ಮದ್ದೂರು: ತಾಲೂಕಿನ ವೈದ್ಯನಾಥಪುರ ಗ್ರಾಮದ ಶ್ಯಾಮ್ ಸುಂದರ್ ಎಂಬುವರ ಮನೆಗೆ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ತಗುಲಿ ಹೆಂಚಿನ ಮನೆ ಸುಮಾರು ಅರ್ಧದಷ್ಟು ಬೆಂಕಿಗಾಹುತಿಯಾಗಿದೆ.
ಮನೆಯಲ್ಲಿದ್ದ ಅಪಾರ ಪ್ರಮಾಣದ ಬೆಳೆಬಾಳುವ ವಸ್ತುಗಳು ನಾಶವಾಗಿದ್ದು, ಸುಮಾರು ಎಂಟು ಲಕ್ಷಕ್ಕೂ ಅಧಿಕ ನಷ್ಟ ಉಂಟಾಗಿದೆ.

ವಿಷಯ ತಿಳಿದ ಮಾಜಿ ಸಚಿವ ಡಿಸಿ ತಮ್ಮಣ್ಣ ಸ್ಥಳಕ್ಕೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.
ಈ ವೇಳೆ ಮುಖಂಡ ಅಪ್ಪು ಪಿ ಗೌಡ, ಮಾದನಾಯಕನಹಳ್ಳಿ ರಾಜಣ್ಣ ಹಾಜರಿದ್ದರು.