ಮಂಗಳೂರು(ದಕ್ಷಿಣ ಕನ್ನಡ): ದಕ್ಷಿಣ ಕನ್ನಡ ಲೋಕ ಸಭಾ ಕ್ಷೇತ್ರದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ 1876 ಮತಗಟ್ಟೆಗಳಲ್ಲಿ ಮತದಾನ ಆರಂಭವಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಟ್ಟು 18,18,127 ಮತದಾರರಿದ್ದು, 930928 ಮಹಿಳೆಯರು ಮತ್ತು 887122 ಪುರುಷ ಮತದಾರರಿದ್ದಾರೆ.

ದಕ್ಷಿಣ ಕನ್ನಡದಲ್ಲಿ 72 ಮಾದರಿ ಮತಗಟ್ಟೆಗಳಿವೆ. ಬೆಳ್ತಂಗಡಿ ತಾಲೂಕಿನ ನೆರಿಯ ಬಾಂಜಾರು ಮಲೆ ಸಮುದಾಯ ಭವನದಲ್ಲಿ 111 ಕಡಿಮೆ ಸಂಖ್ಯೆಯ ಮತದಾರರಿರುವ ಮತದಾನ ಕೇಂದ್ರವಾಗಿದೆ.
ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಪರಪ್ಪಾದೆ ದ.ಕ ಜಿ.ಪಂ .ಹಿರಿಯ ಪ್ರಾಥಮಿಕ ಶಾಲೆ ಗರಿಷ್ಟ ಸಂಖ್ಯೆಯ ಮತದಾರರಿರುವ ಕೇಂದ್ರವಾಗಿದೆ.
ಸುರತ್ಕಲ್ ನ ಎನ್ ಐಟಿಕೆಯಲ್ಲಿ ಮತ ಎಣಿಕೆ ಮತ್ತು ಇವಿಎಂಗಳ ಭದ್ರತಾ ಕೊಠಡಿ ವ್ಯವಸ್ಥೆ ಮಾಡಲಾಗಿದೆ.