Monday, April 21, 2025
Google search engine

Homeರಾಜ್ಯಸುದ್ದಿಜಾಲಯಶಸ್ವಿ ಚುನಾವಣೆಗೆ ಸಕಲ ಸಿದ್ದತೆ, ಹೆಚ್ಚಿನ ಭದ್ರತೆ: ಚುನಾವಣಾಧಿಕಾರಿ ಕುಮುದಾ ಶರತ್

ಯಶಸ್ವಿ ಚುನಾವಣೆಗೆ ಸಕಲ ಸಿದ್ದತೆ, ಹೆಚ್ಚಿನ ಭದ್ರತೆ: ಚುನಾವಣಾಧಿಕಾರಿ ಕುಮುದಾ ಶರತ್


ವರದಿ: ಎಡತೊರೆ ಮಹೇಶ್

ಎಚ್.ಡಿ. ಕೋಟೆ : ಯಶಸ್ವಿಯಾಗಿ ಚುನಾವಣೆ ನಡೆಸಲು ಸಕಲ ಸಿದ್ದತೆ ಮಾಡಿಕೊಳ್ಳಲಾಗಿದೆ, ಹೆಚ್ಚಿನ ಭದ್ರೆತೆ ಮತ್ತು ತಪಾಸಣೆ ಮಾಡಲಾಗುತ್ತಿದೆ. ಮತಗಟ್ಟೆ ಅಧಿಕಾರಿಗಳಿಗೆ ಎರಡು ಹಂತದ ತರಭೇತಿಯನ್ನು ಮಾಡಲಾಗಿದೆ ಎಂದು ಚುನಾವಣಾಧಿಕಾರಿ ಕುಮುದಾ ಶರತ್ ತಿಳಿಸಿದರು.

ಪಟ್ಟಣದ ಪುರಸಭಾ ಕಚೇರಿಯಲ್ಲಿರುವ ಸಹಾಯಕ ಚುನಾವಣಾಧಿಕಾರಿ ಕಚೇರಿಯಲ್ಲಿ ಬುಧವಾರ ನಡೆದ ಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು. ಎಚ್.ಡಿ. ಕೋಟೆ ವಿಧಾನಸಭಾ ಕ್ಷೇತ್ರದಿಂದ ವ್ಯಾಪ್ತಿಯಲ್ಲಿರುವ ೨೮೨ ಮತಗಟ್ಟೆಗೂ ಬಿಗಿ ಪೊಲೀಸ್ ಭದ್ರತೆ ಮಾಡಲಾಗಿದೆ. ಸಿಪಿಎಂಎಂ ಪೋರ್ಸ್ ಕೂಡ ಬಂದಿದ್ದು ಅವರನ್ನು ಭದ್ರತೆಗೆ ನಿಯೋಜಿಸಲಾಗಿದೆ ಎಂದರು.

ಮತದಾರರನ್ನು ಮನವೊಲಿಸಲು ತಾಲ್ಲೂಕಿನಲ್ಲಿ ೫ ಸಖಿ ಮತಗಟ್ಟೆ, ಯುವ ಮತದಾರರನ್ನು ಸೆಳೆಯಲು ಯುವ ಮತಗಟ್ಟೆ, ಒಂದು ವಿಕಲಚೇತನರ ಮತಗಟ್ಟೆ, ಮೂರು ಮತಗಟ್ಟೆಗಳನ್ನು ಸಾಂಪ್ರದಾಯಿಕ ಮತಗಟ್ಟೆಯನ್ನಾಗಿ ಮತ್ತು ಒಂದು ಮತಗಟ್ಟೆಯನ್ನು ಥೀಮ್ ಮತಗಟ್ಟೆಯಮನತೆ ರೂಪಿಸಲಾಗಿದೆ ಎಂದರು. ಬುಡಕಟ್ಟು ಆದಿವಾಸಿಗಳಿಗಾಗಿ ವಿಶೇಷ ಜಾಗೃತಿಯನ್ನು ಮಾಡಲಾಗಿದ್ದು ಕಳೆದ ಭಾರಿಗಿಂತ ಶೇ ೫ ರಷ್ಟು ಮತದಾನವನ್ನು ಹೆಚ್ಚಿಸುವ ಗುರಿ ಹೊಂದಲಾಗಿದೆ ಎಂದರು. ಗುರುವಾರ ಸಂಜೆಯವರಗೆ ಮತಗಟ್ಟೆಗೆ ಅಧಿಕಾರಿಗಳನ್ನು ಕಳುಹಿಸಲಾಗುವುದು, ಅರಣ್ಯ ವ್ಯಾಪ್ತಿಯಲ್ಲಿ ಅಂದರೆ ಪ್ರಾಣಿಗಳು ಇರುವ ಸ್ಥಳಗಳಲ್ಲಿ ಅರಣ್ಯ ಸಿಬ್ಬಂದಿಗಳನ್ನು ನಿಯೋಜನೆ ಮಾಡಲಾಗಿದೆ ಎಂದರು.

ಎಚ್.ಡಿ. ಕೋಟೆ ಠಾಣೆಯ ಇನ್ಸ್‌ಪೆಕ್ಟರ್ ಶಬ್ಬೀರ್ ಹುಸೇನ್ ಮಾತನಾಡಿ ಮತದಾರರು ತಮ್ಮ ಮೊಬೈಲ್‌ಗಳನ್ನು ಮತಗಟ್ಟೆಗೆ ತೆಗೆದುಕೊಂಡು ಹೋಗಲು ಅವಕಾಶವಿರುವುದಿಲ್ಲ, ಆದ್ದರಿಂದ ಮನೆಯಲ್ಲೇ ಬಿಟ್ಟು ಹೋಗುವಂತೆ ಮನವರಿಕೆ ಮಾಡಲಾಗಿದೆ, ಒಂದು ವೇಳೆ ತೆಗೆದುಕೊಂಡು ಹೋದಲ್ಲಿ ಮತಗಟ್ಟೆ ಹೊರಗೆ ಅಲ್ಲಿನ ನಮ್ಮ ಸಿಬ್ಬಂದಿಗಳಿಗೆ ಕೊಟ್ಟು ಹೋಗಬೇಕು, ಮತದಾನದ ಬಳಿಕ ಮತ್ತೆ ತಮ್ಮ ಪೋನ್‌ಗಳನ್ನು ಪಡೆದುಕೊಂಡು ಹೋಗಬೇಕು ಎಂದರು.

ತಹಸೀಲ್ದಾರ್ ಶ್ರೀನಿವಾಸ್ ಮಾತನಾಡಿ ಸರಗೂರು ಮತ್ತು ಎಚ್.ಡಿ. ಕೋಟೆ ತಾಲ್ಲೂಕಿನಲ್ಲಿ ೨೨೮೪೧೩ ಮಂದಿ ಇದ್ದು, ೫೧೪೮ ಯುವ ಮತದಾರರು ಇದ್ದು ಎಲ್ಲರೂ ತಪ್ಪದೇ ಮತದಾನವನ್ನು ಮಾಡುವಂತೆ ಕೋರಿದರು. ಮತಯಂತ್ರಗಳಲ್ಲಿ ತಾಂತ್ರಿಕ ತೊಂದರೆ ಉಂಟಾದಲ್ಲಿ ಅದನ್ನು ಸರಿಪಡಿಸಲು ಸಂಬಂಧಪಟ್ಟ ಇಂಜಿನಿಯರ್ ಗಳು ಸದಾ ಸಿದ್ದರಿರುತ್ತಾರೆ ಎಂದು ತಿಳಿಸಿದರು. ಗೋಷ್ಠಿಯಲ್ಲಿ ಸರಗೂರು ತಹಸೀಲ್ದಾರ್ ಕೃಷ್ಣಮೂರ್ತಿ ಹಾಜರಿದ್ದರು.

ಸಖಿ ಮತಗಟ್ಟೆಗಳ ವಿವರ : ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಅಂತರಸಂತೆ. ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಕೊಳಗಾಲ. ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ, ಎಚ್ ಡಿ ಕೋಟೆ ಪಟ್ಟಣ. ಜೆಎಸ್‌ಎಸ್ ಹಿರಿಯ ಪ್ರಾಥಮಿಕ ಶಾಲೆ, ಸರಗೂರು. ಪಿಡಬ್ಲ್ಯೂಡಿ ಕಚೇರಿ, ಹೆಚ್‌ಡಿ ಕೋಟೆ ಪಟ್ಟಣ. ಯುವ ಮತಗಟ್ಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ನಂಜನಾಯಕನಹಳ್ಳಿ.

ವಿಕಲ ಚೇತನರ ಮತಗಟ್ಟೆ: ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಹೈರಿಗೆ. ಸಾಂಪ್ರದಾಯಿಕ ಮತಗಟ್ಟೆಗಳು ಆಶ್ರಮ ಶಾಲೆ, ಭೀಮನಹಳ್ಳಿ. ಆಶ್ರಮ ಶಾಲೆ, ಪೆಂಜಹಳ್ಳಿ. ಆಶ್ರಮ ಶಾಲೆ, ಬಸವನಗಿರಿಹಾಡಿ. ಥೀಮ್ ಬೇಸ್ ಮತಗಟ್ಟೆ ಕಾಕನಕೋಟೆ ಅರಣ್ಯ ಇಲಾಖೆ ಕಚೇರಿ, ಬಳ್ಳೆ ಹಾಡಿ.

RELATED ARTICLES
- Advertisment -
Google search engine

Most Popular