ರಾಮನಗರ: ಲೋಕಸಭಾ ಚುನಾವಣೆಯ ಮತದಾನ ಏ. ೨೬ರ ಶುಕ್ರವಾರ ಬೆಳಿಗ್ಗೆ ೭ ರಿಂದ ಆರಂಭಗೊಳ್ಳಲಿದ್ದು, ಈ ಪ್ರಕ್ರಿಯೆಯಲ್ಲಿ ಮತಗಟ್ಟೆ ಸಿಬ್ಬಂದಿಗಳಿಗೆ ಮತ ಪೆಟ್ಟಿಗೆಗಳು ಹಾಗೂ ಚುನಾವಣಾ ಸಾಮಗ್ರಿಯನ್ನು ವಿತರಿಸುವ ಪ್ರಮುಖ ಘಟ್ಟವಾಗಿರುವ ಮಸ್ಟರಿಂಗ್ ಕಾರ್ಯ ಏ. ೨೫ರ ಗುರುವಾರದಂದು ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅಚ್ಚುಕಟ್ಟಾಗಿ ನೆರವೇರಿದ್ದು, ಮತದಾನ ಕರ್ತವ್ಯಕ್ಕೆ ನಿಯೋಜಿತಗೊಂಡ ಅಧಿಕಾರಿ, ಸಿಬ್ಬಂದಿಗಳು ಮತಗಟ್ಟೆಗಳತ್ತ ತೆರಳಿದರು.
