ಮಂಗಳೂರು (ದಕ್ಷಿಣ ಕನ್ನಡ): ಮತದಾನದ ನಂತರ ಇವಿಎಂ ಮತಯಂತ್ರಗಳನ್ನು ಭದ್ರವಾಗಿರುವ ಮಂಗಳೂರಿನ ಸುರತ್ಕಲ್‌ನ ಎನ್‌ಐಟಿಕೆ ಸ್ಟ್ರಾಂಗ್ ರೂಮ್‌ಗೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ, ಮಂಗಳೂರು ನಗರ ಪೊಲೀಸ್ ಆಯುಕ್ತ ಅನುಪಮ್ ಅಗರ್ ವಾಲ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಿಷ್ಯಂತ್ ಸಿ.ಬಿ. ಹಾಗೂ ಚುನಾವಣೆಯ ಪೊಲೀಸ್ ವೀಕ್ಷಕರಾದ ಬಿನಿತಾ ಠಾಕೂರ್ ಅವರು ಇಂದು ಭೇಟಿ ನೀಡಿ, ಅಲ್ಲಿನ ಸಿದ್ಧತೆಗಳನ್ನು ಪರಿಶೀಲಿಸಿದರು.