Saturday, April 19, 2025
Google search engine

Homeಸ್ಥಳೀಯಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ವಿರುದ್ಧ ಸಿಎಂ ಸಿದ್ದರಾಮಯ್ಯ ವಾಗ್ದಾಳಿ

ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ವಿರುದ್ಧ ಸಿಎಂ ಸಿದ್ದರಾಮಯ್ಯ ವಾಗ್ದಾಳಿ

ವರದಿ : ವಿನಯ್ ದೊಡ್ಡಕೊಪ್ಪಲು

ಕೆ.ಆರ್.ನಗರ: ದ್ವೇಷದ ರಾಜಕರಾಣಕ್ಕೆ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಮತ್ತು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ನಿಸ್ಸಿಮರು ಇವರು ಮಾತ್ರ ಸಾಚಾ, ನಾವು ಕಳ್ಳರಾ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಾಜಿ ಪ್ರಧಾನಿ ದೇವೇಗೌಡರ ವಿರುದ್ದ ಹರಿಹಾಯ್ದರು.

ಪಟ್ಟಣದ ರೇಡಿಯೋ ಮೈದಾನ(ಡಾ.ರಾಜ್ ಬಾನಂಗಳ)ದಲ್ಲಿ ಮಂಡ್ಯ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ವೆಂಕಟರಮಣೇಗೌಡ(ಸ್ಟಾರ್ ಚಂದ್ರು) ಪರವಾಗಿ ಚುನಾವಣಾ ಪ್ರಚಾರ ಸಭೆಯನ್ನು ಉದ್ದೇಶಿ ಮಾತನಾಡಿದ ಅವರು ದೇವೇಗೌಡರಿಗೆ ಕುಟುಂಬದರ ಮೇಲೆ ಪ್ರೀತಿ, ಅವರು ಬೆಳೆಯ ಬೇಕು ಆದರೆ ಬೇರೆಯವರನ್ನು ಕಂಡರ ಆಗಲ್ಲ, ಬೆಳೆಯುವುದಕ್ಕೂ ಬಿಡಲ್ಲ, ಇವರ ಕುಟುಂಬಕ್ಕೋಸ್ಕರ ಬಿಜೆಪಿ ಪಕ್ಷದ ಜತೆ ಮೈತ್ರಿ ಮಾಡಿಕೊಂಡಿದ್ದಾರೆ. ಬಿಜೆಪಿ ಅವರ ಜೊತೆ ಮಾತ್ತೇತ್ತಿದರೆ ಲೋಕಸಭಾ ಚುನಾವಣೆ ಕಳೆದ ಮೇಲೆ ಸರ್ಕಾರ ಪತನವಾಗುತ್ತೆ ಎನ್ನುತ್ತಾರೆ, ೧೩೬ ಶಾಸಕರಿದ್ದಾರೆ ಇನ್ನೂ ನಾಲ್ಕು ವರ್ಷಗಳು ಕಾಂಗ್ರೆಸ್ ಸರ್ಕಾರ ಇರುತ್ತದೆ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ನಾವೇ ಮತ್ತೆ ಅಧಿಕಾರಕ್ಕೆ ಬರುತ್ತೇವೆ ಎಂದರು. ದೇಶದಲ್ಲಿ ೧೦ ವರ್ಷಗಳು ನರೇಂದ್ರ ಮೋದಿ ಅವರು ಪ್ರಧಾನಮಂತ್ರಿಯಾಗಿದ್ದರಲ್ಲ, ರಾಜ್ಯಕ್ಕೆ ಏನೂ ಕೊಡುಗೆ ಕೊಟ್ಟಿದ್ದಾರೆ ಹೇಳಿಲಿ. ಯಾವ ನೈತಿಕತೆಯಿಂದ ಲೋಕಸಭಾ ಚುನಾವಣೆಯಲ್ಲಿ ಓಟ್ ಕೇಳುತ್ತಾರೆ ಆದ್ದರಿಂದ ನಮ್ಮಪಕ್ಷದ ಅಭ್ಯರ್ಥಿ ವೆಂಕಟರಮಣೇಗೌಡ(ಸ್ಟಾರ್ ಚಂದ್ರು) ಅವರಿಗೆ ಅತ್ಯಂತ ಅಧಿಕ ಮತಗಳನ್ನು ಕೊಟ್ಟು ಗೆಲ್ಲಿಸಿ ಎಂದರು.

