇಕು ಎಂದು ಹರ್ಯಾಣದ ಅಂಬಾಲ ಮೂಲದ ಅಶೋಕ ಜೈನ್  ಮನವಿ ಮಾಡಿದರು.

ವೇದಿಕೆಯ ‌ಮೇಲೆ ಡಿಸಿಸಿ ಅಧ್ಯಕ್ಷ ಜಗದೇವ ಗುತ್ತೇದಾರ, ಕಲಬುರಗಿ ಉತ್ತರ ಶಾಸಕಿ ಕನೀಜ್ ಫಾತೀಮಾ, ಜಿಡಿಎ ಅಧ್ಯಕ್ಷ ಮಜರ್ ಖಾನ್, ಮಾರವಾಡಿ ಸಮಾಜದ ಅಧ್ಯಕ್ಷ ಲಕ್ಷ್ಮೀ ರಮಣ್ ಸೇರಿದಂತೆ ಹಲವರಿದ್ದರು.

RELATED ARTICLES
- Advertisment -
Google search engine

Most Popular