ಕೋಲ್ಕತ್ತಾ: ಶಿಕ್ಷಕರಿಂದ ಮಾತ್ರವಲ್ಲ ಯಾವುದೇ ಸರ್ಕಾರಿ ನೌಕರರಿಂದ ಬಿಜೆಪಿಗೆ ಒಂದೇ ಒಂದು ವೋಟು ಪಶ್ಚಿಮ ಬಂಗಾಳದಲ್ಲಿ ಬೀಳಲ್ಲ ಎಂದು ಸಿಎಂ ಮಮತಾ ಬ್ಯಾನರ್ಜಿ ವಾಗ್ದಾಳಿ ನಡೆಸಿದ್ದಾರೆ.
ಮಹತ್ವದ ಬೆಳವಣಿಗೆಯೊಂದರಲ್ಲಿ ಪಶ್ಚಿಮ ಬಂಗಾಳದ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಿಗೆ ನೇಮಕಾತಿಗೆ ನಡೆದಿದ್ದ ರಾಜ್ಯ ಮಟ್ಟದ ಆಯ್ಕೆ ಪರೀಕ್ಷೆ-೨೦೧೬ ಅನ್ನು ಅನೂರ್ಜಿತಗೊಳಿಸಿ ಕೋಲ್ಕತ್ತಾ ಹೈಕೋರ್ಟ್ ಇತ್ತೀಚೆಗೆ ಆದೇಶ ಹೊರಡಿಸಿತ್ತು. ಅಲ್ಲದೇ ಈ ಮೂಲಕ ಆಯ್ಕೆ ಮಾಡಲಾದ ೨೫,೭೫೩ ಶಿಕ್ಷಕರ ಹುದ್ದೆಯನ್ನು ವಜಾಗೊಳಿಸುವಂತೆ ಆದೇಶಿಸಿತು.
ಇದಕ್ಕೆ ಪ್ರತಿಕ್ರಿಯಿಸಿ ಮಾತನಾಡಿರುವ ಮಮತಾ ಬ್ಯಾನರ್ಜಿ, ೨೬,೦೦೦ ಶಿಕ್ಷಕರನ್ನ ವಜಾಗೊಳಿಸಿದ್ದು, ಚುನಾವಣಾ ತಂತ್ರಗಾರಿಕೆಯ ಭಾಗ. ಪಶ್ಮಿಮ ಬಂಗಾಳದಲ್ಲಿ ಈ ಬಾರಿ ಶಿಕ್ಷಕರು ಮಾತ್ರವಲ್ಲ ಯಾವುದೇ ಸರ್ಕಾರಿ ನೌಕರರಿಂದಲೂ ಬಿಜೆಪಿ, ಕಾಂಗ್ರೆಸ್, ಸಿಪಿಎಂ ಪಕ್ಷಗಳಿಗೆ ಒಂದೇ ಒಂದು ವೋಟು ಬೀಳಲ್ಲ. ಬಿಜೆಪಿ ನ್ಯಾಯಾಲಯವನ್ನು ಖರೀದಿಸಿದೆ. ಆದ್ರೆ ನನಗೆ ಸುಪ್ರೀಂ ಕೋರ್ಟ್‌ನಿಂದ ನ್ಯಾಯ ಸಿಗುತ್ತದೆ ಎಂಬ ವಿಶ್ವಾಸ ವಿದೆ ಎಂದು ಹೇಳಿದ್ದಾರೆ.