Monday, April 21, 2025
Google search engine

Homeಅಪರಾಧಬಳ್ಳಾರಿ: ಸೂಕ್ತ ದಾಖಲೆ ಇಲ್ಲದ 23 ಲಕ್ಷ ಹಣ, ಚಿನ್ನ, ಬೆಳ್ಳಿಯ ವಸ್ತುಗಳು ವಶಕ್ಕೆ

ಬಳ್ಳಾರಿ: ಸೂಕ್ತ ದಾಖಲೆ ಇಲ್ಲದ 23 ಲಕ್ಷ ಹಣ, ಚಿನ್ನ, ಬೆಳ್ಳಿಯ ವಸ್ತುಗಳು ವಶಕ್ಕೆ

ಬಳ್ಳಾರಿ: ಬಳ್ಳಾರಿಯ ಆಭರಣದಂಗಡಿ ಮಾಲೀಕರೊಬ್ಬರ ಮನೆ ಮೇಲೆ ಮಂಗಳವಾರ ರಾತ್ರಿ ದಾಳಿ ನಡೆಸಿರುವ ಪೊಲೀಸರು  23 ಲಕ್ಷ ಹಣ, ಚಿನ್ನ,ಬೆಳ್ಳಿಯ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ.

ಖಚಿತ ಮಾಹಿತಿ ಆಧರಿಸಿ ‘ಚುನ್ನಿಲಾಲ್ ರಾಕೇಶ್ ಕುಮಾರ್ ಷಾ ಜ್ಯೂವೆಲರ್ಸ್’ ಮಾಲೀಕ ಕಮಲೇಶ್ ಜೈನ್ ಅವರ ಕಂಬಳಿ ಬಜಾರ್‌ನ ಮನೆ ಮೇಲೆ ದಾಳಿ ನಡೆಸಲಾಗಿತ್ತು ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ರಂಜಿತ್‌ ಕುಮಾರ್‌ ಬಂಡಾರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮನೆಯಲ್ಲಿ ತಪಾಸಣೆ ನಡೆಸಿದಾಗ ಸೂಕ್ತ ದಾಖಲೆಗಳು ಇಲ್ಲದ ಅಂದಾಜು ₹23,00,000 ನಗದು, 450 ಬಂಗಾರದ ವಸ್ತುಗಳು, 13 ಕೆ.ಜಿ. ಬೆಳ್ಳಿ ಪತ್ತೆಯಾದವು. ಲೋಕಸಭಾ ಚುನಾವಣೆಯಲ್ಲಿ ಇವು ಬಳಕೆಯಾಗುವ ಸಾಧ್ಯತೆಗಳಿದ್ದವು ಎಂದು ಅವರು ತಿಳಿಸಿದ್ದಾರೆ.  ವಶಕ್ಕೆ ಪಡೆದಿರುವ ಹಣ ಮತ್ತು ಚಿನ್ನ,ಬೆಳ್ಳಿಯ ವಸ್ತುಗಳನ್ನು ಮುಂದಿನ ವಿಚಾರಣೆಗಾಗಿ ವಾಣಿಜ್ಯ ತೆರಿಗೆ ಅಧಿಕಾರಿಗಳಿಗೆ ಹಸ್ತಾಂತರಿಸಲಾಗಿದೆ ಎಂದು ಅವರು ಹೇಳಿದ್ದಾರೆ.

RELATED ARTICLES
- Advertisment -
Google search engine

Most Popular