Monday, April 21, 2025
Google search engine

Homeರಾಜ್ಯಸುದ್ದಿಜಾಲಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಹೆಚ್ .ಡಿ ದೇವೆಗೌಡ ಡಿ.ಕೆ ಶಿವಕುಮಾರ್ ಭರ್ಜರಿ ಪ್ರಚಾರ

ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಹೆಚ್ .ಡಿ ದೇವೆಗೌಡ ಡಿ.ಕೆ ಶಿವಕುಮಾರ್ ಭರ್ಜರಿ ಪ್ರಚಾರ


ರಾಮನಗರ : ಕರ್ನಾಟಕದಲ್ಲಿ ಮೊದಲ ಹಂತದ ಮತದಾನ ಪ್ರಕ್ರಿಯೆ ಆರಂಭವಾಗಲು ಕೆಲವೇ ದಿನ ಬಾಕಿ ಉಳಿದಿದ್ದು ಇಂದು ಮಂಗಳವಾರ ಹೈವೊಲ್ಟೇಜ್ ಕಣವಾಗಿರುವ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಡಿಸಿಎಂ ಡಿ ಕೆ ಶಿವಕುಮಾರ್ ಹಾಗೂ ಹೆಚ್ ಡಿ ದೇವೆಗೌಡ ತಮ್ಮ ಅಭ್ಯರ್ಥಿಗಳ ಪರ ಮತಬೇಟೆ ನಡೆಸಿದ್ದಾರೆ.

ರಾಮನಗರದಲ್ಲಿ ಬಸ್ ಏರಿ ಭರ್ಜರಿ ರೋಡ್ ಶೋ ನಡೆಸಿದ ಡಿಸಿಎಂ ಡಿ ಕೆ ಶಿವಕುಮಾರ್, ನಿಮ್ಮ ಸಂಸದ ಡಿ.ಕೆ ಸುರೇಶ್ ಹೋರಾಟದಿಂದ ಕೇಂದ್ರ ಸರ್ಕಾರ ಬರ ಪರಿಹಾರ ನೀಡಲು ಒಪ್ಪಿಗೆ ಸೂಚಿಸಿದೆ. ಬಿಜೆಪಿ ಸರ್ಕಾರ , ಪ್ರಧಾನಿ ಮೋದಿ ಕೊಟ್ಟ ಮಾತನ್ನು ಉಳಿಸಿಕೊಂಡಿಲ್ಲ, ನಮ್ಮ ರೈತರ ಆದಾಯ ದುಪ್ಪಟ್ಟಾಗಿಲ್ಲ , ೧೫ ಲಕ್ಷ ಅಕೌಂಟ್‌ಗೆ ಹಾಕಿಲ್ಲ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು. ನಮ್ಮ ನೀರು ನಮ್ಮ ಹಕ್ಕು ಎಂದು ಮೇಕೆದಾಟಿಗಾಗಿ ಹೋರಾಟ ಮಾಡಿದ್ದೆವು ಆದರೆ ಅಗ ಮಣ್ಣಿನ ಮಕ್ಕಳು ಬರಲಿಲ್ಲ ಕುಮಾರಸ್ವಾಮಿ, ಹೆಚ್‌ಡಿಡಿ ಬರಲಿಲ್ಲ , ಅವರಿಗೆ ಮುಖ್ಯಮಂತ್ರಿ ಸ್ಥಾನ, ಪ್ರಧಾನಿ ಸ್ಥಾನ ಎಲ್ಲಾ ಕೊಟ್ಟಿದ್ದೇವು ಅಧಿಕಾರ ಕೊಟ್ಟಾಗ ಏನೂ ಮಾಡಿಲ್ಲ , ಬಿಜೆಪಿ ಜೆಡಿಎಸ್ ಕಾರ್ಯಕರ್ತರೇ ಮೋಸ ಹೋಗಬೇಡಿಕಾಂಗ್ರೆಸ್ ಬೆಂಬಲಿಸಿ, ಡಿ ಕೆ ಸುರೇಶ್ ಅವರನ್ನು ಗೆಲ್ಲಿಸಿ ಎಂದು ಡಿ ಕೆ ಸುರೇಶ್ ಹೇಳಿದ್ದಾರೆ.

ಇನ್ನೊಂದೆಡೆ ಹಾರೋಹಳ್ಳಿಯ ಮರಳವಾಡಿಯಲ್ಲಿ ತಮ್ಮ ಅಭ್ಯರ್ಥಿ ಡಾ.ಸಿ ಎನ್ ಮಂಜುನಾಥ್ ಪರ ಪ್ರಚಾರ ನಡೆಸಿದ ದೇವೆಗೌಡರು, ಈ ಕ್ಷೇತ್ರದಲ್ಲಿ ಡಿ ಕೆ ಸುರೇಶ್ಗೆ ಸೆಡ್ಡು ಹೊಡೆಯಬೇಕು ಯಾರಿಗೂ ಹೆದರಬೇಡಿ ಅವರನ್ನು ಸೋಲಿಸಬೇಕು ಎಂದೇ ಪ್ರಧಾನಿ ಮೋದಿ ಒತ್ತಾಯದ ಮೇರೆಗೆ ಮಂಜುನಾಥ್ ಅವರನ್ನು ಕಣಕ್ಕಿಳಿಸಿದ್ದೇವೆ ಅವರನ್ನು ಗೆಲ್ಲಿಸಿ ಎಂದು ದೇವೆಗೌಡರು ಹೇಳಿದ್ದಾರೆ.

ದೇಶದಲ್ಲಿ ೨೫ ಸಾವಿರ ಕೋಟಿ ರೂ ಸಾಲ ಮನ್ನ ಮಾಡಿದ ಏಕೈಕ ಮುಖ್ಯಮಂತ್ರಿ ಹೆಚ್ ಡಿ ಕುಮರಸ್ವಾಮಿ, ಕೇಂದ್ರದಲ್ಲಿ ಹೆಚ್‌ಡಿಕೆ ಸೇವೆ ಬಳಸಿಕೊಳ್ಳಲು ಪ್ರಧಾನಿ ಆಸಕ್ತಿ ಹೊಂದಿದ್ದಾರೆ . ಹೀಗಾಗಿ ಮಂಡ್ಯದಿಂದ ಅವರು ಸ್ಪರ್ಧಿಸುತ್ತಿದ್ದಾರೆ ಎಂದು ಹೆಚ್‌ಡಿಡಿ ಪ್ರಚಾರದ ವೇಳೆ ಹೇಳಿದ್ದಾರೆ.

RELATED ARTICLES
- Advertisment -
Google search engine

Most Popular