ಮೈಸೂರು: ನಾಯಕ ಸಮಾಜದವರು ಮೈಸೂರು-ಕೊಡಗು ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎಂ. ಲಕ್ಷ್ಷ್ಷ್ಮಣ್‌ರವರನ್ನು ಬೆಂಬಲಿಸಬೇಕೆಂದು ಹೆಚ್.ಡಿ. ಕೋಟೆ ಕ್ಷೇತ್ರದ ಶಾಸಕ ಅನಿಲ್ ಚಿಕ್ಕಮಾದು ಮನವಿ ಮಾಡಿದರು.
ಚಾಮುಂಡೇಶ್ವರಿ ಕ್ಷೇತ್ರದ ಇಲವಾಲ, ರಮ್ಮನಹಳ್ಳಿ, ಸಾಗರಕಟ್ಟೆ, ರಾಮನಹಳ್ಳಿ, ಕುಮಾರಬೀಡು, ಕಡಕೊಳ, ಸಿಂಧುವಳ್ಳಿ, ಟಿ. ಕಾಟೂರು, ಉದ್ಬೂರು ಗ್ರಾಮಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎಂ. ಲಕ್ಷ್ಮಣ್ ಪರವಾಗಿ ಮತ ಯಾಚಿಸಿ ಮಾತನಾಡಿದ ಅವರು ಮೈಸೂರು ಭಾಗದ ನಾಯಕ ಸಮಾಜದ ಪರ್ಯಾಯಪದ ಪರಿವಾರವನ್ನು ಎಸ್ಟಿಗೆ ಸೇರಿಸಲು ೨೦೧೪ರಲ್ಲಿ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯರವರು ಕೇಂದ್ರಕ್ಕೆ ಶಿಫಾರಸ್ಸು ಮಾಡಿ ಕಳುಹಿಸಿದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ಪರಿವಾರವನ್ನು ಎಸ್ಟಿಗೆ ಸೇರಿಸಿತು.
ಮೈಸೂರು ಭಾಗದ ಪರಿವಾರ ಸಮಸ್ಯೆಯನ್ನು ಸಹ ಬಗೆಹರಿಸಿದ್ದಾರೆ. ವಿಧಾನಸೌಧದ ಬಳಿ ವಾಲ್ಮೀಕಿ ಪ್ರತಿಮೆ ನಿರ್ಮಿಸಿ ಸಾಮಾಜಿಕ ನ್ಯಾಯ ನೀಡಿದ್ದಾರೆ. ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿದ್ದ ಎಲ್ಲಾ ಸಾಲಗಳನ್ನು ಮನ್ನಾ ಮಾಡಿದ್ದಾರೆ. ಯುವಕರು ಸ್ವಯಂ ಉದ್ಯಮಿಗಳಾಗಲು ಶೇ. ೭೫ ಸಬ್ಸಿಡಿಯನ್ನು ನೀಡಿ ಕೈಗಾರಿಕೆಗಳನ್ನು ಪ್ರಾರಂಭಿಸಲು ಭೂಮಿ ನೀಡುತ್ತಿದ್ದಾರೆ. ಬಿಜೆಪಿಯವರು ಬಿಜೆಪಿ ಕಛೇರಿಯಲ್ಲಿದ್ದ ವಾಲ್ಮೀಕಿ ಮತ್ತು ಅಂಬೇಡ್ಕರ್ ಫೋಟೊಗಳನ್ನು ತೆಗೆದು ಹಾಕಿ ದ್ರೋಹ ಬಗೆದಿದ್ದಾರೆ. ಸಿದ್ದರಾಮಯ್ಯರವರು ಕೊಟ್ಟ ೫ ಗ್ಯಾರಂಟಿಗಳಿಂದ ಜನರು ನೆಮ್ಮದಿಯಿಂದ ಇದ್ದಾರೆ. ಆದ್ದರಿಂದ ಸಿದ್ದರಾಮಯ್ಯರವರ ಕೈಬಲಪಡಿಸಲು ಕಾಂಗ್ರೆಸ್ ಅಭ್ಯರ್ಥಿ ಎಂ. ಲಕ್ಷ್ಮಣ್‌ರವರಿಗೆ ಮತ ನೀಡಿ ಗೆಲ್ಲಿಸಬೇಕೆಂದು ಮನವಿ ಮಾಡಿದರು.
ಸಭೆಯಲ್ಲಿ ಜಿಲ್ಲಾ ಗ್ಯಾರಂಟಿ ಸಮಿತಿಯ ಅಧ್ಯಕ್ಷ ಅರುಣ್‌ಕುಮಾರ್, ಬೀರಿಹುಂಡಿ ಬಸವಣ್ಣ, ದೇವರಾಜ್ ಟಿ. ಕಾಟೂರು, ಕೆಂಪನಾಯಕ, ಕೆ.ಎಸ್. ಕರೀಗೌಡ, ದ್ಯಾವಪ್ಪನಾಯಕ, ಸಿದ್ದಯ್ಯ, ಮಾದೇಗೌಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ. ಗುರುಸ್ವಾಮಿ, ಜಯರಾಮೇಗೌಡ, ಎಂ. ಸೋಮಣ್ಣ, ಸಿದ್ದರಾಜು, ಪರಿಶಿವಮೂರ್ತಿ, ಕುಮಾರ್, ರವಿ, ಸುರೇಶ್ ಹಾಜರಿದ್ದರು.