ಇದಕ್ಕೂ ಮೊದಲು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಾತನಾಡಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಬಂದಾಗಲೆಲ್ಲ ಬಡವರ, ಶೋಷಿತರ ಪರವಾಗಿ ಅಭಿವೃದ್ಧಿಗೆ ಪೂರಕವಾದ ಯೋಜನೆಗಳನ್ನು ಜಾರಿಗೆ ತಂದಿದೆ. ಬಿಸಿಯೂಟ, ಸ್ತ್ರೀ ಶಕ್ತಿ ಸಂಘಗಳಿಗೆ ಆರ್ಥಿಕ ಚೈತನ್ಯ, ಗ್ಯಾರಂಟಿ ಯೋಜನೆ ಸೇರಿದಂತೆ ಹತ್ತು ಹಲವು ಕಾರ್ಯಕ್ರಮಗಳನ್ನು ಕೊಟ್ಟಿದೆ ಎಂದರು. ಬಿಜೆಪಿಯವರು ಜನ್-ದನ್ ಖಾತೆಗೆ ಹಣ ಹಾಕಿದ್ರ ಎಂದು ಪ್ರಶ್ನೆ ಮಾಡಿದ ಡಿಕೆಶಿ ಅವರು ಅಧಿಕಾರಿದಲ್ಲಿದ್ದಾಗ ಏನೂ ಮಾಡಲಿಲ ಅದಕ್ಕಾಗಿ ನಾವು ಭಾರತ್ ಜೊಡೋ ಯಾತ್ರೆ ಆರಂಬಿಸಿ ನೊಂದವರಿಗೆ ಏನಾನದರೂ ಮಾಡುವ ಉದ್ದೇಶದಿಂದ ಗ್ಯಾರಂಟಿ ಯೋಜನೆ ಜಾರಿಗೊಳಿಸಿದ್ದು ಯಡಿಯೂರಪ್ಪ ಹಾಗೂ ಅವರ ಮಗ ವಿಜಯೇಂದ್ರ ಗ್ಯಾರಂಟಿ ಯೋಜನೆಗಳು ಚುನಾವಣೆ ಕಳೆದ ಮೇಲೆ ನಿಂತು ಹೋಗುತ್ತದೆ ಎಂದು ಸುಳ್ಳು ಪ್ರಚಾರ ಮಾಡುತ್ತಿದ್ದಾರೆ ಜನರು ನಂಬ ಬೇಡಿ ಎಂದರು.

ಪ್ರಧಾನಮತ್ರಿ ನರೇಂದ್ರ ಮೋದಿ ಬಂದ ಮೇಲೆ ಪೆಟ್ರೋಲ್, ಡಿಸೇಲ್ ರೇಟ್ ಜಾಸ್ತಿ ಆಯಿತು, ಅಗತ್ಯವಸ್ತುಗಳ ಬೆಲೆ ದುಪ್ಪಟ್ಟು ಮಾಡಿದರು. ರೈತರ ಬೆಳೆಗಳಿಗೆ ದುಪ್ಪಟ್ಟು ಹಣ, ಬೆಲೆ ಏರಿಕೆ ಕಡಿಮೆ ಮಾಡುತ್ತೇವೆ ಎಂದರು ಇದ್ಯಾವುದು ಈಡೇರಲಿಲ್ಲ, ರಾಜ್ಯದ ಜನರಿಗೆ ಗ್ಯಾರಂಟಿ ಯೋಜನೆಗಳ ಮೂಲಕ ಸಂಕಷ್ಟವನ್ನು ದೂರ ಮಾಡಿದ್ದೇವೆ ಎಂದರು. ರಾಜ್ಯದಲ್ಲಿ ಬರ ಇದ್ದರು ಕೆರೆಕಟ್ಟೆಗಳನ್ನು ತುಂಬುಸುವುದು, ಕುಡಿಯುವ ನೀರು ಒದಗಿಸಲಾಗುತ್ತಿದೆ, ಗ್ಯಾರಂಟಿ ಯೋಜನೆಗಳಿಗೆ ಹಣವನ್ನು ಮೀಸಲಿಡಲಾಗಿದೆ, ಬಿಜೆಪಿ, ಜೆಡಿಎಸ್ ಅವರ ಅಪಪ್ರಚಾರಕ್ಕೆ ಕಿವಿ ಕೊಡ ಬೇಡಿ ಎಂದರು. ಶಾಸಕ ಡಿ.ರವಿಶಂಕರ್ ಮಾತನಾಡಿ ನಾನು ನೀವು ಚುನಾವಣೆಯಲ್ಲಿ ಆಸ್ತಿ ಘೋಷಣೆ ಮಾಡಿಕೊಂಡಿದ್ದೇವೆ, ಹಾಗಿದ್ದ ಮೇಲೆ ೪೦೦ ಕೋಟಿ ಹೇಗೆ ಖರ್ಚು ಮಾಡಿದ್ದಿರಿ ಎಂದು ಪ್ರಶ್ನೆ ಮಾಡಿದರು, ಕಾಂಗ್ರೆಸ್ ಸರ್ಕಾರ ಬಂದರೆ ದರಿದ್ರ ಎಂದಿದ್ದಿರಿ ತಾಲ್ಲೂಕಿನಲ್ಲಿ ನಮ್ಮ ರೈತರು ಉತ್ತಮ ಬೆಳೆ ಬೆಳೆದಿದ್ದಾರೆ, ಸಂತೋಷದಿದ ಇದ್ದಾರೆ ಎಂದರು.

ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಹೇಳಿದ್ದಾರೆ ವಿಷದ ಬಾಟಲ್ ಹಿಡಿದು ಕೊಂಡು ಮತ ಕೇಳಿದರು ಎಂದಿದ್ದಾರೆ, ಕಳೆದ ವಿಧಾನಸಭಾ ಚುನಾವಣೆಗೂ ಮುನ್ನು ೭ ತಿಂಗಳು ಜನಾರ್ಶೀವಾದ ಯಾತ್ರೆ ಮೂಲಕ ಜನರ ಬಳಿಗೆ ಹೋಗಿ ಕೈ ಮುಗಿದು ಮತ ಕೇಳಿದ್ದು ಸ್ವಾಮಿ, ಇದಕ್ಕೆ ತಾಲ್ಲೂಕಿನ ಜನರು ಹಾಗೂ ಮಾದ್ಯಮದವರು ಸಾಕ್ಷಿ ಎಂದರು. ಬಳಿಕ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ, ಮಂಡ್ಯ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವೆಂಕಟರಮಣೇಗೌಡ(ಸ್ಟಾರ್ ಚಂದ್ರು) ಮಾತನಾಡಿ ಮತಯಾಚನೆ ಮಾಡಿದರು. ಇದೇ ವೇಳೆ ಪುರಸಭಾ ಮಾಜಿ ಸದಸ್ಯ ಅಸ್ಲಂಪಾಷ, ವೀರಶೈವ ಮುಖಂಡ ವೈ.ಆರ್.ಶಿವಕುಮಾರ್ ಜೆಡಿಎಸ್ ತೊರೆದು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸಮುಖದಲ್ಲಿ ಕಾಂಗ್ರೆಸ್ ಪಕ್ಷ ಸೇರಿದರು.

ಜಿಲ್ಲಾ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಬಿ.ಜೆ.ವಿಜಯಕುಮಾರ್, ಕೆಪಿಸಿಸಿ ಕಾರ್ಯಕಾರಣಿ ಸದಸ್ಯ ದೊಡ್ಡಸ್ವಾಮೇಗೌಡ, ಮಳವಳ್ಳಿ ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಜಿ.ಪಂ.ಮಾಜಿ ಸದಸ್ಯರಾದ ಮಾರ್ಚಹಳ್ಳಿ ಶಿವರಾಮ್, ಸಿದ್ದಪ್ಪ, ರಾಜಯ್ಯ, ಶಿವಣ್ಣ, ಡಿಸಿಸಿ ಬಾಂಕ್ ಮಾಜಿ ಉಪಾಧ್ಯಕ್ಷರಾದ ಸುಬ್ಬಯ್ಯ, ಸಿದ್ದೇಗೌಡ, ಪುರಸಭಾ ಸದಸ್ಯರಾದ ಕೋಳಿ ಪ್ರಕಾಶ್, ನಟರಾಜ್, ಸುಬ್ರಮಣ್ಯ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಗಡ್ಡಮಹೇಶ್, ತಾ.ಕುರುಬರ ಸಂಘದ ಅಧ್ಯಕ್ಷ ಚೀರನಹಳ್ಳಿ ಶಿವಣ್ಣ, ತಾ.ಪಂ.ಮಾಜಿ ಅಧ್ಯಕ್ಷ ಹಾಡ್ಯ ಮಹದೇವಸ್ವಾಮಿ, ಹರದನಹಳ್ಳಿ ಮಂಜಪ್ಪ, ಕಾಂಗ್ರೆಸ್ ಸೇವಾದಳ ಸಾ.ಮಾ.ಯೋಗೇಶ್, ಕಾಂಗ್ರೆಸ್ ಮುಖಂಡರಾದ ಸಂದೇಶ್, ಜಯಂತ್, ಗಂಧನಹಳ್ಳಿ ವೆಂಕಟೇಶ್, ಸಿ.ಪಿ.ರಮೇಶ್, ಕೆ.ಪಿ.ಯೋಗೇಶ್, ಜಿ.ಆರ್.ರಾಮೇಗೌಡ, ಜಯರಾಮೇಗೌಡ, ಮಿರ್ಲೆ ನಂದೀಶ್, ಕಲ್ಲಹಳ್ಳಿ ಶ್ರೀನಿವಾಸ್, ತಿಪ್ಪೂರು ಮಹದೇವನಾಯಕ, ವಿವಿದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎಂ.ಜೆ.ರಮೇಶ್, ಎಂ.ಎಸ್.ಮಹದೇವ್, ಉದಯ್ ಶಂಕರ್, ತಾ.ಕಾಂಗ್ರೆಸ್ ವಕ್ತಾರ ಜಾಬೀರ್, ಹಿರಿಯ ಕಾಂಗ್ರೆಸ್ ಮುಖಂಡ ವಕೀಲ ಕೃಷ್ಣ ಅರಸ್, ಗೀತಾಮಹೇಶ್ ಇದ್ದರು.

ಮಂಡ್ಯ ಲೋಕಸಭೆ ಮೈತ್ರಿ ಅಭ್ಯರ್ಥಿ ಹೆಚ್.ಡಿ ಕುಮಾರಸ್ವಾಮಿಯನ್ನ ಸೋಲಿಸಿ ಮತ್ತೆ ಚನ್ನಪಟ್ಟಣಕ್ಕೆ ವಾಪಸ್ ಕಳುಹಿಸಿ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ಕರೆ ನೀಡಿದರು.

ಇಂದು ಮೈಸೂರು ಜಿಲ್ಲೆಯ ಕೆಆರ್ ಮಾತನಾಡಿದ ಡಿಸಿಎಂ ಡಿ.ಕೆ ಶಿವಕುಮಾರ್, ‘ನಾವು ನಿನ್ನ ಬೆನ್ನಿಗೆ ಚೂರಿ ಹಾಕಿದ್ವಾ..? ‘ನನ್ನ ಜಮೀನಿನಲ್ಲಿ ಕಲ್ಲು ಒಡೆಯೋಕೆ ಇವನ ಅನುಮತಿ ಕೇಳಬೇಕಾ? ಎಂದು ಏಕವಚನದಲ್ಲೇ ಹೆಚ್.ಡಿಕೆ ವಿರುದ್ಧ ವಾಗ್ದಾಳಿ ನಡೆಸಿದರು.ಜೆಡಿಎಸ್ ಈಗ ಎ ಟೀಂ, ಬಿ ಟೀಂ ಅಲ್ಲ ಈಗ ಬಿಜೆಪಿ ಜೆಡಿಎಸ್ ಪಾರ್ಟಿ ನರ್ಸ್ ಆಗಿದ್ದಾರೆ. ಮಂಡ್ಯದಲ್ಲಿ ಸ್ಟಾರ್ ಚಂದ್ರು ಅಲ್ಲ ಅಭ್ಯರ್ಥಿ, ಸಿದ್ದರಾಮಯ್ಯ, ಡಿಕೆ ಅಭ್ಯರ್ಥಿ. ಕಾಂಗ್ರೆಸ್ ಪಕ್ಷ ಒಂದು ಜಾತಿ, ಧರ್ಮದ ಮೇಲೆ ನಿಂತಿಲ್ಲ. ಮೋದಿ ಅವರಿಗೆ 15 ಲಕ್ಷ ಹಣ ಹಾಕುತ್ತೇನೆ ಅಂದಿದ್ದರು. ಯಾರಿಗಾದರೂ ಬಂತಾ?, ಆದಾಯ ಡಬಲ್ ಆಯ್ತಾ ಅಥವಾ ಯುವಕರಿಗೆ ಸರ್ಕಾರಿ ಕೆಲಸ ಸಿಕ್ತಾ?. ಮತ್ತೆ ಏಕೆ ಪ್ರಧಾನಿ ಮೋದಿಗೆ ವೋಟ್ ಕೇಳುವುದಕ್ಕೆ ಬರುತ್ತಿದ್ದಾರೆ ಎಂದು ಪ್ರಶ್ನಿಸಿದರು.

RELATED ARTICLES
- Advertisment -
Google search engine

Most Popular