Sunday, April 20, 2025
Google search engine

Homeಸ್ಥಳೀಯಜೆಎಸ್‌ಎಸ್ ಆಸ್ಪತ್ರೆಯಲ್ಲಿ ವಿಶೇಷ ಪ್ರಾಮಾಣಿಕ ಗ್ರಂಥಾಲಯ ಉದ್ಘಾಟನೆ

ಜೆಎಸ್‌ಎಸ್ ಆಸ್ಪತ್ರೆಯಲ್ಲಿ ವಿಶೇಷ ಪ್ರಾಮಾಣಿಕ ಗ್ರಂಥಾಲಯ ಉದ್ಘಾಟನೆ

ಮೈಸೂರು: ಜೆಎಸ್‌ಎಸ್ ಆಸ್ಪತ್ರೆಯಲ್ಲಿ ಮೈಂಡ್ಸ್ ಯುನೈಟೆಡ್ ಟ್ರಸ್ಟ್ ಮತ್ತು ಇನ್ಫೋಸಿಸ್ ಪ್ರತಿಷ್ಠಾನದ ಸಹಕಾರದೊಂದಿಗೆ ಸ್ಥಾಪಿಸಿರುವ ವಿಶೇಷ ಪ್ರಾಮಾಣಿಕ ಗ್ರಂಥಾಲಯವನ್ನು ಪದ್ಮಶ್ರೀ ಪುರಸ್ಕೃತರು ಮತ್ತು ಬೆಂಗಳೂರು ನಿಮ್ಹಾನ್ಸ್ ಆಸ್ಪತ್ರೆಯ ನಿವೃತ್ತ ಪ್ರಾಧ್ಯಾಪಕ ಡಾ. ಸಿ.ಆರ್. ಚಂದ್ರಶೇಖರ್‌ರವರು ಉದ್ಘಾಟಿಸಿ, ವಿಶ್ವ ಆರೋಗ್ಯ ದಿನದ ಪ್ರಯುಕ್ತ ನನ್ನ ಆರೋಗ್ಯ ನನ್ನ ಹಕ್ಕು ಕುರಿತು ಮಾತನಾಡಿದರು.

ಆರೋಗ್ಯ ಸೌಲಭ್ಯಗಳಲ್ಲಿ ರೋಗಿಗಳ ಸೇವೆಯು ಪ್ರಮುಖವಾದುದು. ನಿತ್ಯವೂ ಸಾವಿರಾರು ರೋಗಿಗಳು ಮತ್ತು ಅವರ ಕುಟುಂಬದ ಸದಸ್ಯರುಗಳು ಚಿಕಿತ್ಸೆಯನ್ನು ಪಡೆಯಲು ಆಸ್ಪತ್ರೆಗೆ ಭೇಟಿ ನೀಡುತ್ತಾರೆ. ಕೆಲವು ಸಂದರ್ಭಗಳಲ್ಲಿ ಹೆಚ್ಚಿನ ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಾಗುತ್ತಾರೆ. ಹೀಗೆ ಜನರು ಸಾಕಷ್ಟು ಸಮಯವನ್ನು ಆಸ್ಪತ್ರೆಗಳಲ್ಲಿ ಕಳೆಯುತ್ತಾರೆ. ಮನುಷ್ಯನಿಗೆ ಸಮಯವು ಅತ್ಯಂತ ಉಪಯುಕ್ತವಾದುದು. ಅದನ್ನು ಸಾಧ್ಯವಾದಷ್ಟೂ ಜ್ಞಾನಾರ್ಜನೆ ಮಾಡುತ್ತಾ ಸದುಪಯೋಗಪಡಿಸಿಕೊಳ್ಳಬೇಕು. ಜೆಎಸ್‌ಎಸ್ ಆಸ್ಪತ್ರೆಗೆ ಚಿಕಿತ್ಸೆಗೆ ಭೇಟಿ ನೀಡುವ ರೋಗಿಗಳು ಮತ್ತು ಅವರ ಕುಟುಂಬದ ಸದಸ್ಯರುಗಳಿಗೆ ಜ್ಞಾನಾರ್ಜನೆ ಮತ್ತು ಸಮಯದ ಸದುಪಯೋಗಪಡಿಸಿಕೊಳ್ಳಲು ಹೆಚ್ಚಿನ ಅನುಕೂಲವಾಗುವಂತೆ ಈ ವಿಶೇಷ ಪ್ರಾಮಾಣಿಕ ಗ್ರಂಥಾಲಯವನ್ನು ಸ್ಥಾಪಿಸಲಾಗಿದೆ.

ಈ ಗ್ರಂಥಾಲಯದಲ್ಲಿ ಕನ್ನಡ ಮತ್ತು ಇಂಗ್ಲೀಷ್ ಭಾಷೆಯ ಸಾಹಿತ್ಯಕ, ಆಧ್ಯಾತ್ಮಿಕ ಮತ್ತು ಆರೋಗ್ಯಕ್ಕೆ ಸಂಬಂಧಿಸಿದ ಮಾಹಿತಿಗಳುಳ್ಳ ಪುಸ್ತಕಗಳು ಲಭ್ಯವಿವೆ. ಇದು ಸೋಮವಾರದಿಂದ ಶನಿವಾರದವರೆಗೆ ಬೆಳಗ್ಗೆ ೯ರಿಂದ ಸಂಜೆ ೪ರವರೆಗೆ ಕಾರ್ಯನಿರ್ವಹಿಸುತ್ತದೆ. ಹೊರರೋಗಿ ಮತ್ತು ಒಳರೋಗಿಗಳು, ಅವರ ಕುಟುಂಬದ ಸದಸ್ಯರುಗಳು ಯಾವುದೇ ಪುಸ್ತಕವನ್ನು ಕನಿಷ್ಟ ವೆಚ್ಚದಲ್ಲಿ ಖರೀದಿಸಬಹುದು ಅಥವಾ ಎರವಲು ಪಡೆದು ಓದಿ ಮರಳಿಸಬಹುದು. ಜೆಎಸ್‌ಎಸ್ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಡಾ. ಹೆಚ್. ಬಸವನಗೌಡಪ್ಪ, ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಸಿ.ಪಿ. ಮಧು, ಮನೋವೈದ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಎಂ. ಕಿಶೋರ್ ಹಾಗೂ ವಿಭಾಗದ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಮೈಸೂರು ಜೆಎಸ್‌ಎಸ್ ಆಸ್ಪತ್ರೆಯಲ್ಲಿ ಮೈಂಡ್ಸ್ ಯುನೈಟೆಡ್ ಟ್ರಸ್ಟ್ ಮತ್ತು ಇನ್ಫೋಸಿಸ್ ಪ್ರತಿಷ್ಠಾನದ ಸಹಕಾರದೊಂದಿಗೆ ಸ್ಥಾಪಿಸಿರುವ ವಿಶೇಷ ಪ್ರಾಮಾಣಿಕ ಗ್ರಂಥಾಲಯವನ್ನು ಪದ್ಮಶ್ರೀ ಪುರಸ್ಕೃತರು ಮತ್ತು ಬೆಂಗಳೂರು ನಿಮ್ಹಾನ್ಸ್ ಆಸ್ಪತ್ರೆಯ ನಿವೃತ್ತ ಪ್ರಾಧ್ಯಾಪಕ ಡಾ. ಸಿ.ಆರ್. ಚಂದ್ರಶೇಖರ್‌ರವರು ಉದ್ಘಾಟಿಸಿದರು. ಡಾ. ಟಿ.ಎಸ್. ಸತ್ಯನಾರಾಯಣರಾವ್, ಡಾ. ಟಿ..ಎಂ. ಪ್ರಮೋದಕುಮಾರ್, ಡಾ. ಎಂ. ಕಿಶೋರ್, ಡಾ. ಸಿ.ಪಿ. ಮಧು ಮತ್ತು ಡಾ. ಹೆಚ್. ಬಸವನಗೌಡಪ್ಪ ಮೊದಲಾದವರುಗಳಿದ್ದಾರೆ.

RELATED ARTICLES
- Advertisment -
Google search engine

Most Popular