ಚಾಮರಾಜನಗರ: ನಗರದ ಜೈ ಹಿಂದ್ ಕಟ್ಟೆಯಲ್ಲಿ ಋಗ್ವೇದಿ ಯೂತ್ ಕ್ಲಬ್ ಮತ್ತು ಜೈ ಹಿಂದ್ ಪ್ರತಿಷ್ಠಾನದ ವತಿಯಿಂದ ಪದ್ಮಭೂಷಣ ಕರ್ನಾಟಕ ರತ್ನ ಡಾ ರಾಜಕುಮಾರ್ ಅವರ ಜಯಂತಿಯನ್ನು ಸರಳವಾಗಿ ಆಚರಿಸಲಾಯಿತು.
ಡಾಕ್ಟರ್ ರಾಜಕುಮಾರ್ ಅವರ ಭಾವಚಿತ್ರಕ್ಕೆ ಪುಷ್ಪ ಅರ್ಪಿಸಿ ಮಾತನಾಡಿದ ರಾಷ್ಟ್ರ ಯುವ ಪ್ರಶಸ್ತಿ ಪುರಸ್ಕೃತ ಸುರೇಶ್ ಎನ್ ಋಗ್ವೇದಿ ಮಾತನಾಡಿ ಡಾ. ರಾಜಕುಮಾರ್ ಕನ್ನಡ ಚಲನಚಿತ್ರ ರಂಗದ ಮೂಲಕ ಕೋಟ್ಯಾಂತರ ಕನ್ನಡಿಗರ ಹೃದಯದಲ್ಲಿ ಶಾಶ್ವತ ಸ್ಥಾನವನ್ನು ಪಡೆದಿದ್ದಾರೆ. ರಾಜಕುಮಾರ್ ಅವರ ಚಲನಚಿತ್ರದ ಮೂಲಕ ಮಾನವೀಯ ಮೌಲ್ಯಗಳನ್ನು, ಸಾಮಾಜಿಕ ಪೌರಾಣಿಕ, ಆಧ್ಯಾತ್ಮಿಕ ಹಾಗೂ ಐತಿಹಾಸಿಕ ಮಹಾಪುರುಷರ ಚಿತ್ರಗಳ ಮೂಲಕ ಪ್ರತಿಯೊಬ್ಬರಲ್ಲಿಯೂ ಕೂಡ ಪರಿಣಾಮಕಾರಿಯಾಗಿ ಪ್ರಭಾವ ಬೀರಿ ಅವರ ನಟನೆ ಮತ್ತು ಜೀವನ ಶೈಲಿ ಎರಡು ಏಕಮುಖವಾಗಿ ಜನರಲ್ಲಿ ಹಸಿರಾಗಿ ಉಳಿದಿದೆ. ಚಾಮರಾಜನಗರ ಡಾ. ರಾಜಕುಮಾರ್ ಅವರಿಗೆ ಸ್ವರ್ಗದ ಬಾಗಿಲಾಗಿತ್ತು. ಗಾಜನೂರು ಚಾಮರಾಜನಗರ ಅವರಿಗೆ ಪ್ರಾಣ. ಡಾ.ರಾಜಕುಮಾರ್ ಅಂತಹ ಪ್ರತಿಭಾವಂತ ಹಾಗೂ ಜೀವನ ಮೌಲ್ಯದ ವ್ಯಕ್ತಿಯನ್ನು ಪಡೆದ ಚಾಮರಾಜನಗರ ಜಿಲ್ಲೆ, ನಿಜಕ್ಕೂ ಪುಣ್ಯ ಜಿಲ್ಲೆ. ರಾಜಕುಮಾರ ಅವರ ಚಲನಚಿತ್ರಗಳ ಮೂಲಕ ಸಂದೇಶಗಳನ್ನು ನೀಡಿ ಬದುಕಿಗೆ ಅರ್ಥ ತುಂಬಿದವರು ರಾಜಕುಮಾರ್ ಎಂದು ತಿಳಿಸಿದರು.
ಕವಯತ್ರಿ ಮಂಜುಳಾ ರವರು ಮಾತನಾಡಿ ಕನ್ನಡ ಚಲನ ಚಿತ್ರಗಳ ಮೂಲಕ ಕನ್ನಡಿಗರ ಮನಸ್ಸು ಗೆದ್ದವರು. ಕನ್ನಡ ನಾಡು ನುಡಿ, ಜಲ ಭಾಷೆ, ಸಂಸ್ಕೃತಿಯನ್ನು ಉಳಿಸಿ ಬೆಳೆಸಿದವರು. ರಾಜಕುಮಾರ ಅವರ ಸರಳ ಆದರ್ಶ ಬದುಕು ಎಲ್ಲರಿಗೂ ಮಾದರಿ. ಋಗ್ವೇದಿ ಯೂತ್ ಕ್ಲಬ್ ಜೈಹಿಂದ್ ಕಟ್ಟೆಯಲ್ಲಿ ಎಲ್ಲ ರಾಷ್ಟ್ರ ಪುರುಷರ, ಇತಿಹಾಸ ಮತ್ತು ಸಾಹಿತ್ಯ ,ಕಲೆ, ಸಂಸ್ಕೃತಿಗಾಗಿ ದುಡಿದ ವ್ಯಕ್ತಿಗಳ ಪರಿಚಯ ಮಾಡುವ ಮೂಲಕ ಉತ್ತಮ ಕಾರ್ಯವನ್ನು ಮಾಡುತ್ತಿರುವುದು ಬಹಳ ಸಂತೋಷವೆಂದು ತಿಳಿಸಿದರು.
ಡಾ. ಎಸ್ ಪಿ ಬಾಲಸುಬ್ರಮಣ್ಯ ಗಾನಗಂಧರ್ವ ಕಲಾ ವೇದಿಕೆಯ ಅಧ್ಯಕ್ಷ ಶಿವಣ್ಣ ರವರು ರಾಜ್ ಕುಮಾರ್ ರವರ ಗೀತೆಗಳನ್ನು ಹಾಡಿದರು.
ಕಾರ್ಯಕ್ರಮದಲ್ಲಿ ನಿವೃತ್ತ ಮುಖ್ಯ ಶಿಕ್ಷಕಿ ನಾಗರತ್ನ ,ರಘುನಾಥ್, ರವಿ, ಕುಸುಮಾ ಋಗ್ವೇದಿ, ಶಲ್ವ ಪಿಳ್ಳೆ ಅಯ್ಯಂಗಾರ್, ಶ್ರಾವ್ಯ, ಸುಮನ್,ಇದ್ದರು